Advertisement
ಸೋಂಕು ಎರಡನೇ ಹಂತಕ್ಕೆ ಕಾಲಿಟ್ಟರೆ ಮುಂದೇನು ಎಂಬ ಚಿಂತೆ ಈಗಾಗಲೇ ದೊಡ್ಡಣ್ಣನನ್ನು ಕಾಡತೊಡಗಿದೆ. ಆದರೆ ಈ ಚಿಂತೆಯನ್ನು ಹೆಚ್ಚುಗೊಳಿಸುವಂತೆ ಸಂಶೋಧನೆಯ ವರದಿಯೊಂದು ಹೊರ ಬಿದ್ದಿದ್ದು, ಎರಡನೇ ಹಂತದಲ್ಲಿ ಕೋವಿಡ್ ಆಕ್ರಮಿಸಿದರೆ ಪರಿಸ್ಥಿತಿಯನ್ನು ಎದುರಿಸಲು ಮುಂಜಾಗ್ರತ ಕ್ರಮವಾಗಿ ಯಾವ ಯೋಜನೆಗಳನ್ನು ರೂಪಿಸಿಲ್ಲ ಎನ್ನಲಾಗಿದೆ.ಶೇ.42 ರಷ್ಟು ಮುಖ್ಯ ಸಿಎಫ್‌ಒಗಳು ಸೋಂಕಿನ ಎರಡನೇ ಘಟ್ಟವನ್ನು ಎದುರಿಸಲು ಸಿದ್ಧರಾಗಿಲ್ಲ ಎಂಬ ಆತಂಕಕಾರಿ ವಿಷಯವೊಂದನ್ನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ ಎಂದು ಔಟ್‌ಲುಕ್ ಇಂಡಿಯಾ ವರದಿ ಮಾಡಿದೆ.
ಕೇವಲ ಶೇ.22ರಷ್ಟು ಸಿಎಫ್‌ಒಗಳು ಮಾತ್ರ ಎರಡನೇ ಹಂತದ ಕೋವಿಡ್-19 ಬಿಕ್ಕಟ್ಟಿನ ಸನ್ನಿವೇಶವನ್ನು ನಿಯಂತ್ರಿಸುವ ಯೋಜನೆಗಳನ್ನು ಹೊಂದಿದ್ದಾರೆ. ಆದರೆ, ಆಕಸ್ಮಿಕವಾಗಿ ಸೋಂಕು ಪ್ರಸರಣ ತೀವ್ರಗೊಂಡರೆ ಅದನ್ನು ತಡೆಹಿಡಿಯಲು ಯಾವ ಯೋಜನೆಗಳೂ ಸಹ ಇನ್ನೂ ಸಿದ್ದವಾಗಿಲ್ಲ ಎಂದು ಸಮೀಕ್ಷೆ ತಿಳಿಸಿದೆ. ಮುನ್ನೆಚ್ಚರ ವಹಿಸುವಲ್ಲಿ ನಿರ್ಲಕ್ಷé ತೋರಿರುವ ಸಿಎಫ್‌ಒಗಳು ತಮ್ಮ ಕಾರ್ಯಾಚರಣೆಯನ್ನು ಯಾವಾಗ ಪ್ರಾರಂಭಿ ಸಲಿದ್ದಾರೆ ಹಾಗೂ ನೌಕರರ ಸ್ಥಿತಿಗತಿಗಳ ಬಗ್ಗೆ ಏನೆಲ್ಲ ಸುರಕ್ಷತೆಯ ವಿಧಾನವನ್ನು ಕೈಗೊಂಡಿದ್ದಾರೆ ಎಂಬುದನ್ನೂ ಇದುವರೆಗೆ ಬಹಿರಂಗಗೊಳಿಸಿಲ್ಲ ಎಂದಿದೆ ವರದಿ. ಆದಾಯ-ಲಾಭದ ಬಗ್ಗೆ ಚಿಂತನೆ
2020ಕ್ಕೆ ಅನುಗುಣವಾಗುವಂತೆ ಆದಾಯ ಮತ್ತು ಲಾಭದ ಬಗ್ಗೆ ಚಿಂತಿಸಿರುವ ಸಿಎಫ್‌ಒಗಳು ಹಣಕಾಸು ಯೋಜನೆಯನ್ನು ರೂಪಿಸಲು ಪ್ರಯತ್ನಿಸುತ್ತಿದ್ದಾರೆ. ಆದಕಾರಣ ವ್ಯಾವಹಾರಿಕ ವಿಷಯಗಳಿಗೆ ಹೆಚ್ಚಿನ ಒತ್ತು ನೀಡಿರುವ ಸುಮಾರು ಶೇ.42ರಷ್ಟು ಅಧಿಕಾರಿಗಳು ಕೋವಿಡ್-19ರ ಎರಡನೇ ಹಂತದಲ್ಲಿ ಎದುರಾಗಲಿರುವ ಯಾವುದೇ ಸನ್ನಿವೇಶಗಳಿಗೆ ತಯಾರಾಗಿಲ್ಲ ಎಂಬುದು ಆತಂಕಕ್ಕೆ ಕಾರಣವಾಗಿದೆ ಎಂದಿದೆ ಸಮೀಕ್ಷಾ ವರದಿ.