Advertisement

ವಿಜಯಪುರದಲ್ಲಿ ಮತ್ತೊಬ್ಬ ಕೋವಿಡ್ ಸೋಂಕಿತ ಪತ್ತೆ: 47 ಕ್ಕೇರಿದ ಸಂಖ್ಯೆ

01:44 PM May 04, 2020 | keerthan |

ವಿಜಯಪುರ: ಜಿಲ್ಲೆಯಲ್ಲಿ ಸೋಮವಾರ ಮತ್ತೊಬ್ಬರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 47 ಕ್ಕೆ ಏರಿದೆ.

Advertisement

ಸೋಂಕು ದೃಢಪಟ್ಟ 62 ವರ್ಷದ ಮಹಿಳೆಯನ್ನು ಪಿ-640 ಎಂದು ಗುರುತಿಸಲಾಗಿದೆ. ಸೋಂಕಿತ ಸಂಖ್ಯೆ 228 ರಿಂದ ಈಕೆಗೆ ಸೋಂಕು ತಗುಲಿರುವದು ದೃಢಪಟ್ಟಿದೆ

ಇದೇ ವೇಳೆ ಸೋಂಕು ಮುಕ್ತರಾಗಿ 15 ಜನರು ಮನೆಗೆ ಮರಳಿದ್ದು, ಸಕ್ರೀಯ ಸೋಂಕಿತರ ಸಂಖ್ಯೆ 30 ಕ್ಕೆ ಕುಸಿದಿದೆ. ಸೋಂಕು ದೃಢಪಡುವ ಮುನ್ನವೇ ಇಬ್ಬರು ಮೃತಪಟ್ಟಿದ್ದಾರೆ.

ರಾಜ್ಯದಲ್ಲಿಂದು ಒಟ್ಟು 28 ಜನರಿಗೆ ಕೋವಿಡ್-19 ಸೋಂಕು ದೃಢವಾಗಿದೆ. ಇದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 642ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇದುವರೆಗೆ ಸೋಂಕಿನಿಂದ 26 ಜನರು ಸಾವನ್ನಪ್ಪಿದ್ದು, 304 ಜನರು ಗುಣಮುಖರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next