ಢಾಕಾ: ಶ್ರೀಲಂಕಾ ಮತ್ತು ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿ ಆರಂಭವಾಗಿದೆ. ಆದರೆ ಶ್ರೀಲಂಕಾ ಆಟಗಾರರಲ್ಲಿ ಕೋವಿಡ್ 19 ಸೋಂಕು ದೃಢವಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಲಂಕಾ ತಂಡದ ಆಟಗಾರರಾದ ಇಸಿರು ಉದಾನ, ಶಿರಾನ್ ಫರ್ನಾಂಡೋ ಮತ್ತು ಬೌಲಿಂಗ್ ಕೋಚ್ ಚಾಮಿಂಡ ವಾಸ್ ಗೆ ಕೋವಿಡ್ ಪಾಸಿಟಿವ್ ಆಗಿತ್ತು. ಆದರೆ ನಂತರ ನಡೆಸಿದ ಮತ್ತೊಂದು ಪರೀಕ್ಷೆಯಲ್ಲಿ ಚಾಮಿಂಡ ವಾಸ್ ಮತ್ತು ಇಸಿರು ಉದಾನರ ವರದಿ ನೆಗೆಟಿವ್ ಆಗಿತ್ತು. ಶಿರಾನ್ ಫರ್ನಾಂಡೋ ರ ವರದಿ ಪಾಸಿಟಿವ್ ಆಗಿತ್ತು.
ಇದನ್ನೂ ಓದಿ:ರೆಮ್ ಡೆಸಿವಿರ್ ಕಾಳಸಂತೆಯಲ್ಲಿ ಮಾರಾಟ ತಡೆಯಲು ಸರ್ಕಾರದಿಂದ ಹೊಸ ಯೋಜನೆ
ಇದರ ನಡುವೆಯೂ ಇಂದು ಢಾಕಾದ ಶೇರ್ ಎ ಬಾಂಗ್ಲಾ ಮೈದಾನದಲ್ಲಿ ಪಂದ್ಯ ಆರಂಭವಾಗಿದೆ. ಟಾಸ್ ಗೆದ್ದ ಬಾಂಗ್ಲಾ ಬ್ಯಾಟಿಂಗ್ ಆಯ್ಕೆ ಮಾಡಿದೆ. ತಂಡದ ಆಡವ ಬಳಗದಲ್ಲಿ ಇಸಿರು ಉದಾನಗೆ ಅವಕಾಶ ನೀಡಲಾಗಿದೆ.
ಶ್ರೀಲಂಕಾ ತಂಡ ಬಾಂಗ್ಲಾದೇಶ ವಿರುದ್ಧ ಮೂರು ಏಕದಿನ ಪಂದ್ಯಗಳ ಸರಣಿ ನಡೆಯುತ್ತಿದೆ. ಜುಲೈನಲ್ಲಿ ಲಂಕಾ ತಂಡ ಭಾರತ ವಿರುದ್ಧ ಏಕದಿನ ಮತ್ತು ಟಿ 20 ಸರಣಿ ಆಡಲಿದೆ.