ಲಂಡನ್: ಬ್ರಿಟಿಷ್ ರೈನೋಲಾಜಿಕಲ್ ಸೊಸೈಟಿಯ ಇತ್ತೀಚಿನ ಸಂಶೋಧನೆಯೊಂದು ಕೋವಿಡ್ 19 ವೈರಸ್ ಈಗಾಗಲೇ ಕೆಲವು ಲಕ್ಷಣಗಳನ್ನು ಹೊಂದಿವೆ ಎಂಬ ಕುತೂಹಲದ ಅಂಶವನ್ನು ಹೇಳಿದೆ. ನಿಮ್ಮ ಸುತ್ತಲಿನ ವಸ್ತುಗಳ ವಾಸನೆಯನ್ನು ಗುರುತಿಸಲು ನಿಮಗೆ ಸಾಧ್ಯವಾಗದಿದ್ದರೆ ಅಥವಾ ನಿಮ್ಮ ಬಾಯಿಯಲ್ಲಿ ಆಹಾರದ ರುಚಿಯನ್ನು ಅನುಭವಿಸಲು ಅಸಾಧ್ಯವಾದರೆ, ಕೋವಿಡ್ 19 ವೈರಸ್ ನಿಮ್ಮ ದೇಹವನ್ನು ಪ್ರವೇಶಿಸಿದೆ ಎಂದರ್ಥ.
ರೈನೋಲಾಜಿಕಲ್ ಸೊಸೈಟಿಯ ಡಾ| ಕ್ಲೇರ್ ಹಾಪಿRನ್ಸ್ ಅವರು ಅಂತಹ ರೋಗ ಲಕ್ಷಣಗಳು ಕಂಡುಬಂದರೆ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಎಂದು ಹೇಳಿದ್ದಾರೆ. ಇಂತಹ ಪ್ರಕರಣಗಳಲ್ಲಿ ನೀವು ಇತರ ಜನರೊಂದಿಗಿನ ಸಂಪರ್ಕವನ್ನು ಕಡಿದುಕೊಳ್ಳುವುದು ಬಹಳ ಮುಖ್ಯ ಎಂದು ಸಲಹೆ ನೀಡಿದ್ದಾರೆ.
ಮಸಾಲೆಗಳ ಪರಿಮಳ, ಹೂವುಗಳ ವಾಸನೆ ಮತ್ತು ಕಸದ ವಾಸನೆಯನ್ನು ಗುರುತಿಸಲು ನಿಮಗೆ ಸಾಧ್ಯವಾಗದಿದ್ದರೆ, ಅದು ಈ ಸಮಯದಲ್ಲಿ ಅಪಾಯಕಾರಿ. ಹೆಚ್ಚಾಗಿ ಕೋವಿಡ್ 19 ವೈರಸ್ ಸೋಂಕಿತ ವ್ಯಕ್ತಿಯೊಂದಿಗೆ ಪ್ರಯಾಣಿಸಿದ್ದವರು ಅಥವ ಗುರುತಿಸಿಕೊಂಡವರು ಎಂದು ಸಾಬೀತುಪಡಿಸಬಹುದು. ಇಂತಹದ್ದನ್ನು ಯಾವುದೇ ಕಾರಣಕ್ಕೂ ಲಘುವಾಗಿ ಪರಿಗಣಿಸಬಾರದು ಎಂದು ಜನರಿಗೆ ತಾಕೀತು ಮಾಡಿದೆ.
ಇದು ಕೋವಿಡ್ 19 ವೈರಸ್ ಮೊದಲ ಲಕ್ಷಣವಾಗಿದೆ. ಒಣ ಕೆಮ್ಮು ಮತ್ತು ಜ್ವರ ಮಾತ್ರ ಕೋವಿಡ್ 19 ವೈರಸ್ ಲಕ್ಷಣಗಳಲ್ಲ ಎಂದು ಇಂಗ್ಲೆಂಡ್ ವಿಜ್ಞಾನಿಗಳು ತಮ್ಮ ತನಿಖೆಯಲ್ಲಿ ಕಂಡುಕೊಂಡಿದ್ದಾರೆ. ವೈರಸ್ ದೇಹದ ಮೇಲೆ ಆಕ್ರಮಣ ಮಾಡುವ ಮೊದಲು ಅದರ ಕೆಲವು ಲಕ್ಷಣಗಳನ್ನು ತೋರಿಸಲಾರಂಭಿಸುತ್ತದೆ. ನೀವು ಅವರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದವರು ತಿಳಿಸಿದ್ದಾರೆ. ಇದಕ್ಕಾಗಿ ವಾಸನೆ ಮತ್ತು ರುಚಿಗೆ ಗಮನ ಕೊಡಿ ಎಂದು ಅವರು ಹೇಳಿದ್ದಾರೆ.
ದಕ್ಷಿಣ ಕೊರಿಯಾದಲ್ಲಿ ಪ್ರಯೋಗ
ದಕ್ಷಿಣ ಕೊರಿಯಾದಲ್ಲಿ ವಾಸನೆ ಮತ್ತು ರುಚಿಗಾಗಿ 2,000 ಕೋವಿಡ್ 19 ವೈರಸ್ ಸೋಂಕಿತ ಜನರ ಮೇಲೆ ಈ ಪರೀಕ್ಷೆಯನ್ನು ನಡೆಸಲಾಗಿದೆ. ಅವರಲ್ಲಿ 30 ಪ್ರತಿಶತದಷ್ಟು ಜನರು ಬಹಳ ಹಿಂದೆಯೇ ವಾಸನೆಯನ್ನು ಗ್ರಹಿಸುವಂತಹ ಪ್ರಜ್ಞೆಯನ್ನು ಕಳೆದುಕೊಂಡಿದ್ದಾರೆ. ಈ ಜನರು ತಿನ್ನುವಾಗ ಆಹಾರವನ್ನು ಅನುಭವಿಸಲು ಸಾಧ್ಯವಾಗುತ್ತಿಲ್ಲ ಎಂದು ಸಂಶೋಧನೆ ಹೇಳಿದೆ.
ಕೋವಿಡ್ 19 ವೈರಸ್ ಸೋಂಕಿನ ಆರಂಭಿಕ ಚಿಹ್ನೆಗಳು ಮೂಗು ಮತ್ತು ಬಾಯಿಯ ಮೂಲಕ ತಿಳಿಯುತ್ತವೆ. ವಾಸನೆಯ ಪ್ರಜ್ಞೆಯನ್ನು ಕಳೆದುಕೊಂಡಿರುವ ಅಥವಾ ಬಾಯಿಯಲ್ಲಿ ಆಹಾರದ ರುಚಿಯನ್ನು ಹೊಂದಿರದ ಜನರ ಅನುಭವಗಳನ್ನು ಉಲ್ಲೇಖೀಸಿದ್ದಾರೆ. ಅವರೆಲ್ಲರೂ ಅಂತಿಮವಾಗಿ ಕೋವಿಡ್ 19 ವೈರಸ್ ಸೋಂಕಿಗೆ ಒಳಗಾದವರೇ ಆಗಿದ್ದಾರೆ.