ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ 40 ಜನರಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ. ಇದಿರಂದ ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಒಟ್ಟು 115 ಮಂದಿಗೆ ಕೋವಿಡ್-19 ಸೋಂಕು ದೃಢವಾಗಿದೆ.
ಇಂದು ಮಧ್ಯಾಹ್ನದ ವರದಿಯಲ್ಲಿ 75 ಜನರಿಗೆ ಕೋವಿಡ್-19 ಸೋಂಕು ದೃಢವಾಗಿದ್ದು, ಈಗ ಮತ್ತೆ 40 ಜನರಿಗೆ ಕೋವಿಡ್-19 ಸೋಂಕು ತಾಗಿರುವುದು ಖಚಿತವಾಗಿದೆ. ಇದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 2533ಕ್ಕೆ ಏರಿಕೆ ಕಂಡಿದೆ.
ರಾಜ್ಯದ ಕರಾವಳಿ ಭಾಗದಲ್ಲಿ ಇಂದು ಹೆಚ್ಚು ಸೋಂಕು ಪ್ರಕರಣ ವರದಿಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು 29 ಸೋಂಕು ಪ್ರಕರಣ ದೃಢವಾಗಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 24 ಸೋಂಕು ಪ್ರಕರಣ ಪತ್ತೆಯಾಗಿದೆ.
ಉಳಿದಂತೆ ಹಾಸನದಲ್ಲಿ 13 ಪ್ರಕರಣ, ಬೀದರ್ ನಲ್ಲಿ 12 ಸೋಂಕು ಪ್ರಕರಣ, ಬೆಂಗಳೂರು ನಗರದಲ್ಲಿ ಒಂಬತ್ತು, ಯಾದಗಿರಿಯಲ್ಲಿ ಏಳು, ಕಲಬುರಗಿಯಲ್ಲಿ ಐದು, ಚಿತ್ರದುರ್ಗದಲ್ಲಿ ಆರು ಹಾವೇರಿ ನಾಲ್ಕು, ಚಿಕ್ಕಮಗಳೂರು ಮೂರು, ವಿಜಯಪುರ ಎರಡು, ರಾಯಚೂರಿನಲ್ಲಿ ಒಂದು ಕೋವಿಡ್ ಪ್ರಕರಣ ದೃಢವಾಗಿದೆ.
ರಾಜ್ಯದ ಒಟ್ಟು 2533 ಪ್ರಕರಣಗಳ ಪೈಕಿ 834 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಅದರಲ್ಲೂ 53 ಮಂದಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 1650 ಮಂದಿ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 47 ಮಂದಿ ಸಾವನ್ನಪ್ಪಿದ್ದಾರೆ. ಇಬ್ಬರು ಸೋಂಕಿತರು ಸೋಂಕು ಅಲ್ಲದ ಕಾರಣದಿಂದ ಮರಣ ಹೊಂದಿದ್ದಾರೆ.