ನವದೆಹಲಿ : ಕೋವಿಡ್ ಸೋಂಕು ದೇಶದ ಅಭಿವೃದ್ಧಿಯ ಜೊತೆಗೆ ಅದೆಷ್ಟೋ ಕುಟುಂಬಗಳನ್ನು ಬೀದಿಗೆ ತಂದಿದೆ. ಇನ್ನು ಲಕ್ಷಾಂತರ ಮಂದಿ ಈ ಕ್ರೂರಿ ಕೋವಿಡ್ ಗೆ ತಮ್ಮ ಪ್ರಾಣಗಳನ್ನೇ ಬಿಟ್ಟಿದ್ದಾರೆ.
ಇನ್ನೊಂದು ಬೇಸರದ ವಿಚಾರ ಏನಂದ್ರೆ ಕೋವಿಡ್ ನಿಂದ ಬರೋಬ್ಬರಿ 247 ದಶ ಲಕ್ಷ ಶಾಲಾ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಎಂದು ಯುನಿಸೆಫ್ ವರದಿ ತಿಳಿಸಿದೆ. ಇದು ಭಾರತದ್ದಾದರೆ ಪ್ರಪಂಚದಾದ್ಯಂತ 168 ದಶ ಲಕ್ಷ ಮಕ್ಕಳು ಇಡೀ ವರ್ಷ ಶಾಲೆ ಕಡೆ ಮುಖ ಮಾಡಿಲ್ಲ ಎಂಬ ಮಾಹಿತಿಯನ್ನೂ ಹೊರ ಹಾಕಿದೆ.
ಇನ್ನು ಆನ್ ಲೈನ್ ತರಗತಿ ಬಗ್ಗೆ ವರದಿಯಲ್ಲಿ ತಿಳಿಸಲಾಗಿದ್ದು, ಇದು ಎಲ್ಲಾ ಮಕ್ಕಳಿಗೂ ಉಪಯೋಗವಾಗಿಲ್ಲ ಎಂದಿದೆ. ಯಾಕಂದ್ರೆ ಭಾರತದಲ್ಲಿ ಶೇಕಡವಾರು ಹೇಳುವುದಾದ್ರೆ ನಾಲ್ಕು ಮನೆಗಳಲ್ಲಿ ಕೇವಲ ಒಂದು ಮನೆಯಲ್ಲಿ ಮೊಬೈಲ್ ಮತ್ತು ಇಂಟರ್ನೆಟ್ ಸೌಲಭ್ಯ ಇದೆ. ಇಷ್ಟೆ ಅಲ್ಲದೆ ಅದೆಷ್ಟೋ ಹಳ್ಳಿಗಳಲ್ಲಿ ಇಂಟರ್ನೆಟ್ ಸೌಲಭ್ಯವೇ ಇಲ್ಲ. ಇದ್ರಿಂದ ಆನ್ ಲೈನ್ ಶಿಕ್ಷಣ ಹೆಚ್ಚೇನು ಪರಿಣಾವ ಬೀರಿಲ್ಲ ಎಂದು ಯುನಿಸೆಫ್ ವರದಿ ಹೇಳಿದೆ.
ಮಕ್ಕಳ ಕಲಿಕೆಯ ಕುಂಟಿತದ ಬಗ್ಗೆ ಮಾಹಿತಿ ನೀಡಿರುವ ಯೂನಿಸೆಫ್ ಭಾರತ ಪ್ರತಿನಿಧಿ ಯಾಸ್ಮಿನ್ ಅಲಿ ಹಕ್, ಮಕ್ಕಳು ಶಾಲೆಯಿಂದ ದೂರ ಉಳಿಯುವುದರಿಂದ ಅವರ ಕಲಿಕೆ ಹಿನ್ನಡೆಯಾಗುತ್ತದೆ. ಅಲ್ಲದೆ ಮತ್ತೆ ಆ ಮಕ್ಕಳನ್ನು ಶಾಲೆಗೆ ವಾಪಸ್ಸು ಕರೆ ತರಲು ತುಂಬಾ ಕಷ್ಟವಾಗುತ್ತದೆ. ಈಗಗಲೇ ಸುಮಾರು ಒಂದು ವರ್ಷ ಶಾಲೆಗಳನ್ನು ಮುಚ್ಚಲಾಗಿದೆ. ಮುಂದಿನ ದಿನಗಳಲ್ಲಿ ಶಾಲೆಗಳ ಪ್ರಾರಂಭಕ್ಕೆ ಯೋಜನೆಗಳನ್ನು ಮಾಡಿ ಮಕ್ಕಳನ್ನು ಶಾಲೆಯತ್ತ ಬರುವಂತೆ ಮಾಡಿ ಶಿಕ್ಷಣ ಕೊಡಬೇಕು ಎಂದು ಹೇಳಿದ್ದಾರೆ.