Advertisement
ಉತ್ತರ ಸ್ಟಾಕ್‌ಹೋಮ್‌ನ ಕೇರ್ ಹೋಮ್‌ನಲ್ಲಿ ರೆಝಾ ಎಂಬವರು ಕೋವಿಡ್‌ಗೆ ಬಲಿಯಾದ ದಿನ ಒಬ್ಬ ವೈದ್ಯನೂ ಅವರನ್ನು ನೋಡಿರಲಿಲ್ಲ. ಆತ ಸಾವಿಗೀಡಾಗುವ ಮುನ್ನ ನೋವು ನಿವಾರಕವನ್ನು ನೀಡಲಾಗಿತ್ತು. ಆದರೆ ಆಮ್ಲಜನಕವನ್ನು ನೀಡಿರಲಿಲ್ಲ. ಸಿಬಂದಿ ಆತನನ್ನು ಆಸ್ಪತ್ರೆಗೆ ಒಯ್ಯುವುದಕ್ಕೆ ಆ್ಯಂಬುಲೆನ್ಸ್ ಅನ್ನು ಕರೆಸಲಿಲ್ಲ ಎಂದು ಕೇರ್‌ಹೋಮ್‌ನ ನರ್ಸ್ ಹೇಳಿದ್ದಾರೆ.
Related Articles
Advertisement
ಕೆಲವರು ತಮ್ಮ ಪ್ರೀತಿಪಾತ್ರರೊಂದಿಗೆ ಇನ್ನೂ ಹಲವು ವರ್ಷಗಳ ಕಾಲ ಜೀವಿಸಬಲ್ಲರಾಗಿದ್ದರು. ಆದರೆ ಅವರನ್ನು ಆಸ್ಪತ್ರೆಗೆ ಕಳುಹಿಸುವುದಕ್ಕೆ ಅನುಮತಿಸದೆ ಈ ಅವಕಾಶದಿಂದ ವಂಚಿಸಲಾಯಿತು.ಅವರು ಉಸಿರಾಡಲಾಗದೆ ಸಾಯುತ್ತಿದ್ದರು. ಅದನ್ನು ಪಕ್ಕದಲ್ಲಿ ಸುಮ್ಮನೆ ನಿಂತು ನೋಡುವುದು ಅತ್ಯಂತ ಅಸಹನೀಯವೆನಿಸುತ್ತಿತ್ತು’ ಎಂದವರು ವ್ಯಥೆ ವ್ಯಕ್ತಪಡಿಸುತ್ತಾರೆ.
ಕೋವಿಡ್-19 ತೀವ್ರರೂಪದಲ್ಲಿ ಹಬ್ಬಿದ್ದ ವೇಳೆ ತಾನು ಅವಧಿ ಮೀರಿ ದುಡಿಯುತ್ತಿದ್ದಾಗಲೂ ಕೋವಿಡ್‌ಗೆ ಸಂಬಂಧಿಸಿ ಹಿರಿಯ ಜೀವಿಗಳಿದ್ದ ಕೇರ್ ಹೋಮ್‌ಗಳಿಂದ ತನಗೆ ಒಂದೇ ಒಂದು ಕರೆ ಬಂದಿರಲಿಲ್ಲವೆಂದು ಹೆಸರು ತಿಳಿಸಲಿಚ್ಛಿಸದ ಸ್ಟಾಕ್‌ಹೋಮ್‌ನ ಇನ್ನೋರ್ವ ಪ್ಯಾರಾಮೆಡಿಕ್ ಹೇಳಿದರು.
ಇನ್ನಷ್ಟು ರೋಗಿಗಳಿಗೆ ಆಸ್ಪತ್ರೆಯ ಚಿಕಿತ್ಸೆ ಲಭ್ಯವಾಗುತ್ತಿದ್ದಲ್ಲಿ ಅಥವಾ ಕೇರ್ ಹೋಮ್ ಸಿಬಂದಿಗೆ ಆಮ್ಲಜನಕವನ್ನು ಪ್ರಯೋಗಿಸುವ ಜವಾಬ್ದಾರಿಯನ್ನು ವಹಿಸುತ್ತಿದ್ದಲ್ಲಿ ಬಹಳಷ್ಟು ಜೀವಗಳು ಉಳಿಯುತ್ತಿದ್ದವು ಎಂದು ಸ್ವೀಡನ್‌ನ ಖಾಸಗಿ ಸಮಾಲೋಚನ ಸಂಸ್ಥೆ ಮಿಕಾಯೆಲ್ ಜಾಲಿದ್ ಹೇಳಿದೆ. “ಯಾವುದೇ ನೆರವಿಲ್ಲದೆ ಶೇ. 20 ಮಂದಿ ಬದುಕುಳಿಯಬಲ್ಲರಾದರೆ ಪೂರಕ ಆಮ್ಲಜನಕದೊಂದಿಗೆ ಅಷ್ಟೇ ಮಂದಿ ಬದುಕುಳಿಯುತ್ತಿದ್ದರೆಂದು ಊಹಿಸಬಹುದಾಗಿದೆ ಎಂದು ಅದು ಬೆಟ್ಟು ಮಾಡಿದೆ.