Advertisement

ಮುಂಬೈ : ಲಸಿಕೆ ಹಾಕಿದವರ ಗುರುತಿಸಲು ಕ್ಯೂಆರ್‌ ಕೋಡ್‌

06:57 PM Oct 06, 2021 | Team Udayavani |

ಮುಂಬೈ: ಲಸಿಕೆ ಹಾಕಿಸಲು ಅರ್ಹತೆ ಇರುವ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ಪೂರ್ಣಗೊಂಡಿರುವುದನ್ನು ದೃಢಪಡಿಸಿಕೊಳ್ಳಲು ಹೊಸ ವ್ಯವಸ್ಥೆಯನ್ನು ಮುಂಬೈನಲ್ಲಿ ಜಾರಿಗೆ ತರಲಾಗಿದೆ.

Advertisement

ಅಂಥ ಕಟ್ಟಡಗಳಿಗೆ ಬೃಹನ್ಮುಂಬೈ ಮಹಾನಗರ ಪಾಲಿಕೆಯ ವೆಬ್‌ಸೈಟ್‌ನಲ್ಲಿ ಕ್ಯೂಆರ್‌ ಕೋಡ್‌ ಆಧಾರಿತ ವ್ಯವಸ್ಥೆಯನ್ನು ಜಾರಿ ತರಲಾಗಿದೆ. ಅದರ ಮೂಲಕ  ಪೂರ್ಣ ಪ್ರಮಾಣದಲ್ಲಿ ಲಸಿಕೆ ನೀಡಲಾಗಿದ್ದರೆ ಅವುಗಳಿಗೆ ವಿಶೇಷ ಗುರುತು ನೀಡಲಾಗುತ್ತದೆ. ಇದರ ಜತೆಗೆ ಸಮೀಪದಲ್ಲಿರುವ ಲಸಿಕಾ ಕೇಂದ್ರಗಳ ಮಾಹಿತಿ ಕೂಡ ಅದರಲ್ಲಿ ಲಭ್ಯವಾಗಲಿದೆ.

ಮಹಾರಾಷ್ಟ್ರ ಪರಿಸರ ಸಚಿವ ಆದಿತ್ಯ ಠಾಕ್ರೆ ಈ ವಿನೂತನ ಕಲ್ಪನೆಯ ಕಾರಣಕರ್ತರು. ಅದರಂತೆ ಈ ಯೋಜನೆ ಜಾರಿಗೊಳಿಸಲಾಗಿದೆ. ಸದ್ಯಕ್ಕೆ ಯಾವ ಕಟ್ಟಡಗಳಲ್ಲಿ ವಾಸಿಸುತ್ತಿರುವವರಿಗೆ ಎಷ್ಟು ಪ್ರಮಾಣದಲ್ಲಿ ಲಸಿಕೆ ನೀಡಲಾಗಿದೆ ಮಾಹಿತಿ ಇನ್ನಷ್ಟೇ ಅಪ್‌ಡೇಟ್‌ ಮಾಡಬೇಕಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next