Advertisement

ಕೋವಿಡ್‌-19: ಪ್ರಕರಣ ಬಚ್ಚಿಟ್ಟ ವರದಿ, ನಿರಾಕರಿಸಿದ ಚೀನ

09:33 PM Apr 15, 2020 | sudhir |

ಚೀನ: ಚೀನ ಆರಂಭದ ಹಂತದಲ್ಲಿ ಕೋವಿಡ್‌-19 ವೈರಾಣು ಪ್ರಸರಣವನ್ನು ಬಚ್ಚಿಟ್ಟದ್ದೇ ಇಷ್ಟೆಲ್ಲ ಅನಾಹುತಗಳಿಗೆ ಕಾರಣ ಎನ್ನಲಾಗುತ್ತಿದೆ. ಕಳೆದ ವರ್ಷ ನವಂಬರ್‌ನಲ್ಲೇ ವುಹಾನ್‌ ಪ್ರಾಂತ್ಯದಲ್ಲಿ ಕೋವಿಡ್‌-19 ಪ್ರಕರಣ ಕಾಣಿಸಿತ್ತು. ಆದರೆ ಚೀನ ಇದನ್ನು ಬಚ್ಚಿಟ್ಟಿತು. ಹೊರಜಗತ್ತಿಗೆ ಚೀನದಲ್ಲೇನಾಗುತ್ತಿದೆ ಎಂದು ಗೊತ್ತಿರಲಿಲ್ಲ. ಹೀಗೆ ಚೀನ ಕೋವಿಡ್‌-19 ಪ್ರಕರಣಗಳನ್ನು ರಹಸ್ಯವಾಗಿಟ್ಟ ಕಾರಣವೇ ಇಡೀ ಜಗತ್ತಿಗೆ ಅದು ಹರಡಿತು.

Advertisement

ಆದರೆ ಚೀನ ಮಾತ್ರ ಈ ಆರೋಪವನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಈ ಕುರಿತು ಸ್ಪಷ್ಟೀಕರಣ ನೀಡಿರುವ ಚೀನದ ದೂತವಾಸದ ವಕ್ತಾರ ಜಿ ರೊಂಗ್‌ ಭಾರತದ ಕೆಲವು ಮಾಧ್ಯಮಗಳು ಈಗಲೂ ಚೀನ ದೂಷಣೆಯನ್ನು ಮುಂದುವರಿಸಿರುವುದು ದುರ ದೃಷ್ಟಕರ. ಇವೆಲ್ಲ ವಾಸ್ತವಕ್ಕೆ ದೂರವಾದ ಮತ್ತು ತಿರುಚಿರುವ ಬೇಜವಾಬ್ದಾರಿ ವರದಿಗಳು ಎಂದಿದ್ದಾರೆ.

ವುಹಾನ್‌ನಲ್ಲಿ ಮೊದಲ ಕೋವಿಡ್‌ ಪತ್ತೆಯಾದದ್ದು ಡಿಸೆಂಬರ್‌ನಲ್ಲಿ. ಆಗ ಅದು ಕೋವಿಡ್‌-19 ಎಂದು ಗೊತ್ತಿರಲಿಲ್ಲ. ಯಾವುದೋ ಅಜ್ಞಾತ ನ್ಯೂಮೊನಿಯ ವೈರಸ್‌ ಎಂದು ಭಾವಿಸಲಾಗಿತ್ತು. ಕೂಡಲೇ ವುಹಾನ್‌ ನಗರಾಡಳಿತ ವೈದ್ಯಕೀಯ ಸಂಸ್ಥೆಗಳಿಗೆ ಕಟ್ಟೆಚ್ಚರಿಕೆಯನ್ನು ನೀಡಿ ಸನ್ನದ್ಧ ಸ್ಥಿತಿಯಲ್ಲಿರಲು ಸೂಚಿಸಿತ್ತು ಎಂದು ಜಿ ರೊಂಗ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next