ಬೀದರ್: ಮಹಾರಾಷ್ಟ್ರದ ಕಂಟಕದಿಂದ ಗಡಿ ನಾಡು ಬೀದರ್‌ನಲ್ಲಿ ಕೋವಿಡ್-19 ಆರ್ಭಟ ಮುಂದುವರೆದಿದ್ದು, ಶುಕ್ರವಾರ ಮತ್ತೆ 10 ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಈಗ ತ್ರಿಶತಕ ದಾಟಿದೆ. ಇನ್ನೊಂದೆಡೆ 22 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ.
ದೆಹಲಿ, ಮಹಾರಾಷ್ಟ್ರ ಸಂಪರ್ಕದಿಂದ ನಲುಗಿ ಹೋಗಿರುವ ಜಿಲ್ಲೆಗೆ ಈಗ ಮಧ್ಯಪ್ರದೇಶದ ನಂಟಿನ ಹೊಸ ಪ್ರಕರಣ ವರದಿಯಾಗಿದೆ. 10 ಜನ ಸೋಂಕಿತರೆಲ್ಲರೂ ಬಸವಕಲ್ಯಾಣ ತಾಲೂಕಿಗೆ ಸೇರಿದ್ದಾರೆ. ದಿನ ಕಳೆದಂತೆ ಪ್ರಕರಣಗಳು ಏರಿಕೆಯಾಗುತ್ತ ಬಸವಕಲ್ಯಾಣ ಕೋವಿಡ್-19 ಹಾಟ್‌ಸ್ಪಾಟ್ ಆಗಿ ಗುರುತಿಸಿಕೊಳ್ಳುತ್ತಿರುವುದು ಜನರಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ.
ಸೋಂಕಿತರಲ್ಲಿ ನಾಲ್ಕು ವರ್ಷದ 2 ಹಾಗೂ 7 ವರ್ಷದ ಒಬ್ಬ ಮಕ್ಕಳು ಸೇರಿದ್ದಾರೆ. 27 ವರ್ಷದ ಗಂಡು ಪಿ 6328, 24 ವರ್ಷದ ಗಂಡು ಪಿ 6329, 7ವರ್ಷದ ಗಂಡು ಪಿ 6330, 34ವರ್ಷದ ಹೆಣ್ಣು ಪಿ 6331, 4 ವರ್ಷದ ಪಿ 6332, 35 ವರ್ಷದ ಹೆಣ್ಣು ಪಿ 6363, 4ವರ್ಷದ ಹೆಣ್ಣು ಪಿ 6364, 25 ವರ್ಷದ ಗಂಡು ಪಿ 6335 ಮತ್ತು 56 ವರ್ಷದ ಹೆಣ್ಣು ಪಿ 6337 ರೋಗಿಗಳು ಮಹಾರಾಷ್ಟ್ರದ ನಂಟು ಹೊಂದಿದ್ದರೆ, 55 ವರ್ಷದ ಗಂಡು ಪಿ 6336 ರೋಗಿ ಮಧ್ಯ ಪ್ರದೇಶದ ಸಂಪರ್ಕಕ್ಕೆ ಬಂದಿದ್ದರಿಂದ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ಹೇಲ್ತ್ ಬುಲೇಟಿನ್ ದೃಢಪಡಿಸಿದೆ.
ಡಿಸ್ಚಾರ್ಜ್ ಆದ ರೋಗಿಗಳು:
ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ 22 ಜನ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಪಿ 1664,, ಪಿ 2406, ಪಿ 2529, ಪಿ 2917, ಪಿ 2918, ಪಿ 2921, ಪಿ 3000, ಪಿ 3001, ಪಿ 3002, ಪಿ 3004, ಪಿ 3009, ಪಿ 4356, ಪಿ 4357, ಪಿ 4358, ಪಿ 4359, ಪಿ 4363, ಪಿ 4367, ಪಿ 4375, ಪಿ 4376, ಪಿ 4378, ಪಿ 4380 ಮತ್ತು ಪಿ 4383 ರೋಗಿಗಳು ಸೇರಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 305 ಆದಂತಾಗಿದೆ. ಇದರಲ್ಲಿ 6 ಜನ ಸಾವನ್ನಪ್ಪಿದ್ದರೆ, 203 ಜನ ಬಿಡುಗಡೆ ಹೊಂದಿದ್ದಾರೆ. 99 ಸಕ್ರೀಯ ಪ್ರಕರಣಗಳಿವೆ.