Advertisement

ಕಡ್ಡಾಯ ಕೋವಿಡ್‌ ಲಸಿಕೆ; ನ್ಯೂಜಿಲ್ಯಾಂಡ್‌ನ‌ಲ್ಲಿ ಭಾರೀ ಪ್ರತಿಭಟನೆ

12:17 AM Mar 03, 2022 | Team Udayavani |

ವೆಲ್ಲಿಂಗ್ಟನ್‌: ಕೊರೊನಾ ವಿರುದ್ಧ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂಬ ನ್ಯೂಜಿಲ್ಯಾಂಡ್‌ ಸರಕಾರದ ನಿಯಮ ಜನರನ್ನು ರೊಚ್ಚಿಗೇಳುವಂತೆ ಮಾಡಿದೆ.

Advertisement

ಪೊಲೀಸರ ಜತೆಗೆ ಪ್ರತಿಭಟನ ಕಾರರು ಘರ್ಷಣೆಗೆ ಇಳಿದಿದ್ದಾರೆ ಮತ್ತು ಟೆಂಟ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಹೀಗಾಗಿ 23 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಬುಧವಾರ ಏಕಾಏಕಿ ಬಿರುಸುಗೊಂಡಿದೆ.

ಪೊಲೀಸರು ಪ್ರತಿಭಟನಾಕಾರರ ಟೆಂಟ್‌ಗಳನ್ನು ತೆರವುಗೊಳಿಸುವ ಪ್ರಯತ್ನದಿಂದ ಜನರು ರೊಚ್ಚಿಗೆದ್ದರು. ಅವರು ಟೆಂಟ್‌ಗಳಿಗೆ ಬೆಂಕಿ ಹಚ್ಚಿದ್ದಾರಲ್ಲದೆ, ಘರ್ಷಣೆಗೂ ಇಳಿದಿದ್ದಾರೆ. ಅವರನ್ನು ಚದುರಿಸುವ ನಿಟ್ಟಿನಲ್ಲಿ ಪೊಲೀಸರು ರಬ್ಬರ್‌ ಬುಲೆಟ್‌ ಪ್ರಯೋಗಿಸಿದ್ದಾರೆ.

ಎಲ್ಲದಕ್ಕಿಂತ ಹೆಚ್ಚಾಗಿ 5 ಲಕ್ಷ ಡಾಲರ್‌ (2.56 ಕೋಟಿ ರೂ.) ಮೊತ್ತದಲ್ಲಿ ನಿರ್ಮಿಸಲಾಗಿರುವ ಸಂಸತ್‌ ಭವನದ ಒಂದು ಭಾಗ ಕೂಡ ಪ್ರತಿಭಟ ನಕಾರರ ಆಕ್ರೋಶಕ್ಕೆ ಆಹುತಿಯಾಗಿದೆ. ಅದರ ಫೋಟೋ ಮತ್ತು ವೀಡಿಯೋ ವೈರಲ್‌ ಆಗಿದೆ. ಅಲ್ಲಿ ಪ್ರತಿಭಟ ನಕಾರರು ದಾಂಧಲೆ ನಡೆಸಿ, ಬೆಂಕಿ ಹಚ್ಚಿದ್ದಾರೆ. ವೆಲ್ಲಿಂಗ್ಟನ್‌ನಿಂದ ಇತರ ಭಾಗ ಗಳಿಗೆ ತೆರಳುವ ರೈಲುಗಳನ್ನು ರದ್ದು ಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next