ರಾಮನಗರ: ಜಿಲ್ಲೆಯಲ್ಲಿನ ಎಲ್ಲ ಸರ್ಕಾರಿ ಮತ್ತು ಖಾಸಗಿ ವೈದ್ಯರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸುವಂತೆ ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಜಿಲ್ಲಾಡಳಿತಕ್ಕೆ ಸಲಹೆ ನೀಡಿದರು. ನಗರದ ಜಿಪಂನಲ್ಲಿ ನಡೆದ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನಕಪುರದಲ್ಲಿ ಇಬ್ಬರು ಖಾಸಾಗಿ ವೈದ್ಯರಲ್ಲಿ ಸೋಂಕು ಪತ್ತೆಯಾಗಿರುರವನ್ನು ಸಂಸದ ಡಿ.ಕೆ.ಸುರೇಶ್ ಪ್ರಸ್ತಾಪಿಸಿದ್ದಕ್ಕೆ ಪ್ರತಿಕ್ರಿಯಿಸಿ, ಹೀಗೆ ಸಲಹೆ ನೀಡಿದರು.
ಸಾಂಸ್ಥಿಕ ಕ್ವಾರಂಟೈನ್ ಸಮಸ್ಯೆಗಳ ಅನಾವರಣ: ಶಾಸಕ ಎ.ಮಂಜುನಾಥ್ ಮಾತನಾಡಿ, ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರುವ ವರಿಗೆ ಗುಣಮಟ್ಟದ ಆಹಾರ ನೀಡಲಾಗುತ್ತಿಲ್ಲ. ಮೂಲಸೌ ಲಭ್ಯ ಕಲ್ಪಿಸಿಲ್ಲ. ಜಿಲ್ಲಾಡಳಿತದ ಗಮನಕ್ಕೆ ತಂದರೂ ಗಂಭೀರ ವಾಗಿ ಪರಿಗಣಿಸುತ್ತಿಲ್ಲ ಎಂದು ದೂರಿದರು. ಅಲ್ಲದೆ ಪೇಯ್ಡ ಕ್ವಾರಂಟೈನ್‌ಗೆ ಜಿಲ್ಲೆಯಲ್ಲಿ ಅವಕಾಶವಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಡೀಸಿ ಎಂ.ಎಸ್.ಅರ್ಚನಾ, ಈವರೆಗೆ ಪೇಯ್ಡ ಕ್ವಾರಂಟೈನ್‌ಗೆ ಮನವಿ ಮಾಡಿಲ್ಲ. ಸರ್ಕಾರದ ಸೂಚಿ ಪ್ರಕಾರ ದಿನಕ್ಕೆ 60 ರೂ.ನಂತೆ ಆಹಾರ ನೀಡಲಾಗುತ್ತಿದೆ.
ಜಿಲ್ಲಾಧಿಕಾರಿಗಳ ಉತ್ತರದಿಂದ ತೃಪ್ತರಾಗದ ಶಾಸಕ ಮಂಜುನಾಥ್, ಕ್ವಾರಂಟೈನ್ ನಲ್ಲಿರುವ ವರೇ ತಮ್ಮನ್ನು ದೂರವಾಣಿ ಮೂಲಕ ಸಂಪರ್ಕಿಸಿ ಪೇಯ್ಡ ಕ್ವಾರಂಟೈನ್‌ಗೆ ಮನವಿ ಮಾಡಿದ್ದಾರೆ. ಇದಕ್ಕೆ ಧ್ವನಿಗೂಡಿಸಿದ ಸಂಸದ ಡಿ.ಕೆ.ಸುರೇಶ್, ಕ್ವಾರಂಟೈನ್‌ನಲ್ಲಿ ಇರುವವರನ್ನು ಮಾನಸಿಕವಾಗಿ ಕುಗ್ಗಿಸುವ ಕೆಲಸ ಮಾಡಬೇಡಿ. ಎಸ್‌ಡಿಆರ್‌ಎಫ್ ನಿಧಿ ಬಳಸಿಕೊಂಡು ಕ್ವಾರಂಟೈನ್‌ನಲ್ಲಿ ಇರುವವರಿಗೆ ಗುಣಮಟ್ಟದ ಆಹಾರ ಪೂರೈಸಲು ಸಲಹೆ ನೀಡಿದರು. ಡಿಸಿಎಂ ಡಾ.ಅಶ್ವತ್ಥನಾರಾಯಣ ಮಾತನಾಡಿ, ಲಾಡ್ಜ್ ಮಾಲಿಕರ ಜತೆ ಚರ್ಚಿಸಿ ಪೇಯ್ಡ ಕ್ವಾರಂಟೈನ್‌ಗೆ ಕ್ರಮಕೈಗೊಳ್ಳಿ ಎಂದರು.
ಕಂಟೈನ್‌ಮೆಂಟ್ ಗ್ರಾಮಗಳಲ್ಲಿ ಹಾಲು ನಷ್ಟ: ಜಿಪಂ ಅಧ್ಯಕ್ಷ ಬಸಪ್ಪ ಮಾತನಾಡಿ, ಸೀಲ್‌ಡೌನ್ ಆಗಿರುವ ಗ್ರಾಮ ಗಳಲ್ಲಿ ಉತ್ಪಾದನೆಯಾಗುತ್ತಿರುವ ಹಾಲು ನಷ್ಟವಾಗುತ್ತಿದೆ. ರೇಷ್ಮೆ ಗೂಡು ಹಾಳಾಗುತ್ತಿದೆ ಎಂದು ಸಭೆಯ ಗಮನ ಸೆಳೆ ದರು. ಅದಕ್ಕೆ ಪ್ರತಿಕ್ರಿಯಿಸಿದ ಬಮೂಲ್ ಅಧಿಕಾರಿ, ಒಕ್ಕೂಟ ದಿಂದ ಶೇ.50 ಹಾಗೂ ಸಂಘದಿಂದ ಶೇ.25ರಷ್ಟು ಹಾಲಿನ ಹಣ ಪಾವತಿಸಲಿದೆ. ರೇಷ್ಮೆ ಗೂಡು ನಷ್ಟಕ್ಕೆ ಪರಿಹಾರ ಸಿಗೋಲ್ಲ ಎಂದು ಇಲಾಖೆ ಅಧಿಕಾರಿಗಳು ಉತ್ತರಿಸಿದರು. ಡಿಸಿಎಂ ಪ್ರತಿಕ್ರಿಯಿಸಿ, ಕೋವಿಡ್-19 ಸೋಂಕಿತರ ಚಿಕಿತ್ಸೆ ಗಾಗಿ ಬೆಂಗಳೂರು ದಯಾನಂದ ಆಸ್ಪತ್ರೆ 200 ಹಾಸಿಗೆ ನೀಡಲು ಒಪ್ಪಿಕೊಂಡಿದೆ ಎಂದು ಮಾಹಿತಿ ನೀಡಿದರು. ನೆಲಮಂಗಲ ಶಾಸಕ ಶ್ರೀನಿವಾಸಮೂರ್ತಿ, ಎಂಎಲ್‌ಸಿ ಸಿ.ಎಂ.ಲಿಂಗಪ್ಪ, ಜಿಪಂ ಉಪಾಧ್ಯಕ್ಷೆ ಉಷಾ, ಸಿಇಒ ಇಕ್ರಂ, ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್ ಇದ್ದರು.