Advertisement

ಕೃಷ್ಣನೂರಿನಲ್ಲಿ ಅಂಕೆಗೆ ಸಿಗುತ್ತಿಲ್ಲ ಸೋಂಕು: 150 ಜನರ ದೇಹಕ್ಕಂಟಿದ ಸೋಂಕು

08:15 PM Jun 02, 2020 | keerthan |

ಉಡುಪಿ: ಕೃಷ್ಣನೂರು ಉಡುಪಿಯಲ್ಲಿ ಕೋವಿಡ್-19 ಸೋಂಕಿನ ಕಾಟ ಮತ್ತಷ್ಟು ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 150 ಜನರಿಗೆ ಕೋವಿಡ್-19 ಸೋಂಕು ದೃಢವಾಗಿದೆ ಎಂದು ಜಿಲ್ಲಾಧಿಕಾರಿಗಳು ತನ್ನ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

ಇಂದಿನ ಹೊಸ 150 ಸೋಂಕು ಪ್ರಕರಣಗಳನ್ನು ಸೇರಿಸಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 410ಕ್ಕೆ ಏರಿಕೆಯಾಗಿದೆ.

ಇಂದು ಬೆಳಿಗ್ಗೆ ಸಚಿವ ಅರ್. ಅಶೋಕ್ ಅವರ ಇಂದು ಉಡುಪಿಯಲ್ಲಿ 210 ಪ್ರಕರಣಗಳು ದೃಢಪಟ್ಟಿದೆ ಎಂದು ಮಾಹಿತಿ ನೀಡಿದ್ದರು. ಆದರೆ ಸದ್ಯ ಆರೋಗ್ಯ ಇಲಾಖೆ ವರದಿಯಲ್ಲಿ ಸೋಂಕು ಪ್ರಕರಣಗಳು ವರದಿಯಾಗಿದೆ. ಹೀಗಾಗಿ ಅಶೋಕ್ ಹೇಳಿಕೆಯಲ್ಲಿರುವ ಸಂಖ್ಯೆಗೂ ಜಿಲ್ಲಾಧಿಕಾರಿಗಳು ನೀಡಿರುವ ಸಂಖ್ಯೆಗೂ 60 ಮಂದಿಯಷ್ಟು ಅಂತರವಿದೆ.

ಸರಕಾರ ಕ್ವಾರಂಟೈನ್ ನಿಯಮಗಳನ್ನು ಬದಲಿಸಿ ಏಳು ದಿನಗಳ ಕ್ವಾರಂಟೈನ್ ಮುಗಿಸಿದವರನ್ನೂ ಮನೆಗೆ ಕಳುಹಿಸಿದೆ. ಮನೆಗೆ ಮರಳಿದ ನಂತರ ಬಹಳಷ್ಟು ಜನರ ಗಂಟಲು ದ್ರವ ಪರೀಕ್ಷೆಯ ವರದಿ ಬರುತ್ತಿದ್ದು, ಇದು ಜನರ ಆತಂಕ ಹೆಚ್ಚಿಸುವಂತೆ ಮಾಡಿದೆ. ತಿಂಗಳ ಹಿಂದೆ ಒಂದೇ ಒಂದು ಸಕ್ರಿಯ ಪ್ರಕರಣಗಳಿಲ್ಲದೆ ನಿರಾಳವಾಗಿದ್ದ ಉಡುಪಿ ಜಿಲ್ಲೆಯಲ್ಲಿ ಈ ಮಟ್ಟಿನ ಕೋವಿಡ್-19 ಪ್ರಕರಣಗಳ ಏರಿಕೆ, ಜನತೆ ಮಾತ್ರವಲ್ಲದೇ ಜಿಲ್ಲಾಡಳಿತದ ಆತಂಕಕ್ಕೂ ಕಾರಣವಾಗಿದೆ. ಕ್ವಾರಂಟೈನ್ ಕೇಂದ್ರಗಳಿಂದ ಮನೆಗೆ ಬರುತ್ತಿರುವ ಜನರಿಗೆ ಕೋವಿಡ್-19 ಪಾಸಿಟಿವ್ ಕಂಡು ಬರುತ್ತಿದ್ದು, ಜನತೆ ಭಯಭೀತರಾಗಿದ್ದಾರೆ.

ಜಿಲ್ಲೆಯಲ್ಲಿ ಸೋಮವಾರ 73 ಪ್ರಕರಣಗಳು ದೃಢವಾಗಿದ್ದವು. ನಾಲ್ವರು ಪೊಲೀಸರು, ದುಬೈನಿಂದ ಬಂದ ಮೂವರು ಬಿಟ್ಟರೆ ಉಳಿದ ಸೋಂಕತರೆಲ್ಲಾ ಮಹಾರಾಷ್ಟ್ರದಿಂದ ಬಂದವರೇ ಆಗಿದ್ದರು.

Advertisement

ಇಂದು ಕುಂದಾಪುರದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಜಿ ಜಗದೀಶ್ ಅವರು, ಎರಡು ದಿನಗಳಲ್ಲಿ ನಮಗೆ ಮೂರು ಸಾವಿರ ಗಂಟಲು ದ್ರವ ಪರೀಕ್ಷಾ ವರದಿ ಬಂದಿದೆ. ಕುಂದಾಪುರ ಮತ್ತು ಬೈಂದೂರಿನಲ್ಲಿ ಒಟ್ಟು 400 ಹಾಸಿಗೆಯ ಕೋವಿಡ್ ಆಸ್ಪತ್ರೆ ಸಿದ್ದಮಾಡುತ್ತಿದ್ದೇವೆ. ಸೋಂಕು ಲಕ್ಷಣ ಇಲ್ಲದವರಿಗೆ ಕೊಲ್ಲೂರಿನ ಲಲಿತಾಂಬಿಕಾ ಗೆಸ್ಟ್ ಹೌಸ್ ನಲ್ಲೂ ಚಿಕಿತ್ಸೆ ನೀಡಲು ಸಿದ್ದತೆ ಮಾಡುತ್ತಿದ್ದೇವೆ. ಸೋಂಕು ಲಕ್ಷಣ ಉಲ್ಬಣಿಸಿದವರಿಗೆ, ಗರ್ಭಿಣಿಯರಿಗೆ ಉಡುಪಿ ಟಿಎಂಪೈ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next