Advertisement
ವೈರಸ್‌ನ ಕೇಂದ್ರ ಬಿಂದುವಾದ ವುಹಾನ್ ನಗರದಲ್ಲಿನ ಸಾವಿನ ಪ್ರಮಾಣದ ಲೆಕ್ಕಾಚಾರವನ್ನು ಏಕಾಏಕಿ ಹೆಚ್ಚಿಸುವ ಮೂಲಕ ಸ್ವತಃ ಚೀನವೇ ಇಂಥದ್ದೊಂದು ಪ್ರಶ್ನೆ ಹುಟ್ಟುಹಾಕಿದೆ. ಸೋಂಕಿನ ಕೇಂದ್ರಸ್ಥಾನ ವುಹಾನ್‌ನಲ್ಲಿ ಸತ್ತವರ ಸಂಖ್ಯೆಯನ್ನು ಶುಕ್ರವಾರ ಶೇ. 50ರಷ್ಟು ಹೆಚ್ಚಿಸಿ ಚೀನ ಸರಕಾರ ಘೋಷಣೆ ಹೊರಡಿಸಿದೆ.
ಕೊರೊನಾ ಕುರಿತು ಅಂತಾರಾಷ್ಟ್ರೀಯ ಸಮುದಾಯಕ್ಕೆ ಸರಿಯಾದ ಮಾಹಿತಿ ಹಂಚಿಕೊಂಡಿಲ್ಲ ಎಂಬ ಬಗ್ಗೆ ಅಮೆರಿಕ ದೊಡ್ಡ ಧ್ವನಿಯಿಂದ ಆರೋಪಿಸುತ್ತಿದೆ. ಅದರ ಬಗ್ಗೆ ಮಾಹಿತಿ ಕೊಡದೆ ಜಗತ್ತಿಗೆ ಚೀನ ಮಣ್ಣೆರಚಿದೆಯೆಂದು ಅಧ್ಯಕ್ಷ ಟ್ರಂಪ್ ಪದೇ ಪದೆ ಹೇಳುತ್ತಾ ಬಂದಿದ್ದಾರೆ.
Related Articles
Advertisement
ಚೀನ ಹಲವು ಬಾರಿ ಮಾನದಂಡ ಬದಲುಆರಂಭದ ದಿನದಿಂದ ಈವರೆಗೆ ಸೋಂಕಿತರ ಹಾಗೂ ಮೃತರ ಸಂಖ್ಯೆಯನ್ನು ಬಹಿರಂಗಪಡಿಸುವ ವೇಳೆ ಚೀನ ಹಲವು ಬಾರಿ ಮಾನದಂಡಗಳನ್ನು ಬದಲಿಸುತ್ತಾ ಬಂದಿದೆ. ಆಗಲೇ ಅನೇಕ ದೇಶಗಳಿಂದ ಮಾತ್ರವಲ್ಲ, ಸ್ವತಃ ಚೀನೀಯರೇ ಈ ಕುರಿತು ಅನುಮಾನ ವ್ಯಕ್ತಪಡಿಸಿದ್ದೂ ಇದೆ. ಫೆಬ್ರವರಿಯ ಮಧ್ಯಭಾಗದಲ್ಲಿ ಚೀನ ಏಕಾಏಕಿ ಸೋಂಕಿತರ ಸಂಖ್ಯೆಗೆ ಹೆಚ್ಚುವರಿ 15 ಸಾವಿರ ಪ್ರಕರಣಗಳನ್ನು ಸೇರ್ಪಡೆ ಮಾಡಿತ್ತು. ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡದೇ ಇದ್ದ ಕೆಲವರ ಶ್ವಾಸಕೋಶದ ಎಕ್ಸ್‌ರೇ ತೆಗೆದಾಗ ಅವರಿಗೂ ಸೋಂಕು ಇರುವುದು ಗೊತ್ತಾಗಿರುವ ಕಾರಣ ಈ ಸಂಖ್ಯೆಯನ್ನು ಹೆಚ್ಚಳ ಮಾಡಲಾಗಿದೆ ಎಂಬ ಸ್ಪಷ್ಟನೆಯನ್ನು ಆಗ ಚೀನ ನೀಡಿತ್ತು. ಇದಾದ ಕೆಲವೇ ದಿನಗಳ ಬಳಿಕ, ಅಲ್ಲಿನ ರಾಷ್ಟ್ರೀಯ ಆರೋಗ್ಯ ಆಯೋಗವು ಮೃತಪಟ್ಟವರ ಪಟ್ಟಿಯಿಂದ 108 ಮಂದಿಯ ಹೆಸರನ್ನು ತೆಗೆದುಹಾಕಿತು. ಹ್ಯುಬೆ ಪ್ರಾಂತ್ಯದಲ್ಲಿ ಎರಡೆರಡು ಬಾರಿ ಮೃತರನ್ನು ಲೆಕ್ಕ ಹಾಕಿದ ಕಾರಣ, ಲೆಕ್ಕ ತಪ್ಪಾಗಿತ್ತು ಎಂಬ ಕಾರಣವನ್ನು ಆಗ ನೀಡಿತ್ತು. ಫೆಬ್ರವರಿ ಅಂತ್ಯದಲ್ಲಿ ಮತ್ತೂಮ್ಮೆ ಸೋಂಕಿತರನ್ನು ಲೆಕ್ಕ ಹಾಕುವ ವಿಧಾನವನ್ನು ಬದಲಿಸಿದ ಚೀನ, ಶ್ವಾಸಕೋಶದ ಇಮೇಜಿಂಗ್ ಪ್ರಕ್ರಿಯೆಯಲ್ಲಿ ಪಾಸಿಟಿವ್ ಬಂದ ಪ್ರಕರಣಗಳನ್ನು ಪಟ್ಟಿಯಿಂದ ಕೈಬಿಡಲಾಗುವುದು ಎಂದು ಘೋಷಿಸಿತು. ವಾದವೇನು?
– ಸೋಂಕಿನ ಆರಂಭಿಕ ದಿನಗಳಲ್ಲಿ ಹೆಚ್ಚಿನ ಜನರು ರೋಗಲಕ್ಷಣವಿದ್ದರೂ ಹೇಳಲು ಮುಂದೆ ಬರಲಿಲ್ಲ. – ಸಮರ್ಪಕ ಚಿಕಿತ್ಸಾ ಸೌಲಭ್ಯಗಳು ಇರಲಿಲ್ಲ. ನಾವು ಸಾಕಷ್ಟು ಜನರನ್ನು ಪರೀಕ್ಷೆಗೆ ಒಳಪಡಿಸಿರಲಿಲ್ಲ. – ಕೆಲವು ರೋಗಿಗಳು ಸೋಂಕು ತಗುಲಿ ಮನೆಗಳಲ್ಲೇ ಮೃತಪಟ್ಟಿದ್ದಾರೆ. ಅವರ ವಿಚಾರ ದಾಖಲೇ ಆಗಿರಲಿಲ್ಲ. ಚೀನ ಜಿಡಿಪಿ ಕುಸಿತ
ಕೋವಿಡ್ ನಿಂದಾಗಿ 1992ರ ಅನಂತರ ಇದೇ ಮೊದಲ ಬಾರಿಗೆ ಚೀನದ ಜಿಡಿಪಿಯಲ್ಲಿ ಕುಸಿತ ಕಂಡು ಬಂದಿದೆ. ಈ ದು:ಸ್ಥಿಯಿಂದ ಹೊರ ಬಂದು ಪುನಃ ಮೊದಲಿನಂತೆ ಆಗಲು ಕೆಲ ಸಮಯ ಹಿಡಿಯಬಹುದು ಎಂದು ವರದಿ ಹೇಳಿದೆ. ಜನವರಿ-ಮಾರ್ಚ್ ಅವಧಿಯ ಮೂರು ತಿಂಗಳಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಆರ್ಥಿಕತೆ (ಜಿಡಿಪಿ) ಶೇ.6.8ರಷ್ಟು ಕುಸಿದಿದೆ ಎಂದು ಸರಕಾರದ ಅಧಿಕೃತ ಅಂಕಿ-ಅಂಶಗಳು ತಿಳಿಸಿವೆ. ಇದಕ್ಕೂ ಮೊದಲು ದೇಶದ ಜಿಡಿಪಿ ಶೇ.6.5ರಷ್ಟಿರಬಹುದು ಎಂದು ಅಂದಾಜಿಸಲಾಗಿತ್ತು. ಇದೇ ವೇಳೆ, ತ್ತೈಮಾಸಿಕ ಅವಧಿಗೆ ಹೋಲಿಸಿದರೆ ವರ್ಷದ ಮೊದಲ ಮೂರು ತಿಂಗಳ ಅವಧಿಯಲ್ಲಿ ಜಿಡಿಪಿ ಶೇ. 9.8ರಷ್ಟಿಕ್ಕೆ ಕುಸಿದಿದೆ ಎಂದು ನ್ಯಾಶನಲ್ ಬ್ಯೂರೋ ಆಫ್ ಸ್ಟಾಟಿಸ್ಟಿಕ್ಸ್ ತಿಳಿಸಿದೆ. ಇದು ನಿರೀಕ್ಷೆಯ ಮಟ್ಟಕ್ಕೆ (ಶೇ.9.9)ಸಮಿಪದಲ್ಲಿದ್ದು, ಕಳೆದ ತ್ತೈಮಾಸಿಕಕ್ಕೆ ಹೋಲಿಸಿದರೆ ಶೇ.1.5ರಷ್ಟು ಬೆಳವಣಿಗೆ ಕಂಡಿದೆ ಎಂದು ಅದು ತಿಳಿಸಿದೆ. ಆರೋಪ ನಿರಾಕರಣೆ
ಕೋವಿಡ್ ಸಾವಿನ ವಿಚಾರವನ್ನು ಮುಚ್ಚಿಟ್ಟಿದೆ ಎಂಬ ಆರೋಪವನ್ನು ಚೀನ ತಳ್ಳಿಹಾಕಿದೆ. ನಾವು ಯಾವುದನ್ನೂ ಮುಚ್ಚಿಟ್ಟಿಲ್ಲ, ಮುಚ್ಚಿಡುವುದೂ ಇಲ್ಲ. ವೈರಸ್‌ನ ವ್ಯಾಪಿಸುವಿಕೆ ತೀವ್ರವಾಗಿದ್ದ ಕಾರಣ ಕೆಲವೆಡೆ ಕೆಲವೊಂದು ದೋಷಗಳು ಕಂಡುಬಂದಿರುವ ಕಾರಣ, ಪ್ರಕರಣಗಳು ವರದಿಯಾಗಿರಲಿಲ್ಲ. ಈಗ ನಾವು ಪ್ರಾಮಾಣಿಕವಾಗಿ ಸಂಖ್ಯೆಯನ್ನು ಹೆಚ್ಚಳ ಮಾಡಿಕೊಂಡಿದ್ದೇವೆ ಎಂದು ಚೀನ ವಿದೇಶಾಂಗ ಇಲಾಖೆ ಹೇಳಿದೆ. ಮೂಲ ತನಿಖೆಯಾಗಲಿ: ಅಮೆರಿಕ ಸಂಸದರು
ವೈರಸ್ ಮೂಲದ ಬಗ್ಗೆ ಮುಕ್ತ ಹಾಗೂ ಪಾರದರ್ಶಕ ತನಿಖೆ ನಡೆಯಬೇಕು ಎಂದು ಅಮೆರಿಕ ಸಂಸದರ ಒಕ್ಕೂಟವೊದು ಆಗ್ರಹಿಸಿದೆ. ಈ ತನಿಖೆಗೆ ಜಪಾನ್, ದಕ್ಷಿಣ ಕೊರಿಯಾ ಮತ್ತು ಐರೋಪ್ಯ ರಾಷ್ಟ್ರಗಳ ನೆರವನ್ನೂ ಪಡೆಯಬೇಕು ಎಂದು ಅಧ್ಯಕ್ಷ ಟ್ರಂಪ್‌ಗೆ ಒತ್ತಾಯಿಸಿದೆ. ಆರೋಗ್ಯ ಬಿಕ್ಕಟ್ಟಿಗೆ ಸಂಬಂಧಿಸಿ ವಿಶ್ವ ಆರೋಗ್ಯ ಸಂಸ್ಥೆ ಕೈಗೊಂಡ ನಿರ್ಧಾರಗಳ ಕುರಿತೂ ತನಿಖೆಯಾಗಬೇಕು ಎಂದೂ ಸಂಸದರು ಕೋರಿದ್ದಾರೆ. ತನಿಖೆಯಲ್ಲಿ ಅಂತಾರಾಷ್ಟ್ರೀಯ ಸಹಭಾಗಿತ್ವ ಇರುವಂತೆ ನೋಡಿಕೊಂಡು, ಅದಕ್ಕೆಂದೇ ಉನ್ನತ ಮಟ್ಟದ ರಾಯಭಾರಿಗಳ ಸಮಿತಿಯನ್ನು ನೇಮಿಸಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ. ಆಫ್ರಿಕಕ್ಕೆ ಕಾದಿದೆ ಆಪತ್ತು
ಆಫ್ರಿಕಕ್ಕೆ ಸೋಂಕಿನಿಂದಾಗಿ ಆಪತ್ತು ಉಂಟಾಗಲಿದೆ. ಅದುವೇ ಮುಂದೆ ಹಾಟ್‌ಸ್ಪಾಟ್ ಆಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಇದುವರೆಗೆ ಅಲ್ಲಿ 18 ಸಾವಿರ ಮಂದಿಗೆ ಸೋಂಕು ತಗಲಿದ್ದು, 1 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಆಫ್ರಿಕಾ ಖಂಡದ ದೇಶಗಳಲ್ಲಿ ಬಡತನ, ಸೂಕ್ತ ವೈದ್ಯಕೀಯ ವ್ಯವಸ್ಥೆ ಇಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ. ಇದೇ ವೇಳೆ ವಿಶ್ವಸಂಸ್ಥೆಯಲ್ಲಿ ಆಫ್ರಿಕಕ್ಕಾಗಿ ಇರುವ ಆರ್ಥಿಕ ಆಯೋಗದ ಮುನ್ನೆಚ್ಚರಿಕೆ ಪ್ರಕಾರ ಮೂರು ಲಕ್ಷ ಮಂದಿ ಅಸುನೀಗಲಿದ್ದಾರೆ. 120 ಕೋಟಿ ಮಂದಿಗೆ ಸೋಂಕು ತಗಲುವ ಸಾಧ್ಯತೆ ಇದೆ ಎಂದಿದೆ. ಮತ್ತೊಂದೆಡೆ, ಸೋಂಕಿನ ಬಗ್ಗೆ ಜಗತ್ತಿಗೆ ಮಾಹಿತಿ ಮುಚ್ಚಿಟ್ಟಿದೆ ಎಂದು ಫ್ರಾನ್ಸ್ ಮತ್ತು ಯು.ಕೆ. ಆರೋಪಿಸಿದ್ದು, ಈ ಬಗ್ಗೆ ತನಿಖೆಗೆ ಒತ್ತಾಯಿಸಿವೆ.