Advertisement

ಕೋವಿಡ್‌ 19ನಿಂದ ದೇಶಕ್ಕೆ ಸಂಕಷ್ಟ

05:56 AM Jun 02, 2020 | Lakshmi GovindaRaj |

ಮೈಸೂರು: ಕೋವಿಡ್‌ 19 ಹೋರಾಟದಲ್ಲಿ ಪ್ರಧಾನಿ ಮೋದಿಯವರ ಕೆಲ ತಪ್ಪು ನಿರ್ಧಾರಗಳಿಂದ ದೇಶ ಸಂಕಷ್ಟಕ್ಕೊಳಗಾಗಿದೆ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌ ಮೋದಿ ವಿರುದ್ಧ ಕಿಡಿಕಾರಿದರು. ನಗರದಲ್ಲಿ ರಾಜ್ಯ  ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಹಾಗೂ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ, ಪೊಲೀಸರು, ಆರೋಗ್ಯ ಸಿಬ್ಬಂದಿ, ಪೌರ ಕಾರ್ಮಿಕರ ರಕ್ಷಣೆ ನಮ್ಮ ಹೊಣೆ ಜಾಗೃತಿ ಅಭಿಯಾನಕ್ಕೆ ಚಾಲನೆ ಮತ್ತು ಕೋವಿಡ್‌ 19 ಯೋಧರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ರಾಹುಲ್‌ ಗಾಂಧಿ ಎಚ್ಚರಿಕೆ: ಕೋವಿಡ್‌ 19 ವಿದೇಶದಿಂದ ಬಂದಂತಹ ಸೋಂಕು, ಫೆಬ್ರವರಿ ತಿಂಗಳಲ್ಲಿಯೇ ರಾಹುಲ್‌ ಗಾಂಧಿಯವರು ಕೇಂದ್ರ ಸರ್ಕಾರಕ್ಕೆ ಕೋವಿಡ್‌ 19  ಸೋಂಕು ಭಾರತಕ್ಕೆ ಬರದಂತೆ ಈಗಲೇ ಎಚ್ಚರ ವಹಿಸಿ ಎಂದು ಒತ್ತಾಯಿಸಿದರೂ ಪ್ರಧಾನಿ ನರೇಂದ್ರ ಮೋದಿ ಬೇಜಾವಾಬ್ದಾರಿಯಿಂದ ನಡೆದುಕೊಂಡು ಮಾರ್ಚ್‌ ಅಂತ್ಯಕ್ಕೆ ಲಾಕ್‌ಡೌನ್‌ ಘೋಷಿಸಿದರು. ಅದರ ಪರಿಣಾಮವೇ ದಿನೇದಿನೆ ಸೋಂಕು ಹೆಚ್ಚಾಗುತ್ತಿದೆ ಎಂದು ಆರೋಪಿಸಿದರು.

ಪ್ರಾಣದ ಹಂಗು ತೊರೆದು, ಕುಟುಂಬಸ್ಥರ ಆರೋಗ್ಯವನ್ನು ಲೆಕ್ಕಿಸದೇ ಸೇವೆಯಲ್ಲಿ ತೊಡಗಿದ ವೈದ್ಯರು, ನರ್ಸ್‌ಗಳು, ಪೌರಕರ್ಮಿಕರು, ಪೊಲೀಸರು, ನಗರಪಾಲಿಕೆ, ಆರೋಗ್ಯ ಇಲಾಖೆ,  ಜಿಲ್ಲಾಡಳಿತ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸುತ್ತಿದೆ. ಕೋವಿಡ್‌ 19 ಯೋಧರ ಪ್ರಾಣರಕ್ಷಣೆ, ಗೌರವ ನೀಡಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಡಿಸಿಪಿ ಪ್ರಕಾಶ್‌ಗೌಡ, ನಗರ ಪಾಲಿಕೆ ಸದಸ್ಯ ಗೋಪಿ, ಡಾ. ನಾಗರಾಜ್‌,  ಡಾ.ಜಯಂತ್‌, ಡಾ.ರಘುರಾಮ್‌ ವಾಜಪೇಯಿ, ಹರೀಶ್‌ಗೌಡ, ಚಂದ್ರಶೇಖರ್‌, ಟಿ.ಸತೀಶ್‌ ಜವರೇಗೌಡ, ಶಿವರಾಮು, ಡಾ.ವೆಂಕಟೇಶ್‌, ರಾಜಶೇಖರ್‌ ಕದಂಬ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next