ಇಟಾನಗರ:ದೇಶಾದ್ಯಂತ ಕೋವಿಡ್ 19 ಲಸಿಕೆ ಅಭಿಯಾನ ಮುಂದುವರಿದಿದ್ದು, ಏತನ್ಮಧ್ಯೆ ಅರುಣಾಚಲ ಪ್ರದೇಶದ ಆರೋಗ್ಯ ಮತ್ತು ಜಿಲ್ಲಾಧಿಕಾರಿಗಳು ಬರೋಬ್ಬರಿ ಒಂಬತ್ತು ಗಂಟೆಗಳ ಕಾಲ ಕಾಲ್ನಡಿಗೆಯಲ್ಲಿ ತೆರಳಿ ಸಮುದ್ರ ಮಟ್ಟದಿಂದ 14,000 ಅಡಿ ಎತ್ತರದಲ್ಲಿರುವ ಕುಗ್ರಾಮವಾದ ತವಾಂಗ್ ಜಿಲ್ಲೆಯ ಲುಗುಥಾಂಗ್ ಗೆ ಭೇಟಿ ನೀಡಿ ಯಾಕ್ ಮೇಯಿಸುವ(ಕುರಿಗಾಹಿಗಳಿದ್ದಂತೆ) 16 ಜನರಿಗೆ ಕೋವಿಡ್ ಲಸಿಕೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಪತ್ರಕರ್ತೆಯಾದ ಹರಿಪ್ರಿಯಾ!: ಮತ್ತೆ ಶೂಟಿಂಗ್‌ನಲ್ಲಿ ಬಿಝಿ ಹುಡುಗಿ
ತವಾಂಗ್ ಜಿಲ್ಲೆಯ ಲುಗುಥಾಂಗ್ ಟಿಬೆಟ್ ಗಡಿ ಸಮೀಪದಲ್ಲಿದೆ. ತವಾಂಗ್ ನ ಡೆಪ್ಯುಟಿ ಕಮಿಷನರ್ ಸಾಂಗ್ ಫುಂಟ್ಸೊಕ್ ನೇತೃತ್ವದ ಎಂಟು ಮಂದಿ ಸದಸ್ಯರ ತಂಡ ಸೋಮವಾರ ಕುಗ್ರಾಮಕ್ಕೆ ಭೇಟಿ ನೀಡಿ 16 ಮಂದಿಗೆ ಕೋವಿಡ್ ಲಸಿಕೆ ನೀಡಿದ್ದರು. ಮೇ 19ರಂದು ತವಾಂಗ್ ನ ಆರೋಗ್ಯ ಮತ್ತು ಜಿಲ್ಲಾಧಿಕಾರಿಗಳು ಆಯೋಜಿಸಿದ್ದ ಸರ್ಕಾರದ ಕೋವಿಡ್ ರೋಗನಿರೋಧಕ ಶಿಬಿರದಲ್ಲಿ ಈ ಗ್ರಾಮಸ್ಥರು ಪಾಲ್ಗೊಂಡಿರಲಿಲ್ಲವಾಗಿತ್ತು ಎಂದು ವರದಿ ವಿವರಿಸಿದೆ.
ಈ ವೈದ್ಯರ ತಂಡ ಭಾನುವಾರ ಬೆಳಗ್ಗೆ ಏಳು ಗಂಟೆಗೆ ತಮ್ಮ ಪ್ರಯಾಣ ಆರಂಭಿಸಿದ್ದರು. ಸಂಜೆ 4.30ಕ್ಕೆ ಡೊಮ್ಸಾಂಗ್ ಗ್ರಾಮ ತಲುಪಿದ್ದರು. ಇಂಡೋ-ಟಿಬೆಟಿಯನ್ ಗಡಿಯಲ್ಲಿ ತವಾಂಗ್ ಜಿಲ್ಲೆಯ ಥಿಂಗ್ಬು ಮತ್ತು ಲುಗುಥಾಂಗ್ ನಡುವೆ 14,ಸಾವಿರ ಅಡಿ ಎತ್ತರದಲ್ಲಿ ಈ ಡೊಮ್ಸಾಂಗ್ ಗ್ರಾಮವಿದೆ!