ಮೈಸೂರು: ಕಳೆದ ಆರು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದು, ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವ ಆಡಳಿತ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2014ರಲ್ಲಿ ಜನಾದೇಶದ ಮೂಲಕ ಅಧಿಕಾರ ಹಿಡಿದ ನರೇಂದ್ರಮೋದಿ, ಚುನಾವಣೆಗೆ ಮುನ್ನ ನೀಡಿದ್ದ ಭರವಸೆಯಂತೆ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದಾರೆ. “ಸಬ್ ಕಾ ಸಾತ್ ಸಬ್ ಕಾ ವಿಕಾಸ್’ ಘೋಷಣೆಯೊಂದಿಗೆ ಎಲ್ಲರ ಅಭಿವೃದಿಟಛಿ ಬಯಸಿದರು. ಈಗ ಅಮೆರಿಕ ಸೇರಿ ಇಡೀ ಜಗತ್ತು ಭಾರತದತ್ತ ನೋಡುವಂತೆ ಮಾಡಿದ್ದು, ವಿಶ್ವ ಆರೋಗ್ಯ ಸಂಸ್ಥೆ ಅಧ್ಯಕ್ಷ ಸ್ಥಾನ ಭಾರತಕ್ಕೆ ದೊರಕಿದೆ ಎಂದು ಹೇಳಿದರು.
ಜನಪರ ಯೋಜನೆಗಳು: ದೇಶದ 5 ಕೋಟಿಗೂ ಹೆಚ್ಚು ಜನರಿಗೆ ಜನ್‌ಧನ್ ಯೋಜನೆಯಡಿ ಹಣ ಹೋಗುತ್ತಿದೆ. 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ನೀಡಲಾಗಿದೆ. ಮುದ್ರಾ ಯೋಜನೆಯಡಿ ಉದ್ಯಮ ಶೀಲರಾಗಲು ಸಾಲ, ಮೇಕ್ ಇನ್ ಇಂಡಿಯಾ ಅಡಿ ಉದ್ಯಮ ಶೀಲರಿಗೆ ಅವಕಾಶ, ಅಟಲ್ ಬಿಹಾರ ವಾಜಪೇಯಿ ಚತುಷ್ಪಥ ಯೋಜನೆಯನ್ನು 11 ಕಿ.ಮೀ. ಗಳಿಂದ 24 ಕಿ.ಮೀ.ಗಳಿಗೆ ಹೆಚ್ಚಿಸಲಾಗಿದೆ. ಮತ್ತೆ ಐದು ವರ್ಷಕ್ಕೆ ಜನ ಬೆಂಬಲ ಪಡೆದು ಅಧಿಕಾರಕ್ಕೆ ಬರಲಾಗಿದೆ ಎಂದು ಹೇಳಿದರು.
ಸ್ವಾಲಂಬನೆಗೆ ನೆರವು: ಈಗ ಭಾರತದ ಮುಂದಿನ ದೂರದೃಷ್ಟಿ ಮತ್ತು ಗುರಿ ಸ್ವದೇಶಿ ಚಿಂತನೆಗೆ ಒಳಗಾಗುವಂತೆ ಮಾಡುವುದಾಗಿದೆ. ಅದಕ್ಕಾಗಿ 20 ಲಕ್ಷ ಕೋಟಿ ಯೋಜನೆ ಘೋಷಿಸಲಾಗಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಉದ್ಯಮ ಶೀಲತೆ, ಸ್ವ ಉದ್ಯೋಗಕ್ಕೆ ಅನುಕೂಲ ಕಲ್ಪಿಸಲಾಗುತ್ತಿದೆ.
ಆತ್ಮನಿರ್ಭರ ಭಾರತಕ್ಕೆ ಆತ್ಮೀಯ ಚಿಂತನೆ ಮತ್ತು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.ಸುದ್ದಿಗೋಷ್ಠಿ ಯಲ್ಲಿ ಸಂಸದ ಪ್ರತಾಪ ಸಿಂಹ, ಶಾಸಕರಾದ ರಾಮದಾಸ್, ಗೇಂದ್ರ, ಹರ್ಷವರ್ಧನ, ನಗರ ಬಿಜೆಪಿ ಅಧ್ಯಕ್ಷ ಶ್ರೀವತ್ಸ, ಜಿಲ್ಲಾಧ್ಯಕ್ಷ ಮಹೇಂದ್ರ, ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು ಇತರರಿದ್ದರು.
ಕೋವಿಡ್ ನಿಯಂತ್ರಣದಲ್ಲಿ ಯಶಸ್ವಿ: ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೋವಿಡ್-19 ನಿರ್ವಹಣೆಯಲ್ಲಿಯೂ ಭಾರತ ಯಶಸ್ವಿಯಾಗಿದೆ. ಇಟಲಿ, ಅಮೆರಿಕ ಸೇರಿದಂತೆ ಮುಂದುವರಿದ ದೇಶಗಳು ಕೈಚೆಲ್ಲಿ ಕೂರುವ ಸಂದರ್ಭದಲ್ಲಿ ಭಾರತ ಕೊರೊನಾ ನಿಯಂತ್ರಿಸಿ, ವಿಶ್ವ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.
ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಗಾಂಧೀಜಿ ನೀಡಿದ ಕರೆಯನ್ನು ಇಡೀ ದೇಶ ಅನುಸರಿಸುತ್ತಿತ್ತು. ಆದರೆ ಸ್ವಾತಂತ್ರಾéನಂತರ ಒಬ್ಬ ವ್ಯಕ್ತಿಯ ಮೇಲೆ ವಿಶ್ವಾಸವಿಟ್ಟು ದೇಶ ಮತ್ತು ಪ್ರಾಣ ಮುಖ್ಯ ಎಂದು ಜನತಾ ಕರ್ಫ್ಯೂ ಬೆಂಬಲಿಸಿದ್ದು ಮೋದಿ ಅವರನ್ನು ಮಾತ್ರ. ಎಂದು ಹೇಳಿದರು.