ಪೋರ್ಚುಗಲ್(ನಾರ್ವೆ): ಔಷಧ ತಯಾರಿಕಾ ಸಂಸ್ಥೆ ಫೈಜರ್ ಮತ್ತು ಬಯೋಟೆಕ್ ಅಭಿವೃದ್ಧಿಪಡಿಸಿದ ಕೋವಿಡ್ ಲಸಿಕೆಯನ್ನು ಪಡೆದಿದ್ದ ಇಬ್ಬರು ನರ್ಸ್ ಗಳು ಸಾವನ್ನಪ್ಪಿದ್ದು, ಈ ಕುರಿತು ತನಿಖೆ ನಡೆಸಲು ನಾರ್ವೆ ಸರ್ಕಾರ ಬುಧವಾರ(ಜನವರಿ 06, 2021) ಆದೇಶ ನೀಡಿರುವುದಾಗಿ ವರದಿ ತಿಳಿಸಿದೆ.
ಪೋರ್ಚುಗಲ್ ನಲ್ಲಿ ಮಕ್ಕಳ ಶಸ್ತ್ರಚಿಕಿತ್ಸಾ ಸಹಾಯಕರಿಬ್ಬರು ಫೈಜರ್ ಲಸಿಕೆಯನ್ನು ಪಡೆದ ಎರಡು ದಿನಗಳ ಬಳಿಕ ಸಾವನ್ನಪ್ಪಿರುವ ಘಟನೆ ನಡೆದಿರುವುದಾಗಿ ವರದಿ ಹೇಳಿದೆ.
ಲಸಿಕೆಯಿಂದಲೇ ಸಾವಿಗೆ ಕಾರಣವಾಗಿದೆಯೇ ಅಥವಾ ಒಂದು ವೇಳೆ ಇದು ಲಸಿಕೆ ಪಡೆದ ನಂತರ ಕಾಕತಾಳೀಯವಾಗಿ ಸಾವು ಸಂಭವಿಸಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ನಾರ್ವೆಯ ಮೆಡಿಸಿನ್ ಏಜೆನ್ಸಿಯ ನಿರ್ದೇಶಕ ಸ್ಟೈನರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏತನ್ಮಧ್ಯೆ ಮೊದಲ ಹಂತದಲ್ಲಿ ಯುವ ಜನತೆ ಪಡೆದಿರುವ ಕೋವಿಡ್ ಲಸಿಕೆ ಪಡೆದ ನಂತರ ಸಂಭವಿಸಿದ ಸಾವುಗಳು ಕಾಕತಾಳೀಯವಾಗಿರಬಹುದು ಎಂದು ಸ್ಟೈನರ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಈಗಾಗಲೇ ಪೋರ್ಚುಗಲ್ ನಲ್ಲಿ 538 ಆರೋಗ್ಯ ಕಾರ್ಯಕರ್ತರಿಗೆ ಫೈಜರ್ ಲಸಿಕೆ ನೀಡಲಾಗಿದೆ. ಒಟ್ಟು, 4, 27,000 ಸಾವಿರ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 7,118 ಮಂದಿ ಸಾವನ್ನಪ್ಪಿದ್ದರು.