ಬನಹಟ್ಟಿ : ಕೋವಿಡ್-19 ನ ಪ್ರಭಾವದಿಂದಾಗಿ ರಬಕವಿ-ಬನಹಟ್ಟಿ ತಾಲ್ಲೂಕಿನ ಬನಹಟ್ಟಿಯ ನೀರಿನ ಟಾಕಿ ಹತ್ತಿರ ನೇಕಾರಿಕೆ ಮಾಡಿ ಜೀವನ ಸಾಗಿಸುತ್ತಿರುವ ಮಲ್ಲಿಕಾರ್ಜುನ ಹುನ್ನೂರ ಕುಟುಂಬದ ಬಾಲಕಿ ನಂದಿನಿ (12) ಕಿಡ್ನಿ ಮಾತ್ರೆ ಸಿಗದೇ ಕುಟುಂಬಸ್ಥರು ಪರದಾಡುತ್ತಿದ್ದಾರೆ.
ಬಾಲ್ಯದಿಂದಲೇ ಕಿಡ್ನಿ ಸಮಸ್ಯೆಯನ್ನು ಹೊಂದಿರುವ ನಂದಿನಿ ಕಳೆದ ಐದು ವರ್ಷಗಳಿಂದ ಮಿರಜ್ ನ ಡಾ. ರಾಜೀವ ಗಾಂಧಿ ಆಸ್ಪತ್ರೆ ಮೂಲಕ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಕೋವಿಡ್-19 ಪ್ರಭಾವದಿಂದಾಗಿ ಎಲ್ಲ ಅಂತರ ಜಿಲ್ಲಾ ಹಾಗೂ ರಾಜ್ಯದ ಗಡಿಗಳು ಬಂದ ಆಗಿದ್ದರಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಬನಹಟ್ಟಿಯ ನೂತನ ವಿದ್ಯಾಲಯ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದು, ಪ್ರತಿ ಸಲ ಮಹಾರಾಷ್ಟ್ರದ ಮಿರಜ್ ಗೆ ಹೋಗಿ ಪ್ರತಿತಿಂಗಳು ಮಾತ್ರೆ ತರುವ ವ್ಯವಸ್ಥೆ ಮಾಡಿಕೊಂಡಿದ್ದರು. ಆದರೆ ಈಗ ಬಹಳಷ್ಟು ತೊಂದರೆಯಾಗಿದೆ. ಮಾತ್ರೆ ಇಲ್ಲದೇ ಮಗುವಿಗೆ ತುಂಬಾ ತೊಂದರೆಯಾಗುತ್ತದೆ.
ಈಗ ಲಾಕ್ ಡೌನ್ ನಿಂದ ಅಂತರ ರಾಜ್ಯ ಸಂಪರ್ಕ ಬಂದನಿಂದ ಕಳೆದ ಒಂದು ವಾರದಿಂದ ಪಟ್ಟಣದಲ್ಲಿ ಮಾತ್ರೆ ಸಿಗುತ್ತಿಲ್ಲ ಎನ್ನುವ ಕಾರಣದಿಂದ ಮಾತ್ರೆ ಇಲ್ಲದೆ ಬಾಲಕಿ ಬಳಲುತ್ತಿದೆ.
ಮಾತ್ರೆ ಇಲ್ಲದಿದ್ದರೆ ಮಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಪ್ರತಿ ತಿಂಗಳು ಮಿರಾಜಕ್ಕೆ ಹೋಗಿ ಮಾತ್ರೆ ತರುತ್ತಿದ್ದೇವು. ಆದರೆ ಈಗ ಯಾವುದೇ ಸೌಲಭ್ಯ ಇಲ್ಲದೇ ತೊಂದರೆಯಾಗಿದೆ ಎನ್ನುತ್ತಾರೆ ತಂದೆ ಮಲ್ಲಿಕಾರ್ಜುನ ಹುನ್ನೂರ.