ಕೋಲಾರ: ಕೆಜಿಎಫ್, ಮುಳಬಾಗಿಲು, ಮಾಲೂರು ಸೇರಿ ಭಾನುವಾರ ಮೂರು ಪ್ರಕರಣಗಳು ಪತ್ತೆಯಾಗುವ ಮೂಲಕ ಜಿಲ್ಲೆ ಯಲ್ಲಿ ಪತ್ತೆಯಾದ ಕೋವಿಡ್ 19 ಪಾಸಿಟಿವ್ ಸೋಂಕಿತರ ಸಂಖ್ಯೆ ಹತ್ತಕ್ಕೇರುವಂತಾಗಿದೆ. ಜಿಲ್ಲೆಯಲ್ಲಿ ಪತ್ತೆಯಾಗಿರುವ ಹತ್ತು ಪ್ರಕರಣಗಳಲ್ಲಿ ಈವರೆಗೂ ಸೋಂಕಿತರ ಸಂಪ ರ್ಕದಲ್ಲಿದ್ದ 138 ಪ್ರಥಮ, 139 ದ್ವಿತೀಯ ಸೇರಿ 277 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ಮಾಲೂರು ಕಾರ್ಖಾನೆಯಲ್ಲಿ ಶನಿವಾರ ರಾತ್ರಿ ಕೆಲಸ ಮಾಡುತ್ತಿದ್ದ ಶಿಡ್ಲಘಟ್ಟ ತಾಲೂಕಿನ ಮರಳೂರು ಗ್ರಾಮದ 27 ವರ್ಷದ ಚಾಲಕ ಪಿ-1096 ಜ್ವರದಿಂದ ಬಳಲುತ್ತಿದ್ದು ಚಿಕಿತ್ಸೆಗೆ ತೆರಳಿದ್ದಾಗ ಕೋವಿಡ್ 19 ಪಾಸಿಟಿವ್ ದೃಢ ಪಟ್ಟಿದ್ದು, ಆತನನ್ನು ಕೋಲಾರದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈತನ ಪ್ರಥಮ ಸಂಪರ್ಕಿತ 22 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ಮುಳಬಾಗಿಲು ತಾಲೂಕು ಸೊಣ್ಣವಾಡಿ ಗ್ರಾಮದ 49 ವರ್ಷದ ಪಿ.1128 ವ್ಯಕ್ತಿ ತೀವ್ರ ಉಸಿರಾಟದ ತೊಂದರೆ ಕಂಡು ಬಂದಿದ್ದು, ಭಾನುವಾರ ಬೆಳಗ್ಗೆ ಆಸ್ಪತ್ರೆಗೆ ದಾಖಲಿಸಲಾ ಗಿದೆ. ಈತನ ಪ್ರಥಮ ಸಂಪರ್ಕಿತ 5 ಹಾಗೂ ದ್ವಿತೀಯ ಸಂಪರ್ಕಿತ ಮೂವರನ್ನು ಕ್ವಾರಂ ಟೈನ್ ಮಾಡಲಾಗಿದೆ. ಕೆಜಿಎಫ್ನಲ್ಲಿ ಚಿನ್ನದ ಗಣಿ ಕಳುವಿಗಾಗಿ ಪ್ರಯತ್ನಿಸಿ ಬಂಧಿತನಾಗಿರುವ 43 ವರ್ಷ ಪಿ.1146 ವ್ಯಕ್ತಿಗೂ ಪಾಸಿಟಿವ್ ಖಚಿತವಾ ಗಿದ್ದು, ಈತನ ಪ್ರಥಮ ಸಂಪರ್ಕಿತ 10 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ಜಿಲ್ಲೆಯಲ್ಲಿ ಭಾನುವಾರ ಒಟ್ಟಾಗಿ ಮೂರು ಪ್ರಕರಣಗಳು ಪತ್ತೆಯಾಗಿರುವುದು, ಸೋಂಕು ಸಾಮೂಹಿಕವಾಗಿ ಹರಡುವ ಭೀತಿಯನ್ನು ತಂದೊಡ್ಡಿದೆ. ಮುಳಬಾಗಿಲು ತಾಲೂಕಿನಲ್ಲಿ ಮೊದಲಿಗೆ ಪತ್ತೆಯಾಗಿದ್ದ ಪಿ.906 ಸೋಂಕಿತರ ಪ್ರಥಮ ಸಂಪರ್ಕಿತ 7, ದ್ವಿತೀಯ ಸಂಪರ್ಕಿತ 16, ಪಿ.907 ಸೋಂಕಿತರ ಪ್ರಥಮ 8, ದ್ವಿತೀಯ 45, ಪಿ.908 ಸೋಂಕಿತ, ಪ್ರಥಮ19, ದ್ವಿತೀಯ 33, ಪಿ.909 ಸೋಂಕಿತರ ಪ್ರಥಮ 22 ಹಾಗೂ ದ್ವಿತೀಯ 4, ಪಿ.910 ಸೋಂಕಿತರ ಪ್ರಥಮ 4 ಹಾಗೂ ದ್ವಿತೀಯ 5 ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ.
ಆನಂತರ ಕೆಜಿಎಫ್ ಸಮೀಪದ ಬೈನೇಪಲ್ಲಿ ಯಲ್ಲಿ ಪತ್ತೆಯಾದ ಪಿ.992 ಸೋಂಕಿತರ ಪ್ರಥಮ 12 ಹಾಗೂ ದ್ವಿತೀಯ 3, ಕೋಲಾರ ದಲ್ಲಿ ಪತ್ತೆಯಾಗಿದ್ದ ಮಂಡ್ಯ ಮೂಲದ ಪಿ.1057 ಸೋಂಕಿತರ ಪ್ರಥಮ 29 ಮತ್ತು ದ್ವಿತೀಯ 30 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು, ಈ ಎಲ್ಲರ ಆರೋಗ್ಯ ಬದಲಾವಣೆಯ ಮೇಲೆ ನಿಗಾ ಇಡಲಾಗಿದೆ. ಶಂಕಿತರ ಗಂಟಲ ದ್ರಾವಣತೆಗೆದು ಪ್ರಯೋ ಗಾಲಯಕ್ಕೆ ಕಳುಹಿಸಲಾಗಿದ್ದು, ವರದಿಯಾಗಿ ಕಾಯಲಾಗುತ್ತಿದೆ.
ಸೋಂಕಿತರ ಸಂಪರ್ಕ ದಲ್ಲಿದ್ದು ಕ್ವಾರಂಟೈನ್‌ಗೊಳಗಾಗಿರುವ 277 ಮಂದಿ ಪೈಕಿ ಯಾರಿಗಾದರೂ ಸೋಂಕು ಹರಡಿದರೆ ಜಿಲ್ಲೆಯಲ್ಲಿ ಸಮುದಾಯಿಕವಾಗಿ ಸೋಂಕು ಹರಡುವ ಭೀತಿ ಎದುರಾಗಿದ್ದು, ಆತಂಕಕ್ಕೆ ಕಾರಣವಾಗಿದೆ.