ಚಾಮರಾಜನಗರ: ಕೋವಿಡ್-19 ಹರಡದಂತೆ ಕಂಟೈನ್ಮೆಂಟ್ ಝೋನ್ ಹಾಗೂ ಬಫರ್ ವಲಯಗಳ ನಿರ್ವ ಹಣೆಗಾಗಿ ವಿವರವಾದ ಕಾರ್ಯತಂತ್ರಗಳನ್ನು ಒಳಗೊಂಡ ಕ್ರಮಗಳನ್ನು ಅನುಷ್ಠಾನಕ್ಕೆ ತರಲು ಡೀಸಿ ಡಾ.ಎಂ. ಆರ್. ರವಿ ಆದೇಶಿಸಿದ್ದಾರೆ.ಇನ್ಸಿಡೆಂಟ್ ಕಮಾಂಡರ್ ಅವರು ನಿರ್ವಹಿಸಬೇಕಿರುವ ಜವಾ ಬ್ದಾರಿಗಳನ್ನು ನಿಗದಿಪಡಿಸಲಾಗಿದೆ.
ಕಂಟೈನ್ಮೆಂಟ್ ಝೋನ್ (ನಿಯಂತ್ರಿತ ವಲಯ) ಹಾಗೂ ಬಫರ್ ಝೋನ್ ವ್ಯಾಪ್ತಿಯ ಸಂಪೂರ್ಣ ಉಸ್ತುವಾರಿ ವಹಿಸಿ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ನಂತೆ ಕಾರ್ಯ ನಿರ್ವಹಿಸಬೇಕು. ಸ್ಥಳೀಯ ಪೊಲೀಸ್ ಸಹಯೋಗ ದೊಂದಿಗೆ ಸೀಲ್‌ಡೌನ್ ಮಾಡುವ ಕಂಟೈನ್ಮೆಂಟ್ ಝೋನ್ ಗಡಿ ಹಾಗೂ ಆಗಮನ ಮತ್ತು ನಿರ್ಗಮನಕ್ಕೆ ಒಂದೇ ಮಾರ್ಗ, ದ್ವಾರವನ್ನು ಗುರುತಿಸಬೇಕು.
ಪ್ರತಿ ನಿಯಂತ್ರಿತ ವಲಯದಲ್ಲಿ ನಿಗಾ ವಹಿಸಲು 24 ಗಂಟೆಗಳ ಕೇಂದ್ರವನ್ನು ಸೂಕ್ತ ಸ್ಥಳ, ಕಚೇರಿಯಲ್ಲಿ ಪ್ರಾರಂಭಿಬೇಕು. ಪ್ರತಿ 24 ಗಂಟೆ ಕಂಟ್ರೋಲ್ ರೂಮ್ನಲ್ಲಿ ಪೊಲೀಸ್, ಸ್ಥಳೀಯ ಸಂಸ್ಥೆಯ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಡೀಸಿ ಆದೇಶದಲ್ಲಿ ತಿಳಿಸಿದ್ದಾರೆ.
ಸೋಂಕು ಹೆಚ್ಚಳ ಆತಂಕ: ಪೊಲೀಸರಿಗೆ ಸೋಂಕು ಹಬ್ಬುತ್ತಿರುವ ಸಂಖ್ಯೆ ಹೆಚ್ಚಾಗು ತ್ತಿದ್ದು, ಸಂಚಾರ ನಿರ್ವಹಣಾ ಕೇಂದ್ರದ ಸಿಬ್ಬಂದಿಯೊಬ್ಬರಿಗೆ ಸೋಂಕು ಧೃಡಪಟ್ಟಿದೆ.ಅಷ್ಟೇ ಅಲ್ಲದೆ ಮಡಿವಾಳ ಠಾಣೆಯ ಸಿಬ್ಬಂದಿಯೊಬ್ಬರಿಗೂ ಸೋಂಕು ಪತ್ತೆಯಾಗಿದೆ.
ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಸಿಬ್ಬಂದಿಗೆ ಸೋಂಕು ಧೃಡಪಟ್ಟ ಹಿನ್ನೆಲೆಯಲ್ಲಿ ಜೂನ್ 30 ರವರೆಗೆ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ. ಈ ಅವಧಿಯಲ್ಲಿ ಕೇಂದ್ರದ ಕಟ್ಟಡದಲ್ಲಿರುವ ಕಂಟ್ರೋಲ್ ರೂಂ ನಲ್ಲಿ ಸೀಮಿತ ಸಿಬ್ಬಂದಿ ಮುಂಜಾಗ್ರತಾ ಕ್ರಮಗಳೊಂದಿಗೆ ಕಾರ್ಯ ನಿರ್ವಹಿಸ ಲಿದ್ದಾರೆ. ಉಳಿದಂತೆ ಬೇರೆ ಯಾವುದೇ ಕಾರ್ಯ ನಿರ್ವಹಣೆ ಇರುವುದಿಲ್ಲ ಎಂದು ಸಂಚಾರ ವಿಭಾಗದ ಜಂಟಿ ಆಯುಕ್ತ ಡಾ.ಬಿ.ಆರ್ ರವಿಕಾಂತೇಗೌಡ ತಿಳಿಸಿದ್ದಾರೆ.
ಮಡಿವಾಳ ಠಾಣೆಯ ಪೇದೆಯೊಬ್ಬರಿಗೆ ಸೋಂಕು ಧೃಡಪಟ್ಟಿದ್ದು ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಅವರ ಸಂಪರ್ಕದಲ್ಲಿದ್ದ ಸಿಬ್ಬಂದಿಗೂ ಕ್ವಾರಂಟೈನ್ ಒಳಪಡಿಸಲಾಗಿದೆ. ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.