Advertisement
144 ಸೆಕ್ಷನ್ ಜಾರಿಯ ನಡುವೆಯೇ ಬೆಳಗ್ಗಿನ ಜಾವದಲ್ಲಿ ಅಂಗಡಿಗಳು ತೆರಯುತ್ತಿದ್ದಂತೆ ದಿನಕ್ಕೆ 10 ರಿಂದ 20ರ ವರೆಗೆ ದೂರವಾಣಿ ಕರೆಗಳು ಲೂಡೋ, ಕ್ಯಾರಂ ಸಹಿತ ಕಾರ್ಡ್ಸ್‌ಗಳನ್ನು ನೀಡುವಂತೆ ಜನರು ಒತ್ತಾ ಯಿಸುತ್ತಿದ್ದು, ಹೆಚ್ಚಿನ ಮನೆಗಳಲ್ಲಿ ಮೊಬೈಲ್, ಟಿ.ವಿ. ನೋಡಿ ಬಳಿಕ ಇಂತಹ ಆಟಗಳಿಗೆ ಪ್ರಾಧಾನ್ಯ ದೊರೆಯುತ್ತಿದೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ವಸತಿ ಸಂಕೀರ್ಣ ಇರುವಲ್ಲಿ ಹೊರಗಡೆ ಆಟದ ಮೈದಾನ ಇಲ್ಲದ ಕಡೆ ಇಂತಹ ಆಟದ ಸಾಮಗ್ರಿಗಳಿಗೆ ಹೆಚ್ಚಿನ ಬೇಡಿಕೆ ಬರು ತ್ತಿದ್ದು, ಅಂಗಡಿಗಳಲ್ಲಿ ಇದ್ದ ಸ್ಟಾಕ್‌ಗಳು ಖಾಲಿಯಾಗಿದ್ದು, ಅಂಗಡಿ ಮಾಲಕರು ಹೊರಗಿನಿಂದ ತರಿಸಿ ಕೊಡುವಂತೆ ಜನರು ದುಂಬಾಲು ಬೀಳುತ್ತಿದ್ದಾರೆ. ಆದರೆ ಕೆಲವೊಂದು ಅಂಗಡಿಗಳನ್ನು ತೆರೆಯಲು ಅವಕಾಶ ಇಲ್ಲದೆ ಸಾಮಗ್ರಿಗಳು ಅಂಗಡಿಯೊಳಗೆ ಉಳಿದಿದೆ.
ಹಲವಾರು ವರ್ಷಗಳಿಂದ ಮನೆಯಿಂದ ದೂರವಿದ್ದವರು ಕೊರೊನಾ ವೈರಸ್ ಪರಿಣಾಮದಿಂದ ಮನೆಯಲ್ಲಿ ಮತ್ತು ಸುತ್ತಮುತ್ತಲಿನಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದಾರೆ. ಕೃಷಿ ಸೇರಿದಂತೆ ವಿವಿಧ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಗ್ರಾಮೀಣ ಕ್ರೀಡೆಗೆ ಆದ್ಯತೆ
ನಗರ ಪ್ರದೇಶಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಲೂಡೋದಂತಹ ಆಟದ ಸಾಮಗ್ರಿಗಳಿಗೆ ಬೇಡಿಕೆ ಬಂದ ರೀತಿಯಲ್ಲೇ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು ಹಿಂದಿನ ಗ್ರಾಮೀಣ ಕ್ರೀಡೆ ಯತ್ತ ಗಮನ ವಹಿಸುತ್ತಿದ್ದಾರೆ. ಕುಂಟೆಬಿಲ್ಲೆ, ಜ್ಯುಬಿಲಿ, ಗೋಲಿ ಆಟ ಕುಟ್ಟಿದೊನ್ನೆ ಸಹಿತ ವಿವಿಧ ಆಟಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.