ಮಾಗಡಿ: ತಾಲೂಕಿಗೆ ಕೋವಿಡ್ 19 ವಕ್ಕರಿಸಿದ್ದು, ಸಾವಜನಿಕರು ವಿಚಲಿತರಾಗಬಾರದು. ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ಶಾಸಕ ಮಂಜುನಾಥ್ ತಿಳಿಸಿದರು. ಪಟ್ಟಣದ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳ ತುರ್ತು ಸಭೆ ಕರೆದು ಚರ್ಚಿಸಿ, ಗಾಂಧಿ ನಗರದ ಸರ್ಕಾರಿ ಕಾಲೇಜು ಬಳಿಯಿರುವ ವಸತಿ ನಿಲಯದ ಕ್ವಾರಂಟೈನ್ ಕೇಂದ್ರದಿಂದಾಗಿ ನಾಗರಿಕರಿಗೆ ತೊಂದರೆಯಾಗಿದೆ.
ಹೀಗಾಗಿ ಕೇಂದ್ರವನ್ನು ಬೇರೆಡೆ ವರ್ಗಾಯಿಸುವುದು ಒಳ್ಳೆಯದು. ಈ ಕುರಿತು ಡೀಸಿ ಎಂ.ಎಸ್.ಅರ್ಚನಾ ಅವರಲ್ಲಿ ಮನವಿ ಮಾಡಲಾಗುವುದು. ತಾಲೂಕಿನ ಮಾರಸಂದ್ರದ 2 ವರ್ಷದ ಮಗುವಿಗೆ ಕೋವಿಡ್ 19 ಪಾಸಿಟಿವ್ ಬಂದಿದೆ. ತಂದೆ ಮತ್ತು ಮಗುವನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಮಗುವಿನ ತಾಯಿ ಗರ್ಭಿಣಿಯಾಗಿರುವುದರಿಂದ ಕುದೂರಿ ನಲ್ಲೇ ಐಸೋಲೇಷನ್ ಮಾಡಲಾಗಿದೆ. ಕೆಎಸ್‌ಆರ್‌ಟಿಸಿ ಬಸ ಚಾಲಕನಿಗೂ ಪಾಸಿಟಿವ್ ಬಂದಿದ್ದು, ತುಮಕೂರಿನಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಹೀಗಾಗಿ ತಹಶೀಲ್ದಾರ್, ತಾಲೂಕು ಮಟ್ಟದ ಅಧಿಕಾರಿಗಳು, ವೈದ್ಯರು, ಪೊಲೀ ಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಆತಂಕ ಪಡುವ ಅಗತ್ಯವಿಲ್ಲ.
ಬಸ್ ನಿಲ್ದಾಣ ಮತ್ತು ಡಿಪೋ ಹಾಗೂ ಡಾರೆಂಟರಿಗೆ 6,000 ಲೀ. ಹೈಪೋಕ್ಲೊರೈಡ್ ಸಿಂಪಡಿ ಸಲು ಪುರಸಭೆ ಮುಖ್ಯಾಧಿಕಾರಿ ಮಹೇಶ್ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ಶಾಸಕರು ವಿವರಿಸಿದರು.
ತಹಶೀಲ್ದಾರ್ ಶ್ರೀನಿವಾಸ್ ಪ್ರಸಾದ್, ತಾಪಂ ಇಒ ಟಿ.ಪ್ರದೀಪ್, ಸಿಪಿಐ ಮಂಜು ನಾಥ್, ಪಿಎಸ್‌ಐ ಟಿ. ವೆಂಕಟೇಶ್, ತಾಲೂಕು ವೈದ್ಯಾಧಿಕಾರಿ ಡಾ.ಸತೀಶ್, ಪುರಸಭೆ ಸದಸ್ಯ ಎಚ್. ಜೆ.ಪುರುಷೋತ್ತಮ್, ಶಿವಶಂಕರ್, ನಾಗರತ್ನಮ್ಮ, ರಮೇಶ್, ಹೇಮಾವತಿ ನಾಗರಾಜು, ಮುಖಂಡ ಬಾಲಾಜಿ ರಂಗನಾಥ್, ಭೈರಪ್ಪ, ದೊಡ್ಡಯ್ಯ, ಬಿ.ಆರ್.ಗುಡ್ಡೇಗೌಡ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಂಗನಾಥ್ ಇತರರು ಇದ್ದರು.