Advertisement

ರೈತನ ಕಣ್ಣಲ್ಲಿ ನೀರು ತರಿಸಿದ ಡೊಣ್ಣ ಮೆಣಸಿನಕಾಯಿ

05:37 PM Apr 29, 2020 | Suhan S |

ಚಿಕ್ಕೋಡಿ: ಒಂದು ಕಡೆ  ಕೋವಿಡ್ 19 ಭೀತಿ, ಮತ್ತೂಂದು ಕಡೆ ನೆತ್ತಿ ಸುಡುವ ಬೀರು ಬಿಸಲಿನ ಬೇಗೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜಮೀನಿನಲ್ಲಿ ಹುಲಸಾಗಿ ಬೆಳೆದ ಡೊಣ್ಣೆ ಮೆಣಸಿನಕಾಯಿ ಸಮರ್ಪಕ ಮಾರಾಟವಾಗದೇ ರೈತನ ಕಣ್ಣಲ್ಲಿ ನೀರು ತರಿಸುತ್ತಿದೆ.

Advertisement

ತಾಲೂಕಿನ ಡೋಣವಾಡ ಗ್ರಾಮದ ಸಿದ್ದಗೌಡ ಪಾಟೀಲ ಎಂಬ ರೈತ ತನ್ನ 3 ಎಕರೆ ಜಮೀನಿನಲ್ಲಿ ಕೇವಲ ಎರಡು ತಿಂಗಳ ಅವಧಿಯಲ್ಲಿ ಅಂದಾಜು 4 ಲಕ್ಷ ರೂ ಖರ್ಚು ಮಾಡಿ ಡೊಣ್ಣೆ ಮೆಣಸಿನಕಾಯಿ ಬೆಳೆ ನಾಟಿ ಮಾಡಿದ್ದರು. ಈಗ ಬೆಳೆ ರೈತನ ಕೈಸೆರುತ್ತಿದೆ. ಆದರೆ ಲಾಕಡೌನ್‌ ಇರುವುದರಿಂದ ನೆರೆಯ ಮಹಾರಾಷ್ಟ್ರದ ಕೊಲ್ಲಾಪೂರ, ಪುಣೆ, ಸಾಂಗ್ಲಿ, ಗೋವಾ ಮತ್ತು ಬೆಳಗಾವಿ ನಗರದ ದೊಡ್ಡ ದೊಡ್ಡ ಹೊಟೇಲ್‌ಗ‌ಳು ಮುಚ್ಚಿವೆ. ಹೀಗಾಗಿ ಡೊಣ್ಣೆ ಮೆಣಸಿನಕಾಯಿ ಗಿಡದಲ್ಲಿ ಹಣ್ಣಾಗಿ ಕೊಳೆಯುವ ಸ್ಥಿತಿ ತಲುಪಿವೆ ಎಂದು ರೈತ ಅಳಲು ತೋಡಿಕೊಂಡನು.

ಪ್ರತಿ ವರ್ಷ ಬೇಸಿಗೆಯಲ್ಲಿ ನೀರಿನ ತೊಂದರೆ ಅನುಭವಿಸುವ ಡೋಣವಾಡ ಗ್ರಾಮದ ರೈತರು ಈ ವರ್ಷ ಅಲ್ಪಸ್ವಲ್ಪ ನೀರಿನ ಮೂಲ ಬಳಕೆ ಮಾಡಿಕೊಂಡು ಡೊಣ್ಣೆ ಮೆಣಸಿನಕಾಯಿ ತರಕಾರಿ ನಾಟಿ ಮಾಡಿದ್ದರು. ರೈತನ ಶ್ರಮ ಸಾರ್ಥಕವಾಗಿದ್ದರೇ ಅಂದಾಜು 15 ಲಕ್ಷ ರೂ.ವರೆಗೆ ಲಾಭಾಂಶ ಸಿಗುತ್ತಿತ್ತು. ಆದರೆ ತಾನೊಂದು ಬಗೆದರೆ ದೆ„ವವೊಂದು ಬಗೆಯುತ್ತದೆ ಎನ್ನುವ ಗಾದೆ ಇಂದು ರೈತನಿಗೆ ಅನ್ವಯವಾಗಿದೆ. ಕೇವಲ ಎರಡು ತಿಂಗಳ ಅವಧಿ ಯಲ್ಲಿ ನಾಲ್ಕು ಲಕ್ಷ ರೂ ಖರ್ಚು ಮಾಡಿದ ಬೆಳೆ ಇಂದು ಕಣ್ಣು ಮುಂದೆ ನಾಶವಾಗುತ್ತಿರುವುದು ರೈತನಿಗೆ ನುಂಗಲಾರದ ತುತ್ತಾಗಿದೆ.

ರೈತನು ಬೆಳೆದ ತರಕಾರಿ, ಹಣ್ಣು ಹಂಪಲ ಮಾರಾಟ ಮಾಡಲು ಯಾವುದೇ ತೊಂದರೆ ಇಲ್ಲ ಎಂದು ಸರ್ಕಾರ ಹೇಳುತ್ತಿದೆ. ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಗ್ರಾಹಕರು ಅಲ್ಪಸ್ವಲ್ಪ ಖರೀದಿ ಮಾಡುತ್ತಾರೆ. ಇದು ಸಾಕಾಗದು. ಅದೇ ಹೋಟೆಲ್‌ ಉದ್ಯಮಗಳು ಪ್ರಾರಂಭವಿದ್ದರೇ ಇಂದು ರೈತ ಕೈತುಂಬ ದುಡ್ಡು ಎಣಿಸುತ್ತಿದ್ದ, ಆದರೆ ಕೋವಿಡ್ 19  ವೈರಸ್‌ ರೈತನ ಬೆನ್ನೆಲುಬು ಮುರಿದಿದೆ. ಇದೇ ರೀತಿ ಲಾಕಡೌನ್‌ ಮುಂದುವರೆದರೆ ರೈತರು ಬೀದಿಗೆ ಬರುತ್ತಾರೆ ಎಂದು ಡೊಣ್ಣೆ ಮೆಣಸಿನಕಾಯಿ ಬೆಳೆದ ರೈತ ಪಾಟೀಲ ನೋವಿನಿಂದ ಹೇಳಿದ.

ಕೇವಲ ಎರಡು ತಿಂಗಳ ಅವಧಿಯಲ್ಲಿ ನಾಲ್ಕು ಲಕ್ಷ ರೂ. ಖರ್ಚು ಮಾಡಿ ಡೊಣ್ಣು ಮೆಣಸಿನಕಾಯಿ ಬೆಳೆ ನಾಟಿ ಮಾಡಿದ್ದೆ. ಈಗ ಲಾಕಡೌನ್‌ ಇರುವುದರಿಂದ ಡೊಣ್ಣು ಮೆಣಸಿನಕಾಯಿ ಬೆಳೆ ನಾಶವಾಗುತ್ತಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಡೊಣ್ಣು ಮೆಣಸಿನಕಾಯಿ ಬೆಳೆ ಪರಿಶೀಲಿಸಿ, ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಲು ಪ್ರಯತ್ನ ಮಾಡಬೇಕು. – ಸಿದ್ದಗೌಡ ಪಾಟೀಲ, ಡೋಣವಾಡ ರೈತ

Advertisement

 

-ಮಹಾದೇವ ಪೂಜೇರಿ

Advertisement

Udayavani is now on Telegram. Click here to join our channel and stay updated with the latest news.

Next