Advertisement

ಬೆಳಗಾವಿಯ ಹಿರೇಬಾಗೇವಾಡಿಯಲ್ಲಿ ಮತ್ತೆ ಆರು ಕೋವಿಡ್-19 ಸೋಂಕು ದೃಢ

01:02 PM Apr 25, 2020 | keerthan |

ಬೆಳಗಾವಿ: ಕೋವಿಡ್-19 ವೈರಸ್ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಸಾಕಷ್ಟು ತಲ್ಲಣ ಸೃಷ್ಟಿಸಿದ್ದು ಶನಿವಾರ ಒಂದೇ ದಿನ ಆರು ಪ್ರಕರಣಗಳು ದೃಢಪಟ್ಟಿವೆ.

Advertisement

ರಾಜ್ಯ ಸರಕಾರ ಬಿಡುಗಡೆ ಮಾಡಿದ ವೈದ್ಯಕೀಯ ವರದಿಯಂತೆ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯಲ್ಲಿ ಈ ಎಲ್ಲ ಆರು ಪ್ರಕರಣಗಳು ದೃಢಪಟ್ಟಿರುವದು ತೀವ್ರ ಆತಂಕ ಉಂಟುಮಾಡಿದೆ. ಇದರೊಂದಿಗೆ ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಖಚಿತಪಟ್ಟವರ ಸಂಖ್ಯೆ 51 ಕ್ಕೇರಿದೆ.

ಈಗ ಸೋಂಕು ದೃಢಪಟ್ಟವರಲ್ಲಿ ನಾಲ್ವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಸೇರಿದ್ದು ಎಲ್ಲರಿಗೂ ಸೋಂಕಿತ ಸಂಖ್ಯೆ 128 ದ್ವಿತೀಯ ಸಂಪರ್ಕ ದಿಂದ ಸೋಂಕು ತಗುಲಿದೆ.

ರಾಜ್ಯದಲ್ಲಿ ಇಂದು 15 ಪ್ರಕರಣಗಳು ದೃಢವಾಗಿದೆ., ರಾಜ್ಯದಲ್ಲಿ ಒಟ್ಟು 489 ಸೋಂಕಿತ ಪ್ರಕರಣಗಳಿದ್ದು, ಅದರಲ್ಲಿ 153 ಜನರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. 18 ಜನರು ಸೋಂಕು ಕಾರಣದಿಂದ ಸಾವನ್ನಪ್ಪಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next