Advertisement

ಪ್ರವಾಸಿಗರಿಗೆ ನಿರಾಸೆ: ಏ.29ರಿಂದ ಗೋವಾದಲ್ಲಿ ಲಾಕ್ ಡೌನ್ ಜಾರಿ: ಸಿಎಂ ಸಾವಂತ್

02:55 PM Apr 28, 2021 | Team Udayavani |

ಪಣಜಿ: ಕೋವಿಡ್ 19 ಸೋಂಕು ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಗುರುವಾರ(ಏ.29) ರಾತ್ರಿಯಿಂದ ಸೋಮವಾರ(ಮೇ 3) ಬೆಳಗ್ಗೆವರೆಗೆ ಲಾಕ್ ಡೌನ್ ಜಾರಿಯಾಗಲಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಬುಧವಾರ(ಏ.28) ಘೋಷಿಸಿದ್ದಾರೆ.

Advertisement

ಇದನ್ನೂ ಓದಿ:ಕೋವಿಡ್ ಕರಾಳತೆ :ಮೃತಪಟ್ಟು 3 ದಿನವಾದ್ರೂ ಅಂತ್ಯಸಂಸ್ಕಾರ ಪಡೆಯದ ದೇಹ

ರಾಜ್ಯದಲ್ಲಿ ಕೋವಿಡ್ 19 ಸೋಂಕು ಪ್ರಕರಣ ಹೆಚ್ಚಳವಾಗುತ್ತಿರುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಏಪ್ರಿಲ್ 29ರ ರಾತ್ರಿ 7ಗಂಟೆಯಿಂದ ಮೇ 3ರ ಬೆಳಗ್ಗೆವರೆಗೆ ಗೋವಾದಲ್ಲಿ ಲಾಕ್ ಡೌನ್ ಜಾರಿಯಲ್ಲಿರಲಿದೆ ಎಂದು ತಿಳಿಸಿದರು.

ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಾವಂತ್, ಜನರು ಆತಂಕಕ್ಕೆ ಒಳಗಾಗಬೇಕಿಲ್ಲ. ಎಲ್ಲಾ ತುರ್ತು ಸೇವೆ ಹಾಗೂ ದಿನಸಿ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗುತ್ತದೆ. ಅಷ್ಟೇ ಅಲ್ಲ ವಲಸೆ ಕಾರ್ಮಿಕರು ರಾಜ್ಯವನ್ನು ಬಿಟ್ಟು ಹೊರಹೋಗದಂತೆ ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡಿರುವುದಾಗಿ ವರದಿ ವಿವರಿಸಿದೆ.

Advertisement

ಲಾಕ್ ಡೌನ್ ಗೆ ಸಂಬಂಧಿಸಿದ ವಿವರವಾದ ಮಾರ್ಗಸೂಚಿಯನ್ನು ಇಂದು ರಾತ್ರಿ ರಾಜ್ಯ ಸರ್ಕಾರ ಘೋಷಿಸಲಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದರು.

ಯಾವುದಕ್ಕೆ ಅವಕಾಶ ಇದೆ, ಯಾವುದಕ್ಕೆ ಇಲ್ಲ:
* ತುರ್ತು ಸೇವೆ ಮತ್ತು ಕೈಗಾರಿಕಾ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ.
*ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಂದ್
*ಪ್ರವಾಸೋದ್ಯಮ ಸ್ಥಳಗಳಾದ ಕ್ಯಾಸಿನೋ, ಹೋಟೆಲ್ ಮತ್ತು ಪಬ್ಸ್ ಗಳು ಬಂದ್
*ತುರ್ತು ಸೇವೆಯ ಸಂಚಾರಕ್ಕಾಗಿ ರಾಜ್ಯದ ಗಡಿಭಾಗ ಎಂದಿನಂತೆ ತೆರೆದಿರಲಿದೆ.

ಗೋವಾದಲ್ಲಿ ಕಳೆದ 24ಗಂಟೆಗಳಲ್ಲಿ 2,110 ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗಿದ್ದು, 31 ಮಂದಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ. ಭಾರತದಲ್ಲಿ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 1.79ಕೋಟಿಗೆ ಏರಿಕೆಯಾಗಿದೆ. 29.78 ಲಕ್ಷ ಸಕ್ರಿಯ ಕೋವಿಡ್ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next