Advertisement

ಸಿಂಗಾಪುರ-ಕತಾರ್‌ ಸೋಂಕು ಹೆಚ್ಚು; ಸತ್ತವರು ಕಡಿಮೆ

12:11 PM May 07, 2020 | sudhir |

ಮಣಿಪಾಲ: ಕೋವಿಡ್‌-19 ರುದ್ರತಾಂಡವ ಮುಂದುವರೆದಿದೆ. ಆದರೆ ಈ ಮಧ್ಯೆ ಆಶಾದಾಯಕ ಸಂಗತಿ ಎಂದರೆ ವಿಶ್ವದೆಲ್ಲೆಡೆ ಗುಣಮುಖ ಆಗುತ್ತಿರುವವರ ಪ್ರಮಾಣ ಹೆಚ್ಚಿದ್ದು, ಕೆಲ ದೇಶಗಳಲ್ಲಿ ಮರಣ ಪ್ರಮಾಣವೂ ಕಡಿಮೆ ಇದೆ. ಸಿಂಗಾಪುರ್‌ ಮತ್ತು ಕತಾರ್‌ ದೇಶಗಳು ಇದಕ್ಕೆ ಹೊರತಾಗಿಲ್ಲ.

Advertisement

ಹೌದು ಈ 2 ಪುಟ್ಟ ರಾಷ್ಟ್ರಗಳಲ್ಲಿ ಸೋಂಕು ಪ್ರಕರಣ ಹೆಚ್ಚಿದ್ದರೂ ಮರಣ ಪ್ರಮಾಣ ದರ ತುಂಬಾ ಕಡಿಮೆ ಇದೆ ಎಂದು ಹೇಳಲಾಗುತ್ತಿದ್ದು, ಸಿಂಗಾಪುರ್‌ನಲ್ಲಿ ಮರಣ ಪ್ರಮಾಣ ದರ ಶೇ. 0.1 ಕ್ಕಿಂತಲೂ ಕಡಿಮೆ ಇದ್ದರೆ, ಕತಾರ್‌ನಲ್ಲಿ ಶೇ. 0.07 ರಷ್ಟಿದೆ ಎಂದು ದಿ ನ್ಯೂಸ್‌ ರೈಸರ್‌ ವರದಿ ಮಾಡಿದೆ.

ತಜ್ಞರು ಹೇಳುವ ಪ್ರಕಾರ ಎರಡೂ ರಾಷ್ಟ್ರಗಳಲ್ಲಿ ಮರಣ ಪ್ರಮಾಣ ದರ ಕಡಿಮೆಯಾಗಲು ರೋಗಿಗಳ ಸಂಖ್ಯೆ ಮತ್ತು ಬಿಕ್ಕಟ್ಟನ್ನು ನಿಭಾಯಿಸುತ್ತಿರುವ ಆರೋಗ್ಯ ವ್ಯವಸ್ಥೆಯ ಸಮರ್ಥ ಕಾರ್ಯಾಚರಣೆಯೇ ಮುಖ್ಯ ಕಾರಣ ಎಂದಿದ್ದಾರೆ.
ಕೆಲವು ದಿನಗಳ ಹಿಂದೆ ಸಿಂಗಾಪುರದಲ್ಲಿರುವ ವಿದೇಶಿ ಕಾರ್ಮಿಕರ ವಸತಿ ನಿಲಯಗಳಲ್ಲಿ ಒಮ್ಮೆಲೇ ಸೋಂಕಿನ ಅಟ್ಟಹಾಸ ಹೆಚ್ಚಾಗಿ ಇಡೀ ದೇಶಕ್ಕೆ ಹಬ್ಬಿದೆ. ಏಷ್ಯಾದ ಹೆಚ್ಚು ಸೋಂಕು ಪ್ರಕರಣ ಹೊಂದಿರುವ ರಾಷ್ಟ್ರಗಳಲ್ಲಿ ಸಿಂಗಾಪುರವೂ ಗುರುತಿಸಿಕೊಂಡಿದೆ.

ಆದರೆ, ಅಚ್ಚರಿ ಎಂಬಂತೆ ಮರಣ ಪ್ರಮಾಣ ಮಾತ್ರ ತುಂಬಾ ಕಡಿಮೆ ಇದ್ದು, ಕಳೆದ ವಾರ​ದಲ್ಲಿ 102 ವರ್ಷದ ಹಿರಿಯ ಮಹಿಳೆಯೊಬ್ಬರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನೂ ಇಲ್ಲಿಯವರೆಗೆ ಸಿಂಗಾಪುರದಲ್ಲಿ 19 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಕಂಡುಬಂದಿದ್ದರೂ ಸಾವಿನ ಸಂಖ್ಯೆ ಮಾತ್ರ 18 ಇದೆ.

ಕತಾರ್‌ನಲ್ಲಿ ಮರಣ ಪ್ರಮಾಣ ಶೇ. 0.07 ರಷ್ಟಿದ್ದು, ಒಟ್ಟು 16 ಸಾವಿರಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಆದರೆ ಕೇವಲ 12 ಮಂದಿ ಬಲಿಯಾಗಿದ್ದಾರೆ. ಎರಡೂ ದೇಶಗಳು ತಮ್ಮ ಜನಸಂಖ್ಯೆಯ ಅನುಗುಣವಾಗಿ ವೈರಸ್‌ ಮರಣ ಪ್ರಮಾಣವನ್ನು ಕಡಿಮೆ ಮಾಡಿವೆ. 1 ಲಕ್ಷ ಮಂದಿಗೆ ಶೇ. 0.5ಕ್ಕಿಂತಲೂ ಮರಣ ಪ್ರಮಾಣ ಕಡಿಮೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next