Advertisement

ಕೋವಿಡ್ 19 ಕಾರಣ: ಮತ್ತೆ ಲಾಕ್‌ಡೌನ್‌ ಬೇಡವೇ ಬೇಡವೆಂದ ಜನತೆ

03:25 AM Sep 25, 2020 | Hari Prasad |

ಬೆಂಗಳೂರು: ಕರ್ನಾಟಕವೂ ಸೇರಿದಂತೆ ದೇಶದ 7 ರಾಜ್ಯಗಳಲ್ಲಿ ಕೋವಿಡ್ 19 ಸೋಂಕು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ.

Advertisement

ಇದರ ಮಧ್ಯೆ ಸೋಂಕಿನ ನಿಯಂತ್ರಣಕ್ಕೆ ಮತ್ತೆ ಲಾಕ್‌ಡೌನ್‌ ಸೂಕ್ತ ಎಂಬ ಮಾತೂ ಕೇಳಿಬರುತ್ತಿದೆ. ಆದರೆ ಸರಕಾರ, ತಜ್ಞ ವೈದ್ಯರು, ಜನತೆ ಮತ್ತೆ ಲಾಕ್‌ ಡೌನ್‌ ಬೇಡ ಎಂದಿದ್ದಾರೆ.

ಗುರುವಾರ ಬೆಳಗ್ಗೆಯೇ ಈ ಕುರಿತ ಸುದ್ದಿಗಳನ್ನು ಅಲ್ಲಗಳೆದ ಡಿಸಿಎಂ ಡಾ|  ಸಿ.ಎನ್‌. ಅಶ್ವತ್ಥನಾರಾಯಣ, ಸಚಿವರಾದ ಆರ್‌. ಅಶೋಕ್‌, ಡಾ| ಸುಧಾಕರ್‌ ಮತ್ತೆ ಲಾಕ್‌ಡೌನ್‌ ಹೇರುವುದಿಲ್ಲ ಎಂದರು. ಜೆಡಿಎಸ್‌ ಶಾಸಕ ಎ.ಟಿ. ರಾಮಸ್ವಾಮಿ ಅವರಂತೂ ಸರಕಾರ ಈಗಲಾದರೂ ಸೋಂಕು ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ. ರಾಜ್ಯಾದ್ಯಂತ ಲಾಕ್‌ಡೌನ್‌ ಬೇಡ ಎಂಬ ಅಭಿಪ್ರಾಯವೇ ಕೇಳಿಬರುತ್ತಿದೆ.

ಸಾಮಾಜಿಕ ಜಾಲತಾಣದಲ್ಲೂ ವಿರೋಧ
‘ಉದಯವಾಣಿ’ಯ ಫೇಸ್‌ಬುಕ್‌ ಪೇಜ್‌ ಮತ್ತು ಟ್ವಿಟರ್‌ನಲ್ಲಿ “ಮತ್ತೆ ಲಾಕ್‌ಡೌನ್‌ ಜಾರಿಗೆ ತರುವ ಅಗತ್ಯವಿದೆಯೇ?’ ಎಂಬ ಬಗ್ಗೆ ಜನರಿಂದ ಅಭಿಪ್ರಾಯ ಕೇಳಲಾಗಿತ್ತು. ಬಹುತೇಕರು ಬೇಡ ಎಂದಿದ್ದಾರಲ್ಲದೆ, ಚಿಕಿತ್ಸಾ ವ್ಯವಸ್ಥೆಯಲ್ಲಿ ಸುಧಾರಣೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಈಗ ಉದ್ಯಮಗಳು ಹಗ್ಗದ ಮೇಲೆ ನಡೆಯುತ್ತಿವೆ. ಈಗ ಮತ್ತೆ ಲಾಕ್‌ಡೌನ್‌ ಮಾಡಿದರೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.
– ಸಿ.ಆರ್‌. ಜನಾರ್ದನ್‌, ಅಧ್ಯಕ್ಷ, FKCCI

Advertisement

ಲಾಕ್‌ಡೌನ್‌ ಶಾಶ್ವತ ಪರಿಹಾವಲ್ಲ. ಮೊದಲು ಸರಕಾರ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ನಿರ್ಗತಿಕರಿಗೆ, ಕೆಲಸ ಕಳೆದುಕೊಂಡವರಿಗೆ ಸಹಾಯ ಮಾಡಬೇಕು.
– ಕಿರಣ್‌ ಲೋಬೋ

ಲಾಕ್‌ಡೌನ್‌ನಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಜನ ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ನಿಯಮ ಪಾಲಿಸುವಂತೆ  ಕಠಿನ ನಿಯಮ ರೂಪಿಸಬೇಕು.
– ರಾಘವೇಂದ್ರ ಉಪಾಧ್ಯ

ತಜ್ಞರು ಹೇಳಿದ್ದೇನು?
ಮತ್ತೆ ಲಾಕ್‌ಡೌನ್‌ ಪರಿಹಾರವಲ್ಲ. ಬದಲಾಗಿ ಪರೀಕ್ಷೆ ಇನ್ನಷ್ಟು ಹೆಚ್ಚಿಸಬೇಕು. ಜನದಟ್ಟಣೆ ಹೆಚ್ಚಿರುವ ಪ್ರದೇಶಗಳನ್ನು  ಸಂಜೆ ಬಳಿಕ ಬಂದ್‌ ಮಾಡಬಹುದು.
– ಡಾ| ಸಿ.ಎನ್‌. ಮಂಜುನಾಥ್‌, ಜಯದೇವ ಹೃದ್ರೋಗ ವಿಜ್ಞಾನ ಸಂಶೋಧನ ಸಂಸ್ಥೆ  ನಿರ್ದೇಶಕ

ಒಂದೆರಡು ವಾರಗಳ ಲಾಕ್‌ಡೌನ್‌ನಿಂದ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ಸೋಂಕು ಪರೀಕ್ಷೆ ಹೆಚ್ಚಿಸಿ ಸೋಂಕಿತರನ್ನು ಪತ್ತೆ ಹಚ್ಚಿ ಹರಡುವಿಕೆ ನಿಯಂತ್ರಿಸಬೇಕು.
– ಡಾ| ವಿ. ರವಿ, ನಿಮ್ಹಾನ್ಸ್‌ನ ವೈರಾಲಜಿ ವಿಭಾಗದ ಮುಖ್ಯಸ್ಥರು

Advertisement

Udayavani is now on Telegram. Click here to join our channel and stay updated with the latest news.

Next