Advertisement

ಬಾಗಲಕೋಟೆ: ಅಂಗಡಿಯಲ್ಲಿದ್ದ ವೃದ್ದನಿಗೆ ಸೋಂಕು ಹೇಗೆ ತಗುಲಿತು ಎನ್ನುವುದೇ ದೊಡ್ಡ ಸವಾಲು

09:03 AM Apr 04, 2020 | keerthan |

ಬಾಗಲಕೋಟೆ : ನಗರದಲ್ಲಿ ವೃದ್ದನಿಗೆ ಕೋವಿಡ್-19 ವೈರಸ್ ಸೋಂಕು ಪತ್ತೆ ಹಿನ್ನೆಲೆ ಸೋಂಕಿತನ ಸಂಪರ್ಕದಲ್ಲಿ ಇದ್ದ 10 ಜನರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಐಸೋಲೇಶನ್ ನಲ್ಲಿಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಹೇಳಿದರು.

Advertisement

ಬಾಗಲಕೋಟೆ ಜಿಲ್ಲಾಧಿಕಾರಿ ಕೆ.ರಾಜೇಂದ್ರ, ಎಸ್ಪಿ ಲೋಕೇಶ್ ಜಗಲಾಸರ್, ಡಿಎಚ್ ಒ ಡಾ.ಅನಂತ ದೇಸಾಯಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಸೋಂಕಿತ ವ್ಯಕ್ತಿಯ ಅಂಗಡಿ, ಮನೆ ವ್ಯಾಪ್ತಿಯನ್ನು ಸಂಪೂರ್ಣವಾಗಿ  ಕ್ವಾರಂಟೈನ್ ಪ್ರದೇಶವಾಗಿ ಘೋಷಿಸಿದ್ದು, ಸೋಂಕು ನಾಶಕ ಸಿಂಪಡಣೆ ಮಾಡಲಾಗಿದೆ. ಪ್ರದೇಶ ಸಂಪೂರ್ಣವಾಗಿ ಕ್ಯಾರಂಟೈನ್ ಮಾಡಲಾಗಿದ್ದು,  ನಿಯಮ‌ ಮೀರಿ ಯಾರೂ ಒಳಗೆ, ಹೊರಗೆ ಬರುವ ಪ್ರಯತ್ನ ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು.

ಆ ಪ್ರದೇಶದ ಜನರಿಗೆ ನೀರು, ದಿನಸಿ ಅಗತ್ಯ ಸೌಲಭ್ಯ  ಪೂರೈಕೆ ಜಿಲ್ಲಾಡಳಿತ ಮಾಡುತ್ತದೆ. ಹಳೇ ಬಾಗಲಕೋಟೆ ಏರಿಯಾದಲ್ಲಿ ಯಾವುದೆ ಅಂಗಡಿ ತೆರೆಯಲು ಅವಕಾಶ ಇಲ್ಲ. ಎಲ್ಲವೂ ಹೋಮ್ ಡಿಲೆವರಿ ಇರುತ್ತೆ. ಯಾರೂ ಹೊರ ಬರುವಂತಿಲ್ಲ ಎಂದರು.

ಸೋಂಕಿತ ವ್ಯಕ್ತಿಗೆ ಸಂಬಂಧಿಸಿ ಎರಡು ಅಂಗಡಿ ಇದೆ. ಅಂಗಡಿಗೆ ಹೋಗಿದ್ದವರು ಸ್ವಯಂ ಆಗಿ ಮುಂದೆ ಬಂದು ಆಸ್ಪತ್ರೆಗೆ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದರು.

Advertisement

ವೃದ್ದನಿಗೆ ಸೊಂಕು ಹೊರಗಿನಿಂದ ಬಂದ ವ್ಯಕ್ತಿಯಿಂದ ಬಂದಿರುವ ಅನುಮಾನವಿದೆ. ಆತ ಅಂಗಡಿ ಮತ್ತು ಮನೆ ಬಿಟ್ಟು ಎಲ್ಲೂ ಹೋಗಿರಲಿಲ್ಲ. ಆತನ ಮಗ ಮತ್ತು ಮಗಳು ಹತ್ತು ದಿನಗಳ ಹಿಂದೆ ಬೆಂಗಳೂರಿನಿಂದ ಬಂದಿದ್ದು, ಅವರ ರಕ್ತ ಮತ್ತು ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳಿಸಲಾಗಿದೆ. ಯಾರಿಂದ ಸೋಂಕು ಬಂತು ಎನ್ನುವ ತನಿಖೆ ನಡೆದಿದೆ ಎಂದರು.

ಅಂಗಡಿಗೆ ಕಳೆದ ಹತ್ತು ಹದಿನೈದು ದಿನಗಳಲ್ಲಿ ಯಾರು ಯಾರು ಬಂದಿದ್ದರು ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತದೆ.  ಜಿಲ್ಲಾ ಆಸ್ಪತ್ರೆಗೆ ಬರುವ ಮುನ್ನ ಖಾಸಗಿ ಆಸ್ಪತ್ರೆಗೆ ಹೋಗಿದ್ದ. ಅಲ್ಲಿನ ಆಸ್ಪತ್ರೆ, ವೈದ್ಯರು, ಅಲ್ಲಿನ ಸಿಬ್ಬಂದಿ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ ಎಂದರು.

ಒಂದು ವೇಳ ಸೊಂಕಿತನ ಮಗ ಹಾಗೂ ಮಗಳಿಗೆ ಸೊಂಕು ಪತ್ತೆಯಾಗದಿದ್ರೆ ಅದು ಭಾರಿ ಆತಂಕಕ್ಕೆ ಕಾರಣವಾಗಲಿದೆ.  ಆಗ ಸೊಂಕಿತನ ಅಂಗಡಿಗೆ ಬಂದವರ ಪ್ರತಿಯೊಬ್ಬರ ಪತ್ತೆ ಮಾಡಬೇಕಾಗುತ್ತದೆ.  ಎಲ್ಲರನ್ನೂ ಬಿಡದೆ ತಪಾಸಣೆ ಮಾಡುತ್ತೇವೆ. ಆತನ ಅಂಗಡಿಗೆ ಹೋದವರು  ಖುದ್ದಾಗಿ ಬಂದು ಸಹಕರಿಸಬೇಕು ಜಿಲ್ಲಾಡಳಿತ ಮನವಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next