Advertisement

ಭಾರತದಲ್ಲಿ ಕೋವಿಡ್-19ಗೆ ಒಂದೇ ದಿನ 49 ಮಂದಿ ಬಲಿ: 1,486 ಜನರಿಗೆ ಸೋಂಕು

08:06 AM Apr 24, 2020 | Mithun PG |

ನವದೆಹಲಿ: ಬುಧವಾರ ದೇಶದಲ್ಲಿ 1,486 ಕೋವಿಡ್-19 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕು ಕಂಡುಬಂದಾಗಿನಿಂದ ಎರಡನೇ ಬಾರಿಗೆ ದಾಖಲೇ ಪ್ರಮಾಣದಲ್ಲಿ ಏರಿಕೆಯಾಗಿದೆ. ಮಾತ್ರವಲ್ಲದೆ 24 ಗಂಟೆಗಳ ಅವಧಿಯಲ್ಲಿ 49 ಜನರು ಮೃತಪಟ್ಟಿದ್ದು, ಒಟ್ಟಾರೆ ಸಾವಿನ ಪ್ರಮಾಣ 652ಕ್ಕೆ ತಲುಪಿದೆ ಎಂದು ಎನ್ ಡಿಟಿವಿ ವರದಿ ಮಾಡಿದೆ.
ದೇಶದಲ್ಲಿ ಸೋಂಕಿತರ ಪ್ರಮಾಣ 20 ಸಾವಿರದ ಗಡಿ ದಾಟಿದೆ. ಕಳೆದ ಸೋಮವಾರ 1,540 ಜನರಿಗೆ ಒಂದೇ ದಿನ ಸೋಮಕು ತಗುಲಿರುವುದು ಇಲ್ಲಿಯವರೆಗಿನ ದಾಖಲೆಯಾಗಿದೆ. ಗಮನಾರ್ಹ ಸಂಗತಿಯೆಂದರೇ ವೈರಾಣು ಸೋಂಕಿತ 19.36% ರಷ್ಟು, ಅಂದರೇ ದಿನವೊಂದಕ್ಕೆ 618 ಜನರು ಗುಣಮುಖರಾಗುತ್ತಿದ್ದು ಈ ವರದಿ ಸದ್ಯದ ಮಟ್ಟಿಗೆ ನಿರಾಳವೆನಿಸಿದೆ.
ಆದರೂ ಸೋಂಕು ಹರಡುವಿಕೆ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಆರೋಗ್ಯ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ದೇಶಾದ್ಯಂತ ಮೇ 3ರ ವರೆಗೂ ಲಾಕ್ ಡೌನ್ ಆದೇಶವಿರುವುದರಿಂದ ಸೋಂಕು ದ್ವಿಗುಣಗೊಳ್ಳುವುದು ಕೊಂಚ ಮಟ್ಟಿಗೆ ಕಡಿಮೆಯಾಗಬಹುದು ಎಂದು ಭಾವಿಸಲಾಗಿದೆ.
ಇದೀಗ ಈ ಸೋಂಕು ದೇಶದ 430 ಜಿಲ್ಲೆಗಳಿಗೆ ಹರಡಿದ್ದು, ಮುಂಬೈ ನಗರದಲ್ಲಿ ಅತೀ ಹೆಚ್ಚು ಅಂದರೇ 3,000 ಪ್ರಕರಣಗಳು ದಾಖಲಾಗಿವೆ. ನಂತರದಲ್ಲಿ ದೆಹಲಿ( 2081), ಅಹಮದಾಬಾದ್(1298) , ಇಂದೋರ್ (915) ಮುಂತಾದ ನಗರಗಳಿವೆ ಎಂದು ತಿಳಿದುಬಂದಿದೆ.
60%ರಷ್ಟು ಸೋಂಕಿತರು ಮಹಾರಾಷ್ಟ್ರ,, ಗುಜರಾತ್, ದೆಹಲಿ, ರಾಜಸ್ಥಾನ, ತಮಿಳುನಾಡು ಈ ಐದು ರಾಜ್ಯಗಳಲ್ಲಿದ್ದಾರೆಂದು ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next