Advertisement
ಆಹಾರವೂ ಸಹಿತ ದಿನಬಳಕೆಯ ಸಾಮಗ್ರಿಗಳಿಗೆ ಮಂಗಳೂರು ಮತ್ತು ಕೇರಳ ವನ್ನು ಅವಲಂಬಿಸಿರುವ ಲಕ್ಷದ್ವೀಪ ಕೇವಲ ಮಂಗಳೂರಿನಿಂದ ವರ್ಷಕ್ಕೆ ಸರಿಸುಮಾರು 6,652 ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನೇ ಪಡೆದು ಕೊಳ್ಳುತ್ತಿದೆ. ತೆಂಗಿನಕಾಯಿ ಮತ್ತು ಮೀನು ಹೊರತುಪಡಿಸಿದರೆ ಉಳಿದೆಲ್ಲ ಅಗತ್ಯ ಪರಿಕರಗಳು ಮಂಗಳೂರು, ಕಲ್ಲಿ ಕೋಟೆ ಮೂಲಕ ಈ ದ್ವೀಪ ಪ್ರದೇಶಕ್ಕೆ ರವಾನೆ ಯಾಗುತ್ತದೆ. ಇದೀಗ ಕೇರಳದಲ್ಲಿ ಕೋವಿಡ್- 19 ದೃಢಪಟ್ಟಿರುವುದರಿಂದ ಅಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಸೋಂಕು ನಿಯಂತ್ರಿ ಸಲು ಕಠಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಮಂಗಳೂರು ಹಳೆ ಬಂದರಿಗೆ ಲಕ್ಷದ್ವೀಪದಿಂದ ಪ್ರಯಾಣಿಕ ನೌಕೆ ಕೂಡ ಸಾಮಾನ್ಯವಾಗಿ ವಾರಕ್ಕೊಮ್ಮೆ ಬರುತ್ತದೆ. ಅದರಲ್ಲಿ ಬರುವ ಅಲ್ಲಿನ ಪ್ರಯಾಣಿಕರು ತಮಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸಿ ಹೋಗುತ್ತಿದ್ದರು. ಮಾ. 13ರಂದು ಆಗಮಿ ಸಿದ್ದ ಪ್ರಯಾಣಿಕ ನೌಕೆಯಲ್ಲಿದ್ದ ಸಿಬಂದಿ, ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಇದೀಗ ಪ್ರಯಾಣಿಕ ನೌಕೆಗಳನ್ನು ನಿರ್ಬಂಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಆದರೆ ಸರಕು ನೌಕೆಗಳಿಗೆ ಅವಕಾಶವಿದೆ. ಮುಂದೆ ಸರಕು ನೌಕೆಗಳನ್ನು ಕೂಡ ನಿರ್ಬಂಧಿಸಿದರೆ ದ್ವೀಪ ಪ್ರದೇಶದ ಜನತೆ ತೊಂದರೆಗೀಡಾಗಬಹುದು.
Related Articles
ಲಕ್ಷದ್ವೀಪ ಕರ್ನಾಟಕ, ಕೇರಳ, ಕೊಚ್ಚಿ ಬಂದರುಗಳ ಮೂಲಕ ಅಗತ್ಯ ವಸ್ತುಗಳನ್ನು ತರಿಸಿ ಕೊಳ್ಳುತ್ತಿದೆ. ಸದ್ಯಕ್ಕೆ ಯಾವುದೇ ತೊಂದರೆ ಯಾಗಿಲ್ಲ. ಆದಾಗ್ಯೂ ಇಲ್ಲಿನ ಹೋಲ್ ಸೇಲ್ ಏಜೆನ್ಸಿ, ಕೋ-ಆಪರೇಟಿವ್ ಮಾರ್ಕೆ ಟಿಂಗ್ ಫೆಡರೇಷನ್‌ಗೆ ಅಗತ್ಯ ಮುನ್ನೆ ಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಲಕ್ಷದ್ವೀಪ ದಲ್ಲಿ ಇದುವರೆಗೆ ಯಾವುದೇ ಕೋವಿಡ್- 19 ದೃಢವಾಗಿಲ್ಲ. 8 ಮಂದಿಯನ್ನು ಕ್ವಾರಂಟೈನ್‌ನಲ್ಲಿಟ್ಟು ನಿಗಾ ವಹಿಸಲಾಗಿದ್ದು. ಪರಿಸ್ಥಿತಿಯ ಅರಿವಿದೆ. ಅಗತ್ಯ ವಸ್ತುಗಳ ಕೊರತೆಯಾಗದಂತೆ ಕ್ರಮ ಕೈಗೊಳ್ಳುತ್ತಿದ್ದೇವೆ.
- ಮಹಮ್ಮದ್ ಫೈಝಲ್, ಸಂಸದರು, ಲಕ್ಷದ್ವೀಪ
Advertisement
ಕಾರ್ಮಿಕರ ಬಗ್ಗೆ ಹೆಚ್ಚಿನ ಕಾಳಜಿಲಕ್ಷದ್ವೀಪಕ್ಕೆ ಅಗತ್ಯವಸ್ತುಗಳನ್ನು ಕಳುಹಿಸಿ ಕೊಡುವುದಕ್ಕೆ ಸದ್ಯಕ್ಕೆ ನಿಬಂìಧವಿಲ್ಲ. ಮಂಗಳೂರು ಮತ್ತು ಲಕ್ಷದ್ವೀಪ ಎರಡೂ ಕಡೆ ವಿಶೇಷ ತಪಾಸಣೆ ನಡೆಸಲಾಗುತ್ತಿದೆ. ಲಕ್ಷದ್ವೀಪದಲ್ಲಿ ಕೂಡ ಪರೀಕ್ಷಾ ವರದಿಯನ್ನು ನೋಡಿಯೇ ಪ್ರವೇಶ ನೀಡಲಾಗುತ್ತಿದೆ. ಇಲ್ಲಿನ ಕಾರ್ಮಿಕರ ಬಗ್ಗೆ ನಾವು ಹೆಚ್ಚಿನ ಕಾಳಜಿ ವಹಿಸುತ್ತಿದ್ದೇವೆ.
- ಉಸ್ಮಾನ್ ಮಂಗಳೂರು, ಅಗತ್ಯ ವಸ್ತುಗಳ ಪೂರೈಕೆದಾರ