ಹೊಸದಿಲ್ಲಿ: ಈಗಾಗಲೇ ಬ್ಯಾಂಕ್‌ಗಳಲ್ಲಿ ವಿವಿಧ ರೀತಿಯ ಸಾಲ ಪಡೆದವರಿಗೆ 3 ತಿಂಗಳ ಇಎಂಐ ವಿನಾಯಿತಿ ಸಿಕ್ಕಿದೆ.
ಈಗ ಲಾಕ್‌ಡೌನ್ ಮೇ 31ರವರೆಗೆ ವಿಸ್ತರಿಸಿರುವ ಪರಿಣಾಮ, ಇನ್ನೂ 3 ತಿಂಗಳು ಗ್ರಾಹಕರಿಗೆ ಇಎಂಐನಿಂದ ಮುಕ್ತಿ ನೀಡಲು ಆರ್‌ಬಿಐ ಚಿಂತಿಸುತ್ತಿದೆ ಎಂದು ಎಸ್‌ಬಿಐನ ಸಂಶೋಧನಾ ವರದಿ ಹೇಳಿದೆ.
ಪ್ರಧಾನಿ ಮೋದಿ, ಮಾರ್ಚ್ 24ರಂದು ಮೊದಲ ಲಾಕ್‌ಡೌನ್ ಘೋಷಿಸಿದಾಗ, ಆರ್‌ಬಿಐ ತನ್ನೆಲ್ಲ ಬ್ಯಾಂಕುಗಳಲ್ಲಿನ ಸಾಲದ ಗ್ರಾಹಕರಿಗೆ ನೆರವಾಗಲು, ಇಎಂಐ ವಿನಾಯಿತಿಯ ತೀರ್ಮಾನ ಕೈಗೊಂಡಿತ್ತು.
ಈಗಾಗಲೇ ದೇಶ 3 ಲಾಕ್‌ಡೌನ್ ಕಂಡು 4ನೇ ಹಂತದಲ್ಲಿದ್ದು, ಹಲವರಿಗೆ ಕಂತು ಕಟ್ಟಲು ಅಸಾಧ್ಯವಾಗುತ್ತಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಜೂನ್ 7ರ ಸುಮಾರಿಗೆ ಆರ್‌ಬಿಐ ಮತ್ತೂಮ್ಮೆ ಇಎಂಐ ವಿನಾಯಿತಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹಾಗೇನಾದರೂ ಆದರೆ, ಸಾಲ ಪಡೆದ ಗ್ರಾಹಕರಿಗೆ ಆಗಸ್ಟ್ 31ರವರೆಗೆ ಇಎಂಐನಿಂದ ವಿನಾಯಿತಿ ಸಿಗುವ ಸಂಭವವಿದೆ.