Advertisement
ವಾಲ್‌ಸ್ಟ್ರೀಟ್‌ನಲ್ಲಿ ವಹಿವಾಟಿಗೆ ತಡೆ; ಪುನಾರಂಭಅಮೆರಿಕದ ವಾಲ್‌ಸ್ಟ್ರೀಟ್ ಷೇರು ಮಾರುಕಟ್ಟೆಯಲ್ಲಿ ಸೋಮವಾರ ವಹಿವಾಟು ಶುರುವಾದರೂ ಎಸ್‌ಆ್ಯಂಡ್ ಪಿ ಸೂಚ್ಯಂಕ 2, 490.47ರಷ್ಟು ಕುಸಿಯಿತು. ಹೀಗಾಗಿ, 15 ನಿಮಿಷ ಗಳ ಕಾಲ ವಹಿವಾಟು ಸ್ಥಗಿತಗೊಳಿಸಿ ಮತ್ತೆ ಮುಂದುವರಿಸಲಾಯಿತು.
ಬಾಂಬೆ ಷೇರು ಪೇಟೆಯಲ್ಲಿ ಸಂವೇದಿ ಸೂಚ್ಯಂಕ 2,713 ಪಾಯಿಂಟ್‌ಗಳಷ್ಟು ಕುಸಿದಿದೆ. ನಿಫ್ಟಿ ಸೂಚ್ಯಂಕ 9,200 ಅಂಕ ಕುಸಿದಿದೆ. ಬಿಎಸ್‌ಇ ಸೂಚ್ಯಂಕ 2,713. 41ರಷ್ಟು ಕುಸಿದು ದಿನದ ಅಂತ್ಯಕ್ಕೆ 31,390.07ರಲ್ಲಿ ಮುಕ್ತಾಯವಾಗಿದೆ.
Related Articles
Advertisement
ಕಚ್ಚಾ ತೈಲ ಬೆಲೆ ಕುಸಿತತೈಲ ವಹಿವಾಟು ಪ್ರಧಾನವಾಗಿರುವ ಕೊಲ್ಲಿ ರಾಷ್ಟ್ರಗಳಲ್ಲಿ ಕೂಡ ಷೇರು ಪೇಟೆ ಮತ್ತು ಕಚ್ಚಾ ತೈಲ ಬೆಲೆ ಮುಗ್ಗರಿಸಿದೆ. ಕೆಲವು ದಿನಗಳ ಹಿಂದಷ್ಟೇ ರಷ್ಯಾ ಮತ್ತು ಸೌದಿ ಅರೇಬಿಯಾ ನಡುವಿನ ದರ ಸಮರದಿಂದ 29 ವರ್ಷಗಳಷ್ಟು ಹಿಂದಿನ ಪ್ರಮಾಣಕ್ಕೆ ಕುಸಿದು, ಚೇತರಿಕೆ ಕಂಡಿತ್ತು. ಅಬುದಾಭಿ ಮತ್ತು ದುಬಾೖ ಷೇರುಪೇಟೆಗಳು ಕ್ರಮವಾಗಿ ಶೇ.7.8 ಮತ್ತು ಶೇ.6.2ರಷ್ಟು ಇಳಿಕೆ ಕಂಡವು. ಕಚ್ಚಾ ತೈಲ ಬೆಲೆ ಕೂಡ ಕುಸಿದಿದೆ. ವೆಸ್ಟ್ ಟೆಕ್ಸಸ್ ಇಂಟರ್ ಮೀಡಿಯೇಟ್ ಕಚ್ಚಾ ತೈಲ ಶೇ.10ರಷ್ಟು ಅಂದರೆ ಪ್ರತಿ ಬ್ಯಾರೆಲ್‌ಗೆ 28.57 ಡಾಲರ್‌ಗೆ ಕುಸಿದಿದೆ. ಬ್ರೆಂಟ್ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ ಶೇ.12.1 ಅಂದರೆ 29. 74 ಡಾಲರ್‌ಗೆ ಇಳಿಕೆಯಾಗಿದೆ. ಕೊರೊನಾ ಹಾವಳಿ ಮತ್ತಷ್ಟು ಮುಂದುವರಿದರೆ ಕಚ್ಚಾ ತೈಲ ಬೇಡಿಕೆ ಮತ್ತು ಪೂರೈಕೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗ ಲಿದೆ. ಈ ಬಗ್ಗೆ ಎಚ್ಚರಿಕೆ ನೀಡಿರುವ ಬ್ರಿಟಿಷ್ ಪೆಟ್ರೋಲಿಯಂ (ಬಿ.ಪಿ.)ಯ ಮುಖ್ಯ ಹಣಕಾಸು ಅಧಿಕಾರಿ ಬ್ರೈನ್ ಗಿಲ್ವರಿ 2020ರಲ್ಲಿ ತೈಲೋದ್ದಿಮೆಯ ಕ್ಷೇತ್ರಕ್ಕೆ ಭಾರಿ ಸವಾಲು ಎದುರಾಗಲಿದೆ ಎಂದಿದ್ದಾರೆ.