Advertisement

ಸಿಎಂ ಅಂಗಳದಲ್ಲಿ ರಾತ್ರಿ ಕರ್ಫ್ಯೂ ಚೆಂಡು

01:57 PM Aug 03, 2021 | Team Udayavani |

ಬೆಂಗಳೂರು: ನಗರದಲ್ಲಿ ಮತ್ತೆ ಕೋವಿಡ್‌ ಸೋಂಕಿನ ಭೀಕರತೆ ಹೆಚ್ಚಾಗುವ ಆತಂಕವಿದ್ದು, ಪುನಃ ವೀಕೆಂಡ್‌ ಮತ್ತು ರಾತ್ರಿ ಕರ್ಫ್ಯೂ ಜಾರಿ ಬಗ್ಗೆ ಚಿಂತನೆ ನಡೆಯುತ್ತಿದೆ. ಈ ನಡುವೆ ಪಾಲಿಕೆ, ಜನಸಾಮಾನ್ಯರ ಜೀವನಕ್ಕೆ ತೊಂದರೆಯಾಗದಂತೆ ಕೋವಿಡ್‌ 3ನೇ ಅಲೆ ಎದುರಿಸಲು ಪೂರ್ವ ಸಿದ್ಧತೆ ನಡೆಸುತ್ತಿದೆ. ಜತೆಗೆ, ಕರ್ಫ್ಯೂ ಜಾರಿ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿದ್ದು, ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳು ಅಂತಿಮ
ತೀರ್ಮಾನ ಪ್ರಕಟಿಸುವ ಸಾಧ್ಯತೆಯಿದೆ.

Advertisement

ಸರ್ಕಾರ ಮಟ್ಟದಲ್ಲಿ ಕೋವಿಡ್‌ ಟಾಸ್ಕ್ ಫೋರ್ಸ್‌ ಸಮಿತಿ ಈಗಾಗಲೇ ಸರ್ಕಾರಕ್ಕೆ ವರದಿ ನೀಡಿದೆ. ಈ ನಡುವೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ,ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್‌ ನಿಯಮಗಳ ಪಾಲನೆ ಸಂಬಂಧ ಸೋಮವಾರ ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ನಗರ ಪೊಲೀಸ್‌ ಆಯುಕ್ತರ ಜತೆಗೆ ಸಮನ್ವಯ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಪೂರ್ವ ನಿಯೋಜಿತವಾಗಿ ಕೈಗೊಳ್ಳಬೇಕಾದ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ.

ರಾತ್ರಿ ಕರ್ಫ್ಯೂ ಹಾಗೂ ಪರಿಣಾಮಕಾರಿ ಕ್ರಮಗಳ ಜಾರಿ ಬಗ್ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ, ರಾತ್ರಿ ಕರ್ಫ್ಯೂ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯಬೇಕಿದೆ. ಶೀಘ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ  ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಈ ಬಗ್ಗೆ ಸಮಾಲೋಚನೆ ನಡೆಯಲಿದೆ ಎಂದು ತಿಳಿಸಿದರು.

ನಗರದಲ್ಲಿ ಕೋವಿಡ್‌ ನಿಯಂತ್ರಿಸುವ ನಿಟ್ಟಿನಲ್ಲಿ ಪಾಲಿಕೆಯಿಂದ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೋವಿಡ್‌ ದೃಢವಾದವರಿಗೆಕಡ್ಡಾಯವಾಗಿ ಫಿಸಿಕಲ್‌ ಟ್ರಯಾಜ್‌ ಮಾಡುವುದು,ಕಾಂಟ್ಯಾಕ್ಟ್ಟ್ರೇಸಿಂಗ್‌,ಐಸೋಲೇಟ್‌, ಮೂರು ಅಥವಾ ಅದಕ್ಕಿಂತ ಹೆಚ್ಚು ಪ್ರಕರಣ ಪತ್ತೆಯಾದ ಪ್ರದೇಶವನ್ನು ಕಂಟೈನ್ಮೆಂಟ್‌ ವಲಯವನ್ನಾಗಿ ಗುರುತಿಸುವಕೆಲಸ ಮಾಡಲಾಗುತ್ತಿದೆ ಎಂದರು.

ಮಾಸ್ಕ್, ಸಾಮಾಜಿಕ ಅಂತರ ಬಗ್ಗೆ ಹೆಚ್ಚು ನಿಗಾವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪೊಲೀಸರು ಕರ್ತವ್ಯ ನಿರ್ವಹಿಸುವಾಗ ಎಚ್ಚರಿಕೆ
ವಹಿಸಬೇಕು. ಕೋವಿಡ್‌ ಹೆಚ್ಚು ಇರುವ ಕಡೆ ಮೈಕ್ರೋಕಂಟೈನ್ಮೆಂಟ್‌ ಮತ್ತು ಕಂಟೈನ್ಮೆಂಟ್‌ಝೋನ್ ನಿರ್ಮಾಣ ಮಾಡುವುದು ಹಾಗೂ ಮೂರನೇ ಅಲೆಗೆ ಬೇಕಿರುವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

Advertisement

ಪಾಲಿಕೆ ವಿಶೇಷ ಆಯುಕ್ತ(ಆರೋಗ್ಯ) ಡಿ.ರಂದೀಪ್‌, ಹೆಚ್ಚುವರಿ ಪೊಲೀಸ್‌ ಆಯುಕ್ತ ಮುರುಗನ್‌, ಪಾಲಿಕೆ ಅಧಿಕಾರಿಗಳಾದ ಮನೋಜ್‌ ಜೈನ್‌,
ಡಾ.ಹರೀಶ್‌ ಕುಮಾರ್‌, ರವೀಂದ್ರ, ದಯಾನಂದ್‌,ರೆಡ್ಡಿ ಶಂಕರ ಬಾಬು, ತುಳಸಿ ಮದ್ದಿನೇನಿ, ರವೀಂದ್ರ, ಎಲ್ಲ ವಲಯ ಜಂಟಿ ಆಯುಕ್ತರು, ವಲಯ ಡಿಸಿಪಿಗಳು, ಮುಖ್ಯ ಆರೋಗ್ಯ ಅಧಿಕಾರಿ, ಎಲ್ಲ ವಲಯ ಆರೋಗ್ಯಾಧಿಕಾರಿಗಳು ಇದ್ದರು. ತಳಮಟ್ಟದಿಂದ ಕೆಲಸ ಮಾಡಬೇಕು: ಪಾಲಿಕೆ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ಮಾತನಾಡಿ,ನಗರದಲ್ಲಿ ಕೋವಿಡ್‌ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ತಳಮಟ್ಟದಲ್ಲಿ ಸರಿಯಾಗಿ ಕೆಲಸ ಮಾಡಬೇಕು. ಆಯಾ ವಲಯ ಮಟ್ಟದಲ್ಲಿ ಸೋಂಕು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಪಾಲಿಕೆ ಹಾಗೂ ಪೊಲಿಸ್‌ ಇಲಾಖೆ,ಎಲ್ಲ ನಾಗರೀಕರು ಕಡ್ಡಾಯವಾಗಿ ಕೋವಿಡ್‌ ನಿಯಮಗಳನ್ನು ಪಾಲಿಸಲು ಜಾಗೃತಿ ಮುಡಿಸಬೇಕು. ಜಾಗೃತಿ ಮುಡಿಸಿದ ಬಳಿಕವೂ ನಿಯಮಗಳನ್ನು ಪಾಲಿಸದಿದ್ದಲ್ಲಿ ದಂಡ ವಿಧಿಸಬೇಕು ಹಾಗೂ ಪ್ರಕರಣಗಳನ್ನು ದಾಖಲಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಉತ್ತಮ ಸಮನ್ವಯತೆ
ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಮಾತನಾಡಿ, ನಗರದಲ್ಲಿ ಕೋವಿಡ್‌ ನಿಯಂತ್ರಿಸುವ ಸಲುವಾಗಿ ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸ್‌ ಸಿಬ್ಬಂದಿಯ ಜೊತೆ ಉತ್ತಮ ಸಮನ್ವಯತೆಯಿದೆ. ಪೊಲೀಸ್‌ ಇಲಾಖೆಯಿಂದ ಬೇಕಾದಂತಹ ಸಹಕಾರ ನೀಡಲಾಗುವುದು. ಕೋವಿಡ್‌ ನಿಯಮಗಳನ್ನು ಪಾಲಿಸದಿರುವವರ ಮೇಲೆ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ಹೇಳಿದರು.

ನಗರದಲ್ಲಿ ರಾತ್ರಿಕರ್ಫ್ಯೂ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗಿದ್ದು, ಅದನ್ನು ಸರಿಯಾಗಿ ಅನುಸರಿಸಬೇಕಿದೆ. ಅದಕ್ಕೆ ಪೊಲೀಸ್‌ ಇಲಾಖೆ ಸಹಕಾರ ಪ್ರಮುಖವಾಗಿದೆ.
-ಗೌರವ್‌ ಗುಪ್ತ,
ಬಿಬಿಎಂಪಿ ಮುಖ್ಯ ಆಯುಕ

ನಗರದಲ್ಲಿ ಲಸಿಕೆ ಅಭಾವ ಹೆಚ್ಚಳ: ಆಯುಕ್ತ
ಬೆಂಗಳೂರು: ಪಾಲಿಕೆಗೆ ಅಗತ್ಯ ಸಂಖ್ಯೆಯಲ್ಲಿ ಕೋವಿಡ್‌ ಲಸಿಕೆ ಲಭ್ಯವಾಗುತ್ತಿಲ್ಲ. ಹೀಗಾಗಿ, ನಗರದಲ್ಲಿ ಲಸಿಕೆ ಅಭಾವ ಹೆಚ್ಚಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ ತಿಂಗಳಲ್ಲಿ ಬೇಡಿಕೆಗೆ ತಕ್ಕಂತೆ ಪಾಲಿಕೆಗೆ ಕೋವಿಡ್‌ ಲಸಿಕೆ ಲಭ್ಯವಾಗಲಿಲ್ಲ. ನಗರದಲ್ಲಿ ಶೇ.17 ರಷ್ಟು ಜನರು ಮಾತ್ರ ಲಸಿಕೆ ಪಡೆದಿದ್ದಾರೆ. ಬಿಬಿಎಂಪಿಗೆ ನಿತ್ಯ 1.50 ಲಕ್ಷ ಡೋಸ್‌ ಲಸಿಕೆ ಬೇಕಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆಗೆ
ಪ್ರಸ್ತಾವನೆ(ಬೇಡಿಕೆ) ಸಲ್ಲಿಸಲಾಗಿದೆ ಎಂದರು.

ಮೂರನೇ ಅಲೆಗೆ ಪಾಲಿಕೆ ಸಿದ್ಧತೆ ನಡೆಸಿರುವ ಕುರಿತು ಮಾತನಾಡಿ, ಸದ್ಯ ಎರಡನೇ ಅಲೆಯ ವ್ಯವಸ್ಥೆ ಹಾಗೇ ಉಳಿದಿದೆ. ಇನ್ನುಮುಂದೆ ಫಿಜಿಕಲ್‌ ಟ್ರಯಾಜ್‌ ಕಡ್ಡಾಯವಾಗಿ ಮಾಡಲಾಗುತ್ತದೆ. 400ರಷ್ಟು ಬೆಡ್‌ ಮಾತ್ರ ಸರ್ಕಾರಿ ಕೋಟಾದಲ್ಲಿ ರೋಗಿಗಳು ಇದ್ದಾರೆ. ಎಲ್ಲ ದೊಡ್ಡ ಆಸ್ಪತ್ರೆಗಳಲ್ಲೂ ಆಕ್ಸಿಜನ್‌ ಪ್ಲಾಂಟ್‌ ನಿರ್ಮಾಣ ಮಾಡಲಾಗಿದೆ. ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೂ ಈ ಬಗ್ಗೆ ಸೂಚನೆ ನೀಡಲಾಗಿದೆ. ಪೊಬತ್ತಿಯಲ್ಲಿರುವ ಆಸ್ಪತ್ರೆಯಲ್ಲಿ ಪಾಲಿಕೆಯು, ಪ್ರತ್ಯೇಕ ಆಕ್ಸಿಜನ್‌ ಪ್ಲಾಂಟ್‌ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next