Advertisement

ಕೋವಿಡ್ ವೈರಸ್ ಸಾವಿನಲ್ಲಿ ಅಮೆರಿಕ ಇಟಲಿಯನ್ನು ಮೀರಿಸಲಿದೆಯೇ?

08:42 PM Apr 11, 2020 | Hari Prasad |

ವಾಷಿಂಗ್ಟನ್: ಕೋವಿಡ್ 19 ವೈರಸ್ ಹೊಡೆತಕ್ಕೆ ಬೆಚ್ಚಿಬಿದ್ದಿರುವ ಅಮೆರಿಕದಲ್ಲಿ ಕಳೆದ 3-4 ದಿನಗಳಿಂದ ಸತತವಾಗಿ ಭಾರೀ ಪ್ರಮಾಣದಲ್ಲಿ ಸೋಂಕಿತರು ಸಾವಿಗೀಡಾಗುತ್ತಿದ್ದಾರೆ. ಶುಕ್ರವಾರ ಒಂದೇ ದಿನ 1,842 ಮಂದಿ ಮೃತಪಟ್ಟಿದ್ದು, ಸೋಂಕಿತರ ಒಟ್ಟು ಸಂಖ್ಯೆ 4,76,397ಕ್ಕೇರಿದೆ. ಹೀಗಾಗಿ ಒಟ್ಟಾರೆ ಕೋವಿಡ್ ಕಾಟಕ್ಕೆ 17,843ಮಂದಿ ಬಲಿಯಾದಂತಾಗಿದೆ.

Advertisement

ಪರಿಸ್ಥಿತಿ ಕೈಮೀರಿದ್ದು, ಸಾವಿನ ಪ್ರಮಾಣಕ್ಕೆ ಹೋಲಿಸಿದರೆ ಅಮೆರಿಕವು ಈಗಾಗಲೇ ಸ್ಪೇನ್‌ ಅನ್ನು ಮೀರಿಸಿದ್ದು, ಸದ್ಯದಲ್ಲೇ ಇಟಲಿಯನ್ನೂ ದಾಟಿ ಮುಂದೆ ಸಾಗುವ ಲಕ್ಷಣ ಗೋಚರಿಸುತ್ತಿದೆ. ಸ್ಪೇನ್‌ನಲ್ಲಿ ಈವರೆಗೆ 15 ಸಾವಿರ ಮಂದಿ ಮೃತ ಪಟ್ಟಿದ್ದಾರೆ. ಮೊದಲ ಸ್ಥಾನದಲ್ಲಿರುವ ಇಟಲಿಯಲ್ಲಿ 18 ಸಾವಿರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಮೆರಿಕದಲ್ಲಿ ಶುಕ್ರವಾರ ಒಂದೇ ದಿನ 1842 ಮಂದಿ, ಗುರುವಾರ 1887, ಬುಧವಾರ 1799 ಮಂದಿ ಹಾಗೂ ಮಂಗಳವಾರ 1321 ಸಾವಿಗೀಡಾಗಿದ್ದಾರೆ.

ದೇಣಿಗೆ ಸಂಗ್ರಹ
ಭಾರತೀಯರ ಸಮೂಹ ಭಾರತ ಮತ್ತು ಅಮೆರಿಕದಲ್ಲಿ ಸಂಕಷ್ಟಕ್ಕೀಡಾದ ಬಡವರಿಗೆ ಹಾಗೂ ಹಸಿದವರಿಗೆ ಪರಿಹಾರ ಸಾಮಗ್ರಿ ವಿತರಿಸುವ ಸಲುವಾಗಿ ಬರೋಬ್ಬರಿ 6 ಲಕ್ಷ ಡಾಲರ್‌ ಮೊತ್ತವನ್ನು ಸಂಗ್ರಹಿಸಿದೆ.

ಭಾರತೀಯ ಅಮೆರಿಕನ್‌ ಪೆಪ್ಸಿಕೋ ಸಿಇಒ ಇಂದ್ರಾ ನೂಯಿ, ಉದ್ಯಮಿ ಆನಂದ್‌ ರಾಜಾರಾಮನ್‌, ಇಂಡಿಯಾನ್ಪೋರಾ ಮಂಡಳಿ ಸದಸ್ಯ ಸೇಜಲ್‌ ಹಾಥಿ, ಆಕ್ಸಿಲರ್‌ ವೆಂಚರ್ಸ್‌ ಮುಖ್ಯಸ್ಥ ಕ್ರಿಸ್‌ ಗೋಪಾಲಕೃಷ್ಣನ್‌ ಸೇರಿದಂತೆ ಅನೇಕರು ಅದರಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next