ಬೆಂಗಳೂರು: ರಾಜ್ಯ ಸರ್ಕಾರ ಕೋವಿಡ್ 19 ಸೋಂಕಿತರ ನೆರವಿಗೆ ಕೋವಿಡ್ 19 ವಿಮಾ ಯೋಜನೆ ಜಾರಿಗೆ ತರಬೇಕೆಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ 19 ನಿಯಂತ್ರಣ ಮಾಡುವಲ್ಲಿ ಸರ್ಕಾರ ವಿಫಲವಾಗಿ ಬೌದಿಟಛಿಕ ದಿವಾಳಿತನ ತೋರುತ್ತಿದೆ.
ಸಚಿವರ ನಡುವೆ ಹೊಂದಾಣಿಕೆ ಕೊರತೆಯಿಂದ ಜನರಿಗೆ ಯಾವ ರೀತಿಯ ಪರಿಹಾರ ನೀಡಬೇಕು. ಜನರನ್ನು ಹೇಗೆ ರಕ್ಷಿಸಬೇಕು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ದೂರಿದರು. ಸರ್ಕಾರವು ಜನರ ನೆರವಿಗೆ ಕೋವಿಡ್ 19 ವಿಮಾ ಯೋಜನೆ ಜಾರಿಗೆ ತರಬೇಕು. ಕ್ವಾರಂಟೈನ್ ಆದವರಿಗೆ ವಿಮೆ ಘೋಷಣೆ ಮಾಡಬೇಕು. ಕೋವಿಡ್ 19 ಪಾಸಿಟಿವ್ ಬಂದರೆ 5 ಲಕ್ಷ ಪರಿಹಾರ ನೀಡುವ ವಿಮೆ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಕಪ್ಪು ಪಟ್ಟಿಗೆ ಸೇರಿರುವ ಎಸ್. ಎಂ. ಫಾರ್ಮಾಸಿಟಿಕಲ್ ಕಂಪನಿ ಕಳಪೆ ಉಪಕರಣಗಳನ್ನು ಸರ್ಕಾರಕ್ಕೆ ಸರಬರಾಜು ಮಾಡಿದೆ ಎಂಬ ದೂರು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಬಂದಿದೆ. ಬೇರೆ ಕಂಪನಿಯು 97 ರೂ. ಗೆ ಸ್ಯಾನಿಟೈಸರ್ ಕೊಡಲು ಸಿದ್ಧವಿದ್ದರೂ ಸರ್ಕಾರ ಅದನ್ನು ರದ್ದು ಮಾಡಿ 250 ರೂ.ಗೆ ಮತ್ತೆ ಅವರಿಂದಲೇ ಖರೀದಿಸಿದ್ದಾರೆ. ರಾಮನಗರ ಹಾಗೂ ಕಲಬುರಗಿಯಲ್ಲಿ ಈ ಸ್ಯಾನಿಟೈಸರ್ ಕಳಪೆ ಗುಣಮಟ್ಟದ್ದಿದೆ ಎಂದು ನಿರಾಕರಿಸಲಾಗಿದೆ.
-ಎಚ್.ಕೆ.ಪಾಟೀಲ್ , ಮಾಜಿ ಸಚಿವ