Advertisement

ಬೀದರ್: ಒಂದೇ ದಿನ ಕೋವಿಡ್ ಸೋಂಕಿಗೆ ಮೂರು ಬಲಿ

09:49 PM Jul 10, 2020 | Hari Prasad |

ಬೀದರ್: ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ತಣ್ಣಗಾಗಿದ್ದ ಹೆಮ್ಮಾರಿ ಕೋವಿಡ್ ಇಂದು ಮೂವರನ್ನು ಬಲಿ ಪಡೆದುಕೊಂಡಿದೆ.

Advertisement

ಇದರೊಂದಿಗೆ ಗಡಿ ನಾಡಿನಲ್ಲಿ ಸೋಂಕಿತರ ಸಾವು ಅರ್ಧ ಶತಕ ದಾಟಿದ್ದು, 52ಕ್ಕೆ ಏರಿಕೆಯಾಗಿದೆ.

75 ವರ್ಷದ ಪಿ-21399 ರೋಗಿ ಮತ್ತು 72 ವರ್ಷದ ಪಿ- 2622 ರೋಗಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇಬ್ಬರು ವೃದ್ಧರು ತೀವ್ರ ಉಸಿರಾಟ ಮತ್ತು ಜ್ವರ ಹಿನ್ನಲೆಯಲ್ಲಿ ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು ಅವರು ಚಿಕಿತ್ಸೆ ಫಲಿಸದೇ ಜು. 8ರಂದು ಸಾವನ್ನಪ್ಪಿದ್ದಾರೆ.

ನಗರದ ನಿವಾಸಿಯಾಗಿರುವ 61 ವರ್ಷದ ವ್ಯಕ್ತಿ ಪಿ- 26711 ರೋಗಿ ಉಸಿರಾಟ, ಶೀತ, ಜ್ವರ ಕಾರಣ ಆಸ್ಪತ್ರೆಗೆ ದಾಖಲಾಗಿದ್ದು, ಅವರು ಹೃದಯ ನೋವು ಸಹ ಇತ್ತು. ಚಿಕಿತ್ಸೆಗೆ ಸ್ಪಂದಿಸದೇ ಜು.6ರಂದು ಮೃತಪಟ್ಟಿದ್ದಾರೆ.

ಇನ್ನೂ ಜಿಲ್ಲೆಯಲ್ಲಿ ಶುಕ್ರವಾರ ಹೊಸದಾಗಿ ಕೋವಿಡ್ 19 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 15ಕ್ಕೂ ಹೆಚ್ಚು ಸೋಂಕಿತರ ಸಂಪರ್ಕವೇ ಇನ್ನೂ ಪತ್ತೆಯಾಗಿರುವುದು ಆತಂಕ ಹೆಚ್ಚಿಸಿದೆ.

Advertisement

ಅತಿ ಹೆಚ್ಚು ಬೀದರ್ ತಾಲೂಕಿನಲ್ಲಿ 7 ಕೇಸ್‌ಗಳು ಪತ್ತೆಯಾಗಿದ್ದರೆ ಇನ್ನುಳಿದಂತೆ ಔರಾದ, ಬಸವಕಲ್ಯಾಣ ಮತ್ತು ಭಾಲ್ಕಿ ತಾಲೂಕಿನಲ್ಲಿ ತಲಾ 4 ಪ್ರಕರಣಗಳು ಪತ್ತೆಯಾಗಿವೆ.

ಜಿಲ್ಲೆಯಲ್ಲಿ ಹೊಸ ಕೇಸ್‌ಗಳು ಸೇರಿ ಈವರೆಗೆ 913 ಪಾಸಿಟವ್ ಕೇಸ್‌ಗಳು ಪತ್ತೆಯಾಗಿದ್ದು, ಈ ಪೈಕಿ 52 ಜನ ಸಾವನ್ನಪ್ಪಿದ್ದರೆ 562 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 299 ಸಕ್ರೀಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಒಟ್ಟಾರೆ 42044 ಜನರ ಗಂಟಲು ದ್ರವ ಮಾದರಿಯ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ 37827 ಮಂದಿಯದ್ದು ನೆಗೆಟಿವ್ ಇದ್ದು, 3304 ಜನರ ವರದಿ ಬರುವುದು ಬಾಕಿ ಇದೆ.

Advertisement

Udayavani is now on Telegram. Click here to join our channel and stay updated with the latest news.

Next