Advertisement

ತಬ್ಲೀಘಿಯಿಂದಾಗಿ ಪ್ರಕರಣ ದ್ವಿಗುಣ : ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ

03:23 AM Apr 06, 2020 | Hari Prasad |

ದೇಶದಲ್ಲಿ ಪ್ರಸ್ತುತ ಕೋವಿಡ್ 19 ವೈರಸ್‌ ಸೋಂಕು ಪ್ರಕರಣಗಳು ಸರಾಸರಿ 4 ದಿನಗಳಿಗೆ ದ್ವಿಗುಣಗೊಳ್ಳುತ್ತಿವೆ. ಒಂದು ವೇಳೆ, ದೆಹಲಿಯ ತಬ್ಲೀಘಿ ಜಮಾತ್‌ ಧಾರ್ಮಿಕ ಸಮ್ಮೇಳನ ನಡೆಯದೇ ಇರುತ್ತಿದ್ದರೆ, ದ್ವಿಗುಣಗೊಳ್ಳುವಿಕೆಯ ದರವು 7 ದಿನಗಳಾಗಿರುತ್ತಿದ್ದವು.

Advertisement

– ಹೀಗೆಂದು ಹೇಳಿರುವುದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್‌. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಬ್ಲೀಘಿ ಜಮಾತ್‌ನಲ್ಲಿ ಭಾಗವಹಿಸಿದ್ದ ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ದೃಢವಾಗಿದೆ.

ಆ ಕಾರ್ಯಕ್ರಮದಿಂದಾಗಿಯೇ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿದೆ. ಸರಾಸರಿ 4 ದಿನಗಳಿಗೆ ಪ್ರಕರಣ ದ್ವಿಗುಣಗೊಳ್ಳುತ್ತಿದೆ. ಭಾನುವಾರದವರೆಗೆ ದೇಶಾದ್ಯಂತ 106 ಮಂದಿ ಮೃತಪಟ್ಟಿದ್ದು, ಸೋಂಕಿ ತರ ಸಂಖ್ಯೆ 4, 041ಕ್ಕೇರಿಕೆಯಾಗಿದೆ. 304 ಮಂದಿ ಗುಣಮುಖರಾಗಿದ್ದಾರೆ ಎಂದು ಹೇಳಿದ್ದಾರೆ.

ಪರಿಹಾರ ಶಿಬಿರಗಳು: ದೇಶಾದ್ಯಂತ 27,661 ಪರಿಹಾರ ಶಿಬಿರಗಳು ಮತ್ತು ವಸತಿ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಈ ಪೈಕಿ 23,924 ಅನ್ನು ಸರ್ಕಾರವೇ ನಿರ್ಮಿಸಿದ್ದರೆ, 3,737 ಅನ್ನು ಸರ್ಕಾರೇತರ ಸಂಸ್ಥೆಗಳು ನಿರ್ಮಿಸಿವೆ. ಇವುಗಳಲ್ಲಿ 12.5 ಲಕ್ಷ ಮಂದಿ ಆಶ್ರಯ ಪಡೆಯುತ್ತಿದ್ದಾರೆ.

ಅಲ್ಲದೆ ಸರ್ಕಾರವು 19,460 ಆಹಾರ ಶಿಬಿರಗಳನ್ನು, ಎನ್‌.ಜಿ.ಒ.ಗಳು 9,509 ಫ‌ುಡ್‌ ಕ್ಯಾಂಪ್‌ಗಳನ್ನು ನಿರ್ಮಿಸಿವೆ ಎಂದು ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯ ಸಲಿಲ ಶ್ರೀವಾಸ್ತವ ಮಾಹಿತಿ ನೀಡಿದ್ದಾರೆ. ಜತೆಗೆ ದೇಶಾದ್ಯಂತ ಒಟ್ಟು 75 ಲಕ್ಷಕ್ಕೂ ಅಧಿಕ ಮಂದಿಗೆ ಆಹಾರ ಒದಗಿಸಲಾಗುತ್ತಿದೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next