ಕೋಟ: ಇಲ್ಲಿನ ಪೇಟೆ ಸಮೀಪ ಇರುವ ಹೋಟೆಲೊಂದರ ಮಾಲಕರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ.
ಈ ಕಾರಣದಿಂದ ಇವರ ಮನೆ ಹಾಗೂ ಹೋಟೆಲನ್ನು ಬುಧವಾರದಂದು ಸೀಲ್‌ಡೌನ್ ಮಾಡಲಾಗಿದೆ.
ಸರಕಾರದ ಆದೇಶದ ಮೇರೆಗೆ ಹೋಟೆಲ್ ಸೇರಿದಂತೆ ಜನದಟ್ಟಣೆಯ ಸಾರ್ವಜನಿಕ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವವತನ್ನು ಇದೀಗ ಕಡ್ಡಾಯವಾಗಿ ಕೋವಿಡ್ 19 ಸೋಂಕು ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಆ ಪ್ರಕಾರವಾಗಿ ಕಳೆದ ಎರಡು ದಿನಗಳ ಹಿಂದೆ ಈ ಹೋಟೆಲ್ ಮಾಲಕರನ್ನು ಸೋಂಕು ತಪಾಸಣೆಗೆ ಒಳಪಡಿಸಲಾಗಿತ್ತು. ಅದರ ವರದಿ ಇಂದು ಬಂದಿದ್ದು ಅದರಲ್ಲಿ ಈ ವ್ಯಕ್ತಿಗೆ ಸೋಂಕು ಇರುವುದು ದೃಢಪಟ್ಟಿದೆ. ಸೋಂಕಿತ ವ್ಯಕ್ತಿಯನ್ನು ಇದೀಗ ಉಡುಪಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಂದಾಯ ಅಧಿಕಾರಿ ರಾಜು, ಕೋಟ ಪೊಲೀಸ್ ಉಪ ನಿರೀಕ್ಷಕ ಸಂತೋಷ್, ಗ್ರಾಮ ಪಂಚಾಯತ್ ಸದಸ್ಯ ಭುಜಂಗ ಗುರಿಕಾರ ಹಾಗೂ ಕಂದಾಯ ಅಧಿಕಾರಿಗಳು, ಆರೋಗ್ಯ ಕಾರ್ಯಕರ್ತರು ಇದೀಗ ಹೊಟೇಲ್ ಇರುವ ಸ್ಥಳಕ್ಕೆ ಆಗಮಿಸಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.
ಕೋಟ ಮುಖ್ಯ ಪೇಟೆಯಲ್ಲೇ ಇರುವ ಈ ಹೋಟೆಲಿನ ಮಾಲಕನಲ್ಲಿಯೇ ಸೋಂಕು ಕಾಣಿಸಿಕೊಂಡಿರುವುದು ಈ ಭಾಗದ ಜನರಲ್ಲಿ ಆತಂಕವನ್ನು ಹೆಚ್ಚಿಸಿದೆ.