Advertisement

ದೊಡ್ಡಣ್ಣ ಅಮೆರಿಕಕ್ಕೆ ಕೋವಿಡ್ 19 ಗುದ್ದು

01:33 PM Mar 31, 2020 | Suhan S |

ವಾಷಿಂಗ್ಟನ್‌: ಮಾರಕ ಕೋವಿಡ್ 19 ವೈರಸ್‌ ವಿಶ್ವದ ದೊಡ್ಡಣ್ಣ ಅಮೆರಿಕವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಕ್ಷಣಕ್ಷಣಕ್ಕೂ ಏರುತ್ತಿರುವ ಸಾವಿನ ಸಂಖ್ಯೆ ಟ್ರಂಪ್‌ ಸರಕಾರವನ್ನು ದಂಗು ಬಡಿಸಿದೆ. ಇಷ್ಟೊಂದು ಪ್ರಮಾಣದಲ್ಲಿ ಜೀವಹಾನಿ ಸಂಭವಿಸುತ್ತದೆ ಎಂಬುದರ ಅರಿವೇ ಇರದ ಅಮೆರಿಕ, ಇದೀಗ ವೈರಾಣು ವಿರುದ್ಧದ ಹೋರಾಟಕ್ಕೆ ಲಭ್ಯವಿರುವ ಎಲ್ಲ ಮಾರ್ಗಗಳ ಅನ್ವೇಷಣೆಯಲ್ಲಿ ನಿರತವಾಗಿದೆ. ಆದರೆ ಮುಂದಿನ ಎರಡು ವಾರದಲ್ಲಿ ಅಮೆರಿಕದ ಸಾವಿನ ಸಂಖ್ಯೆ ಏರುವ ಸಾಧ್ಯತೆ ಇದ್ದು, 2ಲಕ್ಷ ಮಂದಿ ಜೀವಕ್ಕೆ ಸಂಚಕಾರವಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ.

Advertisement

ಶ್ವೇತ ಭವನದ ಎಚ್ಚರಿಕೆ :  ಪ್ರಾಥಮಿಕ ಹಂತದಲ್ಲಿ ನಿರ್ಲಕ್ಷ್ಯ ತೋರಿದ ಪರಿಣಾಮ ಪ್ರಪಂಚದಲ್ಲೇ ಅತಿ ಹಚ್ಚು ಸೋಂಕಿತರಿರುವ ದೇಶ ಅಮೆರಿಕ ಎಂದಾಗುತ್ತಿದ್ದು, ನಿಯಮಗಳನ್ನು ಪಾಲಿಸದೇ ಇದ್ದರೇ ಸುಮಾರು 1 ಲಕ್ಷದಿಂದ 2 ಲಕ್ಷ ಮಂದಿ ಸಾವನ್ನಪ್ಪಬಹುದೆಂದು ಶ್ವೇತ ಭವನ ಎಚ್ಚರಿಸಿದೆ.

ಮನವಿ ಮಾಡಿದ ವೈದ್ಯ ಅಂಥೋನಿ ಫೌಸಿ :   ಕೋವಿಡ್‌-19 ಎಣಿಸಿದ್ದಕ್ಕಿಂತ ವೇಗವಾಗಿ ಹರಡುತ್ತಿದ್ದು, ಇಂತಹ ಭೀಕರ ಸನ್ನಿವೇಶ ಸೃಷ್ಟಿಯಾಗಲು ನಾವು ಬಿಡಬಾರದು ಎಂದು ಅಮೆರಿಕದ ಖ್ಯಾತ ವೈದ್ಯ ಅಂಥೋನಿ ಫೌಸಿ ಶ್ವೇತಭವನದ ರೋಸ್‌ ಗಾರ್ಡನ್‌ನಲ್ಲಿ ಮನವಿ ಮಾಡಿದ್ದಾರೆ. ಜತೆಗೆ ಅಮೆರಿಕನ್ನರು ಕೋವಿಡ್ 19  ಕುರಿತು ಭಯಪಡುವ ಅಗತ್ಯ ಇಲ್ಲ ಎಂದು ಸ್ಪಷ್ಟನೆ ನೀಡಿದ್ದು, ಅನಗತ್ಯ ತಿರುಗಾಟ, ಪ್ರಯಾಣವನ್ನು ಕಡಿಮೆ ಮಾಡಿ ಎಂದಿದ್ದಾರೆ.

ಮೂರು ತಿಂಗಳು ಕೋವಿಡ್ 19 : ನಿಖರವಾದ ಅಧ್ಯಯನವೊಂದು ಕೊರೊನಾ ಉಪಟಳದಿಂದಾಗುವ ಅನಾಹುತಗಳನ್ನು ಅಂದಾಜು ಮಾಡಿದೆ. ಈಗಾಗಲೇ ಇದಕ್ಕೆ 2,400 ಮಂದಿ ಸಾವನ್ನಪ್ಪಿದ್ದು, 139,700 ಮಂದಿ ಸೋಂಕಿತದ್ದಾರೆ. ಸರಕಾರವೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಜನರ ರಕ್ಷಣೆಗಾಗಿ ಅಗತ್ಯ ಕಾನೂನುಗಳನ್ನು ರೂಪಿಸುತ್ತಿದೆ. ಆದರೆ ಕೋವಿಡ್ 19 ವೈರಸ್‌ ನಿಂದ ಅಮೆರಿಕ ಮುಕ್ತವಾಗುವುದಕ್ಕೆ 2ರಿಂದ3 ತಿಂಗಳು ಬೇಕು ಎಂದು ಹೇಳಿದ್ದಾರೆ ಟ್ರಂಪ್‌.

ಎಪ್ರಿಲ್‌ 30ರ ವರೆಗೆ ಲಾಕ್‌ಡೌನ್‌ :  ಸಾಮಾಜಿಕ ಅಂತರದ ನಿಯಮವನ್ನು ಎಪ್ರಿಲ್‌ 30ರವರೆಗೆ ವಿಸ್ತರಿಸಲಾಗಿದ್ದು, ಜನರು ಸಹಕರಿಸಬೇಕು. ಜೂನ್‌1ರಿಂದ ಅಮೆರಿಕ ಸುಧಾರಿಸಿಕೊಳ್ಳುತ್ತದೆ ಎಂದು ಟ್ರಂಪ್‌ ಭರವಸೆ ನೀಡಿದ್ದಾರೆ.ವಿಶ್ವದಲ್ಲೇ ಅತಿ ಹೆಚ್ಚು ಸೋಂಕಿತರಿರುವ ರಾಷ್ಟ್ರ ಅಮೆರಿಕ ಆಗಿದ್ದು, ನ್ಯೂಯಾರ್ಕ್‌ ನಗರವೊಂದರಲ್ಲೇ ಸಾವಿರಕ್ಕೂ ಅಧಿಕ ಮಂದಿ ಮರಣ ಹೊಂದಿದ್ದಾರೆ. ಇದರಿಂದಾಗಿ ತೀವ್ರ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Advertisement

ಸಾಂಕ್ರಾಮಿಕ ರೋಗದ ಕೇಂದ್ರವಾದ ನ್ಯೂಯಾರ್ಕ್‌ :  ಕೋವಿಡ್ 19  ವೈರಸ್‌ಗೆ ನಲುಗಿ ಹೋಗಿರುವ ನ್ಯೂಯಾರ್ಕ್‌ ನಲ್ಲಿ ಸೋಮವಾರದ ಅಂಕಿಅಂಶಗಳ ಪ್ರಕಾರ 59,568 ಮಂದಿ ಸೋಂಕಿತರಿದ್ದು, 1,126 ಮಂದಿ ಬಲಿಯಾಗಿದ್ದಾರೆ. ಯುಎಸ್‌ ಸಾಂಕ್ರಾಮಿಕ ರೋಗದ ಕೇಂದ್ರ ಬಿಂದುವಾಗಿದ್ದು, ಸಾವನ್ನಪ್ಪಿರುವವರಲ್ಲಿ ಶೇ.40ಕ್ಕಿಂತ ಹೆಚ್ಚು ಜನರು ನ್ಯೂಯಾರ್ಕ್‌ ಪ್ರದೇಶದವರು. ಜತೆಗೆ ಅಲ್ಲಿ ಕೋವಿಡ್ 19 ವೈರಸ್‌ನಿಂದ ಸಾವನ್ನಪ್ಪಿದ ಸುಮಾರು ಕಾಲು ಭಾಗದಷ್ಟು ಜನರು ನರ್ಸಿಂಗ್‌ ಹೋಂ ನಿವಾಸಿಗಳು ಎಂದು

ಗವರ್ನರ್‌ ಆಂಡ್ರ್ಯೋ ಕ್ಯುಮೊ ಹೇಳಿದ್ದಾರೆ. ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಮಾಹಿತಿ ಪ್ರಕಾರ, ಸ್ಪೇನ್‌ ತನ್ನ ಮೊದಲ ಸಾವಿನಿಂದ 1,000 ನೇ ಸ್ಥಾನಕ್ಕೆ ಹೋಗಲು 18 ದಿನಗಳನ್ನು ತೆಗೆದುಕೊಂಡಿತು. ಇಟಲಿ 21 ದಿನಗಳನ್ನು ತೆಗೆದುಕೊಂಡಿತ್ತು. ಆದ್ರೆ ನ್ಯೂಯಾರ್ಕ್‌ ರಾಜ್ಯವು 16 ದಿನಗಳನು °ತೆಗೆದುಕೊಂಡಿದೆ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next