ಯಾದಗಿರಿ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ತನ್ನ ಆಟವನ್ನು ಮುಂದುವರೆಸಿದ್ದು ಮಂಗಳವಾರ ಮತ್ತೆ ಎರಡು ವರ್ಷದ ಮಗುವಿಗೆ ಸೋಂಕು ದೃಢವಾಗಿದೆ.
ಮಗು ತನ್ನ ಪಾಲಕರೊಂದಿಗೆ ಮಹಾರಾಷ್ಟ್ರದಲ್ಲಿ ವಾಸವಾಗಿದ್ದು ಕಳೆದ ಕೆಲದಿನಗಳ ಹಿಂದೆ ಆಗಮಿಸಿ ಗುಂಜನೂರ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದ, ಕೇಂದ್ರದಲ್ಲಿ ಒಟ್ಟು 180ಕ್ಕೂ ಹೆಚ್ಚು ಜನರಿದ್ದಾರೆ.
ಇದೀಗ ಎಷ್ಟು ಜನ ಈ ಮಗುವಿನ ಪ್ರಾಥಮಿಕ, ದ್ವಿತೀಯ ಸಂಪರ್ಕಕ್ಕೆ ಬಂದವರ ಎಷ್ಟು ಎನ್ನುವುದು ಪ್ರಶ್ನೆ ಜಿಲ್ಲಾಡಳಿತಕ್ಕೆ ಕಾಡುತ್ತಿದೆ. ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಎಲ್ಲಿಯೂ ಕಾಣುತ್ತಿಲ್ಲ. ಕೆಲವರು ಮಾಸ್ಕ್ ಧರಿಸಿದರೆ ಹೆಚ್ಚಿನವರು ಮಾಸ್ಕ್ ಧರಿಸದೇ ನಿರ್ಲಕ್ಷ್ಯ ವಹಿಸುತ್ತಿದರುವುದು ಕಂಡು ಬಂತು.
ಇನ್ನು ಕ್ವಾರಂಟೈನ್ ಕೇಂದ್ರದಲ್ಲಿರುವವರಿಗೆ ಮನೆಗಳಿಂದ ಸಂಬಂಧಿಕರು ಆಹಾರ ಇತರೆ ತಿನಿಸುಗಳು ತಂದು ಕೊಡುತ್ತಿದ್ದು ಕ್ವಾರಂಟೈನ್ ಕೇಂದ್ರಗಳೇ ಸೋಂಕು ಹರಡಿಸುವ ಅಡ್ಡಗಳಾಗುವ ಆತಂಕವಿದೆ.
ಗುರುಮಠಕಲ್ ತಾಲೂಕಿನ ಒಂದೇ ತಾಂಡಾದ ಐವರಲ್ಲಿ ಸೋಂಕು ಪತ್ತೆಯಾಗಿದ್ದು ಮಂಗಳವಾರ ಮತ್ತೆ ಮಗುವಿಗೆ ಸೋಂಕು ದೃಢ ವಾಗಿದೆ. ಕ್ವಾರಂಟೈನ್ ಕೇಂದ್ರದಲ್ಲಿರುವವ ಗಂಟಲು ದ್ರವ ಮಾದರಿ ಪರೀಕ್ಷೆ ತೀವ್ರಗತಿಯಲ್ಲಿ ನಡೆಯುವ ಅಗತ್ಯವಿದೆ.