Advertisement

ಕೋವಿಡ್ ವೈರಸ್ ಪ್ಲಾಸ್ಟಿಕ್ ಮತ್ತು ಸ್ಟೀಲ್ ವಸ್ತುಗಳ ಮೇಲೆ ಮೂರು ದಿನಗಳ ಕಾಲ ಜೀವಂತ!

12:33 AM Mar 21, 2020 | Hari Prasad |

ನವದೆಹಲಿ: ವಿಶ್ವಾದ್ಯಂತ 8,000 ಜನರ ಸಾವಿಗೆ ಕಾರಣವಾಗಿರುವ ಮತ್ತು 2 ಲಕ್ಷಕ್ಕೂ ಅಧಿಕ ಜನರನ್ನು ಸೋಂಕಿತರನ್ನಾಗಿಸಿರುವ ಕೋವಿಡ್ 19 ಹೆಸರಿನ ಮಾರಕ ವೈರಸ್ ಸಾಮೂಹಿಕವಾಗಿ ಹರಡುವ ಕುರಿತಾಗಿ ಹೊಸ ಮಾಹಿತಿಗಳನ್ನು ಅಧ್ಯಯನ ಒಂದು ಬಹಿರಂಗಪಡಿಸಿದ್ದು ಈ ವರದಿ ನ್ಯೂ ಇಂಗ್ಲಂಡ್ ಜರ್ನಲ್ ಆಫ್ ಮೆಡಿಸಿನ್ ನಲ್ಲಿ (NEJM) ಪ್ರಕಟವಾಗಿದೆ.

Advertisement

ಈ ಅಧ್ಯಯನ ವರದಿಯಲ್ಲಿ ಪ್ರಕಟವಾಗಿರುವಂತೆ ಕೋವಿಡ್-19 ಕಾಯಿಲೆಗೆ ಕಾರಣವಾಗುವ ಸಾರ್ಸ್ – COV-2 ಹೆಸರಿನ ಈ ವೈರಸ್ ಗಾಳಿಯ ಕಣಗಳಲ್ಲಿ ಮೂರು ಗಂಟೆಗಳವರೆಗೆ ಪತ್ತೆ ಹಚ್ಚಲು ಸಾಧ್ಯವಿರುತ್ತದೆ. ಇನ್ನು ಇದೇ ವೈರಸ್ ತಾಮ್ರದ ಮೇಲ್ಮೈಗಳಲ್ಲಿ ನಾಲ್ಕು ಗಂಟೆಗಳವರೆಗೆ ಪತ್ತೆ ಸಾಧ್ಯವಾಗುವಂತಿರುತ್ತದೆ. ಕಾರ್ಡ್ ಬೋರ್ಡ್ ಮೇಲ್ಮೈಗಳಲ್ಲಿ ಇದು 24 ಗಂಟೆಗಳವರೆಗೆ ಜೀವಂತವಿದ್ದರೆ ಪ್ಲಾಸ್ಟಿಕ್ ಮತ್ತು ಸ್ಟೈನ್ ಲೆಸ್ ಸ್ಟೀಲ್ ಮೇಲ್ಮೈಗಳ ಮೇಲಿರುವ ಕೋವಿಡ್ 19 ವೈರಸ್ ಗಳನ್ನು ಮೂರು ದಿನಗಳ ನಂತರವೂ ಪತ್ತೆ ಹಚ್ಚಲು ಸಾಧ್ಯವಿರುತ್ತದೆ.

ವಿಶ್ವದೆಲ್ಲೆಡೆ ತಲ್ಲಣ ಮೂಡಿಸಿರುವ ಸಾರ್ಸ್ – CoV-2 ವೈರಸನ್ನು ಸಾರ್ಸ್ -CoV ವೈರಸ್ ನೊಂದಿಗೆ ಹೋಲಿಸಿ ಈ ವರದಿಯನ್ನು ಸಿದ್ಧಪಡಿಸಿರುವುದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ, ಈ ಸಾರ್ಸ್ – CoV ವೈರಸ್ 2002-03ರಲ್ಲಿ ಸಾಂಕ್ರಾಮಿಕ ಸ್ವರೂಪವನ್ನು ಪಡೆದುಕೊಂಡ ಬಳಿಕ ಸುಮಾರು 8,000 ಜನರನ್ನು ಕಾಡಿತ್ತು.

ಈ ಎರಡೂ ವೈರಸ್ ಗಳ ನಡುವೆ ನಿಕಟ ಸಾಮ್ಯತೆ ಇದೆ ಎಂಬ ಅಂಶವನ್ನೂ ಸಹ ವಿಜ್ಞಾನಿಗಳು ಇದೀಗ ಕಂಡುಕೊಂಡಿದ್ದಾರೆ. ಪ್ರಯೋಗ ಸನ್ನಿವೇಶಗಳಲ್ಲಿ ಸಾಬೀತುಗೊಂಡಿರುವಂತೆ ಕೋವಿಡ್ 19 ಹೆಸರಿನಿಂದ ಕರೆಯಲ್ಪಡುತ್ತಿರುವ ಸಾರ್ಸ್ – CoV2 ಮತ್ತು ಸಾರ್ಸ್ – CoV ವೈರಸ್ ಗಳು ವಾತಾವರಣದಲ್ಲಿ ಜೀವಂತವಿರುವ ಅವಧಿಯ ಸಾಮರ್ಥ್ಯ ಬಹುತೇಕ ಒಂದೇ ರೀತಿಯದ್ದಾಗಿದೆ ಎಂಬ ಅಂಶವೂ ಈ ಅಧ್ಯಯನದಿಂದ ಬಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next