Advertisement

ದೇಶದಲ್ಲಿ ಇಂದಿನಿಂದ 3ನೇ ಹಂತದ ಲಾಕ್ ಡೌನ್: 40ಸಾವಿರ ದಾಟಿದ ಕೋವಿಡ್-19 ಸೋಂಕಿತರ ಸಂಖ್ಯೆ

08:25 AM May 05, 2020 | Mithun PG |

ನವದೆಹಲಿ: ದೇಶದಲ್ಲಿ ಇಂದಿನಿಂದ (ಸೋಮವಾರ ಏ.4)  ಮೂರನೇ ಹಂತದ ಲಾಕ್ ಡೌನ್ ಆರಂಭವಾಗಲಿದ್ದು, ಹಲವು ರಾಜ್ಯಗಳಲ್ಲಿ ಸ್ವಲ್ಪ ಮಟ್ಟಿಗಿನ ಸಡಿಲಿಕೆ ಇದೆ.  ಆದರೆ ಕಂಟೆನ್ಮೆಂಟ್ ಪ್ರದೇಶಗಳಲ್ಲಿ ಈವರೆಗಿದ್ದ ನಿರ್ಬಂಧಗಳು ಯಥಾಸ್ಥಿತಿಯಲ್ಲಿರಲಿವೆ.

Advertisement

ಕೇಂದ್ರದ ಆದೇಶದ ಮೇರೆಗೆ ಮೇ 17ರವರೆಗೂ ಲಾಕ್ ಡೌನ್ ಮುಂದುವರಿಯಲಿದೆ.  ಕಳೆದ 24 ಗಂಟೆಗಳ ಅವಧಿಯಲ್ಲಿ ಭಾರತದಲ್ಲಿ ಒಟ್ಟು 2,487 ಹೊಸ ಪ್ರಕರಣಗಳು ದಾಖಲಾಗಿದ್ದು, 83 ಜನರು ಮೃತಪಟ್ಟಿದ್ದಾರೆ. ಹೀಗಾಗಿ ಒಟ್ಟಾರೆ ಸಾವಿನ ಪ್ರಮಾಣ 1, 306ಕ್ಕೆ ತಲುಪಿದರೆ, ಸೋಂಕಿನಿಂದ ಬಳಲುತ್ತಿರುವವರ ಸಂಕ್ಯೆ 40, 263ಕ್ಕೆ ಏರಿಕೆಯಾಗಿದೆ.

ಹಲವರು ರಾಜ್ಯಗಳು ಲಾಕ್ ಡೌನ್ ಕುರಿತ ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದೆ. ಸೋಂಕು ಹೆಚ್ಚು ವ್ಯಾಪಿಸುವ ಅಪಾಯದಲ್ಲಿರುವ ಸೂಕ್ಷ್ಮ ಪ್ರದೇಶಗಳನ್ನು ಕಂಟೈನ್ಮೆಂಟ್ ಜೋನ್ ಎಂದು ಪರಿಗಣಿಸಲಾಗಿದೆ. ದೇಶವ್ಯಾಪಿ ವಿಮಾನ, ರೈಲು, ಮೆಟ್ರೋ, ಅಂತಾರಾಜ್ಯ ರಸ್ತೆ ಇತ್ಯಾದಿ ಸಂಚಾರ ಸ್ಥಗಿತ ನಿರ್ಧಾರ ಮುಂದುವರಿಯಲಿದೆ. ಹಾಗೆಯೇ, ಶಾಲೆ ಕಾಲೇಜು ಇತ್ಯಾದಿ ಶಿಕ್ಷಣ ಸಂಸ್ಥೆಗಳು ಇರುವುದಿಲ್ಲ.

ಸಿನಿಮಾ ಹಾಲ್, ಮಾಲ್​ಗಳು, ಹೊಟೆಲ್, ರೆಸ್ಟೋರೆಂಟ್​ಗಳ ಬಂದ್ ಮುಂದುವರಿಯುತ್ತದೆ. ಜನಜಾತ್ರೆ ಸೇರುವ ಕಾರ್ಯಕ್ರಗಳು ನಿಷಿದ್ಧ. ಪೂಜಾ ಮಂದಿರಗಳಿಗೂ ಅವಕಾಶ ಇರುವುದಿಲ್ಲ.ಈ  ನಿರ್ಬಂಧಗಳು ಮೇ 17ರವರೆಗೂ ಮುಂದುವರಿಯಲಿವೆ. ಎಲ್ಲಾ ವಲಯಗಳಲ್ಲೂ ಸಂಜೆ 7ರಿಂದ ಬೆಳಗ್ಗೆ 7ರವರೆಗೆ ಅನಗತ್ಯ ಜನಸಂಚಾರವನ್ನು ನಿಷೇಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next