Advertisement

ಕೋವಿಡ್‌-19: ಮುಂಜಾಗ್ರತೆ ಅಗತ್ಯ

05:39 AM Jun 04, 2020 | Lakshmi GovindaRaj |

ಚಾಮರಾಜನಗರ: ಕೋವಿಡ್‌-19 ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಜಿಲ್ಲಾಧಿಕಾರಿ  ಡಾ.ಎಂ.ಆರ್‌.ರವಿ ಸೂಚಿಸಿದರು.

Advertisement

ನಗರದಲ್ಲಿ ಜಿಲ್ಲೆಯಲ್ಲಿ ಹೋಟೆಲ್‌, ರೆಸ್ಟೋರೆಂಟ್‌ ಸೇವೆ ಆರಂಭದ ಸಭೆಯಲ್ಲಿ ಮಾತನಾಡಿ, ಕಡ್ಡಾಯವಾಗಿ ಥರ್ಮಲ್‌ ಸ್ಕ್ಯಾನಿಂಗ್‌ ಮಾಡಬೇಕು. ಭೌತಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್  ಧರಿಸಬೇಕು. ಈ ಬಗ್ಗೆ ಸೂಚನಾ ಫ‌ಲಕಗಳನ್ನು ಅಳವಡಿಸಬೇಕು. ಹೋಟೆಲ್‌ ಆಸನದ ಸಾಮರ್ಥ್ಯದ ಶೇ. 50ರಷ್ಟು ಗ್ರಾಹಕರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದರು.

ಏಕಕಾಲದಲ್ಲಿ ಹೆಚ್ಚು ಜನರು ಹೋಟೆಲ್‌ನಲ್ಲಿ  ಕುಳಿತುಕೊಳ್ಳುವಂತಿಲ್ಲ. ಬಹಳ ಮುಖ್ಯವಾಗಿ ಆಡುಗೆ ಮನೆಯಲ್ಲಿ ಸ್ವತ್ಛತೆ ಕಾಪಾಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next