Advertisement
ತ್ವರಿತ ಕ್ರಮದ ಭಾಗವಾಗಿ ಉಚಿತ ಕೋವಿಡ್ ಪರೀಕ್ಷೆ ಮತ್ತು ಸಾಮೂಹಿಕ ಪರೀಕ್ಷೆಯನ್ನು ಕೊರಿಯಾ ಮಾಡಿತು. ಈ ಮೂಲಕ ವೈರಸ್ ಅನ್ನು ಎದುರಿಸುವಲ್ಲಿ ಅತ್ಯಂತ ಪರಿಣಾಮಕಾರಿಯಾದ ಹೆಜ್ಜೆಯನ್ನು ಇಟ್ಟಿತ್ತು. ಹೆಚ್ಚಿನ ವೇಗಕ್ಕಾಗಿ ದಕ್ಷಿಣ ಕೊರಿಯಾ ತಂತ್ರಜ್ಞಾನವನ್ನೂ ಬಳಸಿ ಕೊಂಡಿತು. ಇದರ ಪರಿಣಾಮ ಸೋಂಕು ಹರಡುವಿಕೆಯ ಸರಪಳಿಯನ್ನು ಕಡಿತಗೊಳಿಸಲು ಸಾಧ್ಯವಾಯಿತು.
ಸೋಂಕಿತ ರೋಗಿಗಳು ತೆಗೆದುಕೊಳ್ಳಲೇ ಬೇಕಾದ ಕ್ರಮಗಳನ್ನು ನಿಯಮಿತವಾಗಿ ಆನ್ ಲೈನ್ ನಲ್ಲಿ ಪ್ರಕಟಿಸಲಾಗುತ್ತದೆ. ವಿದೇಶಗಳಿಂದ ಬಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಸೋಂಕಿನ ಪರೀಕ್ಷೆ ಮಾಡಿಸಬೇಕಿತ್ತು. ಬಳಿಕ ಅಲ್ಲೇ ಈ ಆಪ್ ಅನ್ನು ಡೌನ್ ಲೋಡ್ ಮಾಡಿ ಪ್ರತಿದಿನ ತಮ್ಮ ರೋಗಲಕ್ಷಣಗಳನ್ನು ವರದಿ ಮಾಡುವುದನ್ನು ಕಡ್ಡಾಯ ಗೊಳಿಸಿತ್ತು. ಎಚ್ಚರಿಕೆ
ಕೊರಿಯಾದಲ್ಲಿ ಬಹುತೇಕರಲ್ಲಿ ಅಂದರೆ 10ರಲ್ಲಿ 9 ಮಂದಿಯಲ್ಲಿ ಮೊಬೈಲ್ ಇದೆ. ಮೇಲಿನ ಆಪ್ ಮೂಲಕ ಪಡೆಯಲಾದ ಮಾಹಿತಿಗಳು ಅಧಿಕಾರಿಗಳಿಗೆ ಲಭ್ಯವಾಗುತ್ತಿತ್ತು. ಆ ಆಪ್ ಸೋಂಕಿತರ ಮಾಹಿತಿಯ ಜತೆಗೆ ಅವರ ಲೊಕೇಶನ್ ಅನ್ನು ಟ್ರ್ಯಾಕ್ ಮಾಡುತ್ತಿತ್ತು. ಅವರು ಮನೆಯಿಂದ ಹೊರ ಬರುವಂತಿಲ್ಲ. ಅಲ್ಲಿನ ಜನರು ಈ ಆಪನ್ನು ಡೌನ್ ಲೋಡ್ ಮಾಡಿಕೊಂಡಿದ್ದು, ಸ್ಥಳ ಆಧಾರಿತ ತುರ್ತು ಸಂದೇಶಗಳನ್ನು ಪಡೆಯುತ್ತಿದ್ದರು. ಅಂದರೆ ಸೋಂಕು ತಗುಲಿದ ವ್ಯಕ್ತಿ ನಿಮ್ಮ ಸಮೀಪದಲ್ಲಿ ಇದ್ದರೆ ನಿಮ್ಮನ್ನು ಈ ಆಪ್ ಎಚ್ಚರಿಸುತ್ತಿತ್ತು. ಜನರು ಸಂದೇಶಗಳನ್ನು ಸ್ವಯಂಚಾಲಿತವಾಗಿ ಪಡೆಯುತ್ತಾರೆ. ನನಗೆ ಸಂದೇಶ ಬೇಡ ಎಂದು ಆಫ್ ಮಾಡುವಂತಿಲ್ಲ. ಅದು ಕಡ್ಡಾಯವೂ ಹೌದು.
Related Articles
Advertisement
ದಕ್ಷಿಣ ಕೊರಿಯಾದಲ್ಲಿ ಸೋಂಕಿತರ ಸಂಖ್ಯೆ 10 ಸಾವಿರ ದಾಟಿದೆ. 200 ಜನರು ಸಾವನ್ನಪ್ಪಿದ್ದು. ಸುಮಾರು ಅರ್ಧದಷ್ಟು ಸೋಂಕಿತ ಜನರು ಗುಣಮುಖರಾಗಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ವೆಬ್ ಸೈಟ್ ನಲ್ಲಿ ಮಾಹಿತಿಸಿಯೋಲ್ ನ ಸುಮಾರು 158,000 ಜನಸಂಖ್ಯೆಯನ್ನು ಹೊಂದಿರುವ ಜಿಲ್ಲೆಯಾದ ಜೊಂಗ್ನೊ-ಗು ಸರಕಾರವು ತಮ್ಮ ವೆಬ್ ಸೈಟ್ ನಲ್ಲಿ ರೋಗಿಗಳ ಹೆಸರನ್ನು ಬಿಟ್ಟು ಪಟ್ಟಿಯನ್ನು ಸಂಗ್ರಹಿಸುತ್ತದೆ. ಅವರು ವಾಸಿಸುವ ಪ್ರದೇಶ ಮತ್ತು ಪ್ರಸ್ತುತ ಅವರು ಯಾವ ಆಸ್ಪತ್ರೆಗೆ ದಾಖಲಾಗಿದ್ದಾರೆ. ಯಾವ ಸಮಯದಲ್ಲಿ ದಾಖಲಾಗಿದ್ದಾರೆ ಮೊದಲಾದ ಮಾಹಿತಿಯನ್ನು ನಿಯಮಿತವಾಗಿ ಅಪ್ ಡೇಟ್ ಮಾಡುತ್ತಿದೆ. ಮೆಸೇಜ್ ಹೀಗೆ ಬರುತ್ತದೆ
ಜನರಿಗೆ ಬರುವ ಸಂದೇಶದ ಉದಾಹರಣೆ: ಸಿಯೋಲ್‌ನ ಸೋಮರ್ಸೆಟ್ ಪ್ಯಾಲೇಸ್ ಹೋಟೆಲ್ನಲ್ಲಿ ತಂಗಿರುವ 15 ವಿದೇಶಿಯರಲ್ಲಿ ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ. ಅವರ ಚಲನ ವಲನಗಳು, ನಡೆದು ಬಂದ ಹಾದಿ ಮೊದಲಾದ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮ್ಮ ವೆಬ್ ಸೈಟ್ ಭೇಟಿ ನೀಡಿ.” ಕೆಲವರಿಗೆ ಕಿರಿಕಿರಿ
Covid 19 ನಿಂದ ಉಂಟಾಗುವ ಅಪಾಯದ ಬಗ್ಗೆ ಪ್ರತಿಯೊಬ್ಬ ವ್ಯಕ್ತಿಯೂ ದೈನಂದಿನ ಮಾಹಿತಿ ಮತ್ತು ಸೋಂಕಿತರ ವಿವರಗಳನ್ನು ಮೆಸೇಜ್ ಮೂಲಕ ಪಡೆಯುತ್ತಾರೆ. ಇದು ಜನರ ಮೇಲೂ ಪರಿಣಾಮ ಬೀರುತ್ತಿದೆ. ಕೆಲವರಿಗೆ ಪ್ರಯೋಜನವಾದರೆ ಕಿರಿಕಿರಿಯಾಗುತ್ತಿದೆ ಎಂಬವರೂ ಇದ್ದಾರೆ.