Advertisement

ಹಸುಗೂಸನ್ನು ತಾಯಿಯಿಂದ ದೂರ ಮಾಡಿದ ಕೋವಿಡ್ ಮಹಾಮಾರಿ!

10:50 PM Jul 05, 2020 | Hari Prasad |

ಹಾವೇರಿ: ವಿಶ್ವದಲ್ಲಿ ಈ ಕೋವಿಡ್ 19 ಮಹಾಮಾರಿ ತಂದೊಡ್ಡಿರುವ ಸಂಕಷ್ಟಗಳು ಒಂದೆರಡಲ್ಲ.

Advertisement

ಪ್ರಾಕೃತಿಕ ವಿಕೋಪಗಳು, ರಾಜಕೀಯ, ಮತೀಯ, ಜನಾಂಗೀಯ ಘರ್ಷಣೆಗಳು, ಇನ್ನಿತರ ಸಂಕಷ್ಟಗಳು ವಿಶ್ವದೆಲ್ಲೆಡೆ ಎದುರಾದ ಸಂದರ್ಭಗಳಲ್ಲಿ ಜನರು ಯಾವೆಲ್ಲಾ ರೀತಿಯಲ್ಲಿ ಬವಣೆ ಪಡುತ್ತಾರೋ ಅವೆಲ್ಲಕ್ಕಿಂತ ಹೆಚ್ಚಿನ ಬವಣೆಯನ್ನು ಈ ಕೋವಿಡ್ ಮಹಾಮಾರಿ ಜನಸಮುದಾಯಕ್ಕೆ ತಂದೊಡ್ಡಿದೆ.

ಅದಕ್ಕೊಂದು ದುರಂತ ನಿದರ್ಶನವೆಂಬಂತೆ ಈಗ ತಾನೇ ಹುಟ್ಟಿದ ನವಜಾತ ಶಿಶು ಒಂದು ಈ ಸೋಂಕಿನ ಕೆಂಗಣ್ಣಿಗೆ ಗುರಿಯಾಗಿದ್ದು ತನ್ನ ತಾಯಿ ಸೋಂಕಿತೆಯಾದ ಕಾರಣಕ್ಕೆ ಅಮ್ಮನ ಬೆಚ್ಚನೆಯ ಅಪ್ಪುಗೆಯಿಂದ ಈ ಶಿಶು ವಂಚಿತವಾಗುವಂತಾಗಿದೆ.

ಈ ಮೂಲಕ ಹೆರಿಗೆಯಾದ ನಾಲ್ಕೇ ದಿನದಲ್ಲಿ ತಾಯಿ ಹಾಗೂ ಮಗು ಬೇರೆಯಾಗಬೇಕಾದ ಘಟನೆ ಕರ್ಜಗಿಯಲ್ಲಿ ನಡೆದಿದೆ.

ತಾಲೂಕಿನ ಕರ್ಜಗಿ ಗ್ರಾಮದ 20 ವರ್ಷದ ಮಹಿಳೆ ಜುಲೈ 2ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ರವಿವಾರ ಬೆಳಗ್ಗೆ ತಾಯಿಗೆ ಕೋವಿಡ್ 19 ಸೋಂಕು ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಹೀಗಾಗಿ ತಾಯಿ ತನ್ನ ಪುಟ್ಟ ಕಂದನನ್ನು ಬಿಟ್ಟಿರಬೇಕಾದ ಅನಿವಾರ್ಯ ಪರಿಸ್ಥಿತಿ ಇದೀಗ ನಿರ್ಮಾಣವಾಗಿದೆ.

Advertisement

ಆದರೆ ಹಸುಗೂಸಿಗೆ ತಾಯಿಯ ಎದೆಹಾಲು ಅವಶ್ಯವಾಗಿರುವುದರಿಂದ ಸೋಂಕಿತೆ ತಾಯಿ ಎನ್-95 ಮಾಸ್ಕ್ ಹಾಗೂ ಕೈಗವಸು ಧರಿಸಿಕೊಂಡು ಸೂಕ್ತ ಸ್ಯಾನಿಟೈಸರ್ ಮಾಡಿಕೊಂಡು ಬಳಿಕ ತನ್ನ ಕಂದನಿಗೆ ನಿತ್ಯ ಐದಾರು ಬಾರಿ ಎದೆಹಾಲು ಉಣಿಸುವ ವ್ಯವಸ್ಥೆಯನ್ನು ಇದೀಗ ಮಾಡಲಾಗಿದೆ ಮತ್ತು ಬಳಿಕ ನವಜಾತ ಶಿಶುವನ್ನು ನವಜಾತ ಶಿಶುಗಳ ನಿಗಾ ಘಟಕದಲ್ಲಿ ಇರಿಸಿ ನೋಡಿಕೊಳ್ಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next