Advertisement

ಮನೆ ಸೀಲ್ ಡೌನ್ ಆದರೂ ಸೋಂಕಿತ ಮನೆಯಲ್ಲಿಯೇ ಬಾಕಿ: ಸ್ಥಳೀಯರ ಆಕ್ರೋಶ

03:07 PM Jun 06, 2020 | keerthan |

ಪಡುಬಿದ್ರಿ: ಮಹಾರಾಷ್ಟ್ರದಿಂದ ಬಂದು 14 ದಿನ ಕ್ವಾರೆಂಟೈನ್ ಗೆ ಒಳಪಟ್ಟು ಮನೆಗೆ ಬಂದ ವ್ಯಕ್ತಿಗೆ ಕೋವಿಡ್-19 ಸೋಂಕು ದೃಢವಾದರೂ ಸೋಂಕಿತನ್ನೂ ಆಸ್ಪತ್ರೆಗೆ ಸೇರಿಸದೇ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಉಚ್ಚಿಲ ಪೊಲ್ಯ ರಸ್ತೆಯ ಅಪಾರ್ಟಮೆಂಟ್ ಒಂದರಲ್ಲಿ ವಾಸವಾಗಿದ್ದ ವ್ಯಕ್ತಿಗೆ ಶುಕ್ರವಾರ ಕೋವಿಡ್-19 ಸೋಂಕು ದೃಢವಾಗಿತ್ತು. ಈ ಹಿನ್ನಲೆಯಲ್ಲಿಅಪಾರ್ಟ್ ಮೆಂಟ್ ಅನ್ನು ಸೀಲ್ ಡೌನ್ ಮಾಡಲಾಗಿದೆ. ಆದರೆ ಇದುವರೆಗೆ ಸೋಂಕಿತ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲಾಗಿಲ್ಲ. ಉಡುಪಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಿರುವ ಈ ಸಮಯದಲ್ಲಿ ಇಲಾಖೆಯ ಈ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಅವರಿಗೆ ನಿನ್ನೆ ರಾತ್ರಿಯಿಂದ ಹೊಟ್ಟೆಗೆ ಅನ್ನ ಅಹಾರ ನೀಡಿಲ್ಲ. ನಮ್ಮನ್ನು ಸ್ಥಳೀಯ ಗ್ರಾ.ಪಂ ಅಧಿಕಾರಿಗಳು ನೋಡಲು ಬಂದಿಲ್ಲ ಎಂದು ಅವರ ಪತ್ನಿ ಆರೋಪಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಸ್ಥಳೀಯ ತಾ.ಪಂ ಸದಸ್ಯ ಶೇಖಬ್ಬ, ನಿನ್ನೆಯಿಂದ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲಾಗಿಲ್ಲ. ಅವರಿಗೆ ಅಹಾರದ ವ್ಯವಸ್ಥೆಯನ್ನು ಮಾಡಿಲ್ಲ. ನಮಗೆ ಬೆಳಿಗ್ಗೆ ವಿಷಯ ಸಿಕ್ಕಿದ ಕೂಡಲೇ ನಾವು ಬೆಳಿಗ್ಗಿನ ಉಪಹಾರ ನೀಡಿದ್ದೇವೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕೆಂದಿದ್ದಾರೆ.

ಕಾಪು ತಹಶೀಲ್ದಾರ್ ಮಹಮ್ಮದ್ ಇಸಾಕ್ ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿ, ನಾವು ಆ ಸೋಂಕಿತರಿರುವ ಮನೆಯನ್ನು ಸೀಲ್ ಡೌನ್ ಮಾಡಿದ್ದೇವೆ. ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಬಿ.ಬಿ. ರಾವ್ ಗೆ ಈ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು ಸೂಚನೆ ನೀಡಿದ್ದೇವೆ. ನಿನ್ನೆಯೇ ಸಾಗಿಸ ಬೇಕಾಗಿದ್ದು ಈ ಬಗ್ಗೆ ವಿಚಾರಿಸುತ್ತೇನೆ ಎಂದಿದ್ದಾರೆ.

Advertisement

ಎಲ್ಲದಕ್ಕೂ ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಇಲಾಖೆಯೊಂದಿಗೆ ಸಹಕರಿಸಿ. ಅ್ಯಂಬುಲೆನ್ಸ್ ಲಭ್ಯತೆಯನ್ನು ಆಧರಿಸಿ ಇಂದು ಸ್ಥಳಾಂತರಿಸುತ್ತೇವೆ ಎಂದು ಪಡುಬಿದ್ರಿ ಪ್ರಾ. ಆ. ಕೇಂದ್ರದ ಆರೋಗ್ಯಾಧಿಕಾರಿ ಡಾ| ಬಿ. ಬಿ.ರಾವ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next