Advertisement
ಬಾಲ್ಯವನ್ನು ನಿಯಮಗಳ ಕಟ್ಟು-ಕಟ್ಟಳೆಗಳ ಪರಿದಿಯೊಳಗೆ ತರದೆ ಆ ಬಾಲ್ಯವನ್ನು ಅದು ಬಂದಂತೆ ಆಸ್ವಾದಿಸಲು ಸಾಧ್ಯವಾಗುತ್ತಿದ್ದದ್ದು ಅದೇ ಸರ್ಕಾರಿ ಶಾಲೆಗಳಲ್ಲಿ ಅಂದರೆ ತಪ್ಪಿಲ್ಲ. ಸೋ ಕಾಲ್ಡ್ ಹೈಜೀನ್ ಗಳ ಎದುರು ಮನ ಬಂದಂತೆ ಮಣ್ಣಲ್ಲಿ ಹೊರಳಿ ಆಡಿ ನೀಲಿ-ಬಿಳಿ ಅಂಗಿ ಕೆಂಪಾಗುತ್ತಿದ್ದದ್ದು – ಅಮ್ಮ ಅದನ್ನು ನೋಡಿ ದಿನಾ ಬೈದು ಒಗೆಯುತ್ತಿದ್ದದ್ದು…, ಅಷ್ಟು ಸಣ್ಣವರಿದ್ದಾಗಲೇ ಲವ್ ಅನ್ನೋ ಶಬ್ದದ ಸ್ಪೆಲ್ಲಿಂಗ್ ತಿಳಿಯದಿದ್ರೂ ತಮಾಷೆ ಮಾಡ್ತಾ – ಮುಗ್ದ ಕನಸುಗಳಲ್ಲಿ ತೇಲುತ್ತಿದ್ದ ಕಾಲ ಅದು. ಕೇವಲ ನೆನಪಲ್ಲ ದೂರ ನಿಂತು ನೋಡಿದಾಗ ಅದೇ ಆಧುನಿಕ ಬಾಲ ಗೋಕುಲ ಏನಂತೀರಿ ?
Related Articles
Advertisement
ಮಾಧ್ಯಮ ವರದಿಗಳ ಪ್ರಕಾರ, ಈಗ ಹೊಸ ಖಾಸಗಿ ಶಾಲೆಗಳನ್ನು ತೆರೆಯಲು ಅರ್ಜಿಗಳು 4.38 ಪಟ್ಟು ಹೆಚ್ಚಾಗಿದೆ. ಆದರೆ, ಸರ್ಕಾರಿ ಶಾಲೆಗಳೂ ಚೇತರಿಕೆಯನ್ನು ಕಾಣುತ್ತಿವೆ. ಅದಕ್ಕೆ ಉದಾಹರಣೆ ಎಂಬಂತೆ, ಕೇಂದ್ರ ಶಿಕ್ಷಣ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2021ರಲ್ಲಿ ದೇಶಾದ್ಯಂತ 1.85 ಕೋಟಿ ಹೊಸ ಪ್ರವೇಶಗಳು 1ನೇ ತರಗತಿಯಲ್ಲಿ ನಡೆದಿವೆ.
ದೇಶದಲ್ಲಿ 9ರಿಂದ 10ನೇ ತರಗತಿಯವರೆಗಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಡ್ರಾಪ್‌ಔಟ್ 2021ರಲ್ಲಿ 14.6 ಶೇಕಡಕ್ಕೆ ಇಳಿದಿದೆ, ಇದು 2020ರಲ್ಲಿ 16.1% ಆಗಿತ್ತು ಎಂದು ಕೇಂದ್ರ ಶಿಕ್ಷಣ ಇಲಾಖೆ ತಿಳಿಸಿದೆ. ಈ ಅಂಕಿ-ಅಂಶಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್ಸೈಟ್ ಮತ್ತು ಪತ್ರಿಕಾ ವರದಿಗಳಿಂದ ಪಡೆಯಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಅಡಿಯಲ್ಲಿ ಶಾಲೆಗಳಿಗೆ ದಾಖಲಾಗದ ಮಕ್ಕಳನ್ನು ಗುರುತಿಸಲು ಅಧಿಕಾರಿಗಳು ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಿದವರಿಗೆ ಆರ್ಥಿಕ ಬಿಕ್ಕಟ್ಟು, ಅನಾರೋಗ್ಯ ಮತ್ತು ಕುಟುಂಬ ಸಮಸ್ಯೆಗಳು ಮಕ್ಕಳು ಶಾಲಾ ಶಿಕ್ಷಣದಿಂದ ಹೊರಗುಳಿಯಲು ಕಾರಣ ಎಂದು ತಿಳಿಯಿತು.
ದೇಶದಲ್ಲಿ ಸರ್ಕಾರಿ ಶಾಲೆಗಳ ಸುಸ್ಥಿತಿಗೆ ಸರ್ಕಾರ ಪ್ರಯತ್ನ ಮಾಡುತ್ತದೆಯಾದರೂ ತಳಮಟ್ಟದ ಆಧಿಕಾರಿಗಳು ಮತ್ತು ಆಡಳಿತ ವ್ಯವಸ್ಥೆ ಭ್ರಷ್ಟಾಚಾರ ಮುಕ್ತವಾಗಿ ಕ್ರಮ ಕೈಕೊಂಡು ಕಾರ್ಯೋನ್ಮುಕರಾದಾಗ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ಕೊಡುವುದು ಬಿಡಿ ಅವುಗಳಷ್ಟು ಉನ್ನತ ಸ್ಥಿತಿಗೆ ತಲುಪಲೂ ಕಷ್ಟವಾದೀತು.