Advertisement

ಚೀನಾದಿಂದ ಹರಡಿದ Covidಗೆ ಜಾಗತಿಕವಾಗಿ ಎಷ್ಟು ಲಕ್ಷ ಕೋಟಿ ನಷ್ಟ,ನಿರುದ್ಯೋಗ ಭೀತಿ; ಮುಂದೇನು?

09:15 AM Apr 10, 2020 | Nagendra Trasi |

ನವದೆಹಲಿ:ಕೋವಿಡ್ 19 ವೈರಸ್ ಭೀತಿ ಜಗತ್ತಿನಾದ್ಯಂತ ಮುಂದುವರಿದಿದೆ. ಸಾವಿನ ಸಂಖ್ಯೆ, ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇದರ ಜತೆಗೆ ಆರ್ಥಿಕ ಹೊಡೆತದ ದೂರಗಾಮಿ ಪರಿಣಾಮವೂ ಗೋಚರಿಸತೊಡಗಿದೆ. ಕೋವಿಡ್ ವೈರಸ್ ನಿಂದ ಕೇವಲ ಮನುಷ್ಯನ ಬದುಕಿನ ಮೇಲೆ ಮಾತ್ರ ಪರಿಣಾಮ ಬೀರಿಲ್ಲ. ಆದರೆ ವಿಶ್ವದ ಇಡೀ ಆರ್ಥಿಕತೆ ಕುಸಿದು ಬಿದ್ದಿದೆ ಎಂದು ಜೀ ನ್ಯೂಸ್ ವರದಿ ವಿಶ್ಲೇಷಿಸಿದೆ.

Advertisement

ಬ್ರಿಟಿಷ್ ಚಿಂತಕರ ಚಾಡಿಯ ಹೆನ್ರೈ ಜಾಕ್ಸನ್ ಸೊಸೈಟಿ ಪ್ರಕಾರ, ಕೋವಿಡ್ ಮಹಾಮಾರಿಯಿಂದಾಗಿ ಜಾಗತಿಕವಾಗಿ 300 ಮಿಲಿಯನ್ ಕೋಟಿ ಆರ್ಥಿಕ ನಷ್ಟ ಸಂಭವಿಸಿದೆ. ಅಲ್ಲದೇ ಭಾರತದಲ್ಲಿ 100 ಲಕ್ಷ ಕೋಟಿಗಿಂತಲೂ ಅಧಿಕ ಆರ್ಥಿಕ ಹೊಡೆತ ಸಂಭವಿಸಿರುವುದಾಗಿ ತಿಳಿಸಿದೆ. ಜಾಗತಿಕವಾಗಿ ಒಟ್ಟು 500 ಲಕ್ಷ ಕೋಟಿ ರೂಪಾಯಿ ಆರ್ಥಿಕ ನಷ್ಟ ಉಂಟಾಗಿದೆ ಎಂದು ವರದಿ ವಿವರಿಸಿದೆ.

ವಿಶ್ವಸಂಸ್ಥೆಯ “ಕೋವಿಡ್ 19 ಮತ್ತು ವರ್ಲ್ಡ್ ಆಫ್ ವರ್ಕ್” ವರದಿ ಪ್ರಕಾರ, ಕೋವಿಡ್ ಮಹಾಮಾರಿಯ ಪರಿಣಾಮದಿಂದ ಜಾಗತಿಕವಾಗಿ 25 ಲಕ್ಷಕ್ಕೂ ಅಧಿಕ ಉದ್ಯೋಗ ನಷ್ಟವಾಗಿದೆ. ವಿಶ್ವಸಂಸ್ಥೆಯ ಟ್ರೇಡ್ ರಿಪೋರ್ಟ್ ಪ್ರಕಾರ, ವಿಶ್ವದ 2/3ರಷ್ಟು ಮಂದಿ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಬದುಕುತ್ತಿದ್ದಾರೆ. ಇವರ ರಕ್ಷಣೆಗಾಗಿ 187 ಲಕ್ಷ ಕೋಟಿ ರೂಪಾಯಿ ನೆರವಿನ ಅಗತ್ಯವಿದೆ ಎಂದು ತಿಳಿಸಿದೆ.

ವಿಶ್ವ ಬ್ಯಾಂಕ್ ಪ್ರಕಾರ ಕೋವಿಡ್ ಜತೆಗೆ ತಲೆದೋರುವ ವಿವಿಧ ರೀತಿಯ ಸಮಸ್ಯೆಗಳಿಂದ ಮಧ್ಯ ಏಷ್ಯಾ ಮತ್ತು ಏಷ್ಯಾ ಫೆಸಿಪಿಕ್ ಪ್ರದೇಶದಲ್ಲಿ 10 ಲಕ್ಷ ಮಂದಿ ಬಡವರಾಗಲಿದ್ದಾರೆ ಎಂದು ಹೇಳಿದೆ.

ಕೋವಿಡ್ ವೈರಸ್ ಮಹಾಮಾರಿ ದಾಳಿಗೂ ಮುನ್ನ ದೇಶದ ಜಿಡಿಪಿ ಅಂದಾಜು ಶೇ.3ರಷ್ಟಿರಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಇದೀಗ ಕೋವಿಡ್ ಹೊಡೆತದಿಂದ ಎಕಾನಮಿಕ್ ಆ್ಯಂಡ್ ಡೆವಲಪ್ ಮೆಂಟ್ ನುಡಿದಿರುವ ಭವಿಷ್ಯದ ಪ್ರಕಾರ, ಜಗತ್ತಿನ ಜಿಡಿಪಿ ದರ 2020ರಲ್ಲಿ ಕೇವಲ ಶೇ.ಒಂದೂವರೆ ಪರ್ಸೆಂಟೇಜ್ ನಷ್ಟಿರಲಿದೆ ಎಂದು ಎಚ್ಚರಿಸಿದೆ. ಅಂದರೆ ಇದರ ಅರ್ಥ ಜಗತ್ತಿನ ಆರ್ಥಿಕ ಸ್ಥಿತಿ ಆಮೆಗತಿಯಲ್ಲಿ ಸಾಗಲಿದೆ ಎಂದು ತಿಳಿಸಿದೆ.

Advertisement

ಚೀನಾದ ಬೇಜವಾಬ್ದಾರಿತನ ಪರಿಣಾಮ:
ಜಗತ್ತಿನ ದೇಶಗಳ ಆರ್ಥಿಕ ನಷ್ಟ, ನಿರುದ್ಯೋಗ ಸಮಸ್ಯೆ ಹೀಗೆ ಹಲವು ಸಮಸ್ಯೆಗಳಿಗೆ ಚೀನಾದ ಬೇಜವಾಬ್ದಾರಿತನವೇ ಕಾರಣ
ಎಂದು ಜೀ ವರದಿ ವಿಶ್ಲೇಷಿಸಿದೆ. ಆದರೆ ಭವಿಷ್ಯದಲ್ಲಿ ಇದಕ್ಕೆ ಬೆಲೆ ಕಟ್ಟಲು ಸಾಧ್ಯವೆ? ಈ ಸೋಂಕಿನಿಂದ ಸಂಭವಿಸಿದ ಜಾಗತಿಕ
ಆರ್ಥಿಕ ಹೊಡೆತದಿಂದ ಚೇತರಿಸಿಕೊಳ್ಳಲು ಸಾಧ್ಯವೇ? ಜಗತ್ತಿನ ಎಲ್ಲಾ ದೇಶಗಳು ತಮ್ಮ ಹಣವನ್ನು ಮಾರುಕಟ್ಟೆಗೆ ಹೂಡಿ ಆರ್ಥಿಕ
ಹಳೆಯನ್ನು ಮೇಲಕ್ಕೆ ಎತ್ತಬೇಕಾಗಿದೆ. ಆದರೆ ಆ ಹಣ ಎಲ್ಲಿಂದ ಬರಬೇಕು? ಎಂದು ಪ್ರಶ್ನಿಸಿದೆ.

ಹೌದು ಆ ಹಣ ನಮ್ಮ ಕಿಸೆಯಿಂದಲೇ ಹೋಗಬೇಕಾಗುತ್ತದೆ. ಹೀಗೆ ಕೋವಿಡ್ ತೆರಿಗೆ ನಿಧಾನಕ್ಕೆ ಚೇತರಿಸಿಕೊಳ್ಳತೊಡಗುತ್ತದೆ. ಈಗ
ಸಂಭವಿಸಿದ ನಷ್ಟದ ಬಗ್ಗೆ ಚೀನಾದ ಬಳಿ ಕೇಳಬಾರದೇಕೆ? ಈ ನಷ್ಟಕ್ಕೆ ಚೀನಾ ದೇಶಕ್ಕೆ ದಂಡ ವಿಧಿಸಬಾರದೇ? ಇದೀಗ
ಜಗತ್ತಿನಾದ್ಯಂತ ದೇಶಗಳು ಈ ಪ್ರಶ್ನೆಗಳನ್ನು ಎತ್ತತೊಡಗಿರುವುದಾಗಿ ವರದಿ ತಿಳಿಸಿದೆ.

ಎಲ್ಲಾ ದೇಶಗಳ ನಷ್ಟ ಚೀನಾ ಭರಿಸಲಿದೆಯಾ?
ಒಂದು ವೇಳೆ ಜಗತ್ತಿನ ಎಲ್ಲಾ ದೇಶಗಳು ತಮಗಾದ ನಷ್ಟದ ಬಿಲ್ ಗಳನ್ನು ಚೀನಾಕ್ಕೆ ಕಳುಹಿಸಿದರೆ ಅದರ ಮೊತ್ತ ಎಷ್ಟಾಗಬಹುದು
ಎಂಬ ಲೆಕ್ಕಾಚಾರ ಇಲ್ಲಿದೆ. ಹೆನ್ರೈ ಜಾಕ್ಸನ್ ಸೊಸೈಟಿಯ ಅಂದಾಜಿನ ಪ್ರಕಾರ, ಒಂದು ವೇಳೆ ಬ್ರಿಟನ್ ಗಾದ ನಷ್ಟದ ಮೊತ್ತ 449
ಬಿಲಿಯನ್ ಡಾಲರ್ (ಅಂದಾಜು 34 ಲಕ್ಷ ಕೋಟಿ), ಅಮೆರಿಕಕ್ಕಾದ ನಷ್ಟದ ಮೊತ್ತ 1,200 ಬಿಲಿಯನ್ ಡಾಲರ್ (ಅಂದಾಜು 90 ಲಕ್ಷ
ಕೋಟಿ) ನಷ್ಟು ಪರಿಹಾರ ಚೀನಾದಿಂದ ಕೇಳಬಹುದು. ಅದೇ ರೀತಿ ಕೆನಡಾ 59 ಬಿಲಿಯನ್ ಡಾಲರ್ (ಅಂದಾಜು 4.5 ಲಕ್ಷ ಕೋಟಿ),
ಆಸ್ಟ್ರೇಲಿಯಾ 37 ಬಿಲಿಯನ್ ಡಾಲರ್ (ಅಂದಾಜು 2 ಲಕ್ಷದ 80 ಸಾವಿರ ಕೋಟಿ) ನಷ್ಟ ಭರಿಸುವಂತೆ ಕೇಳಬಹುದಾಗಿದೆ ಎಂದು
ವಿವರಿಸಿದೆ.

ಈ ದಂಡ ಆಯಾ ದೇಶಗಳಿಗೆ ಸಂಬಂಧಿಸಿದ ಆರ್ಥಿಕ ನಷ್ಟ ಮತ್ತು ಆರ್ಥಿಕ ನೆರವಿನ ಪ್ಯಾಕೇಟ್ ಆಗಿದೆ. ಇದು ಏಪ್ರಿಲ್ 5ರವರೆಗಿನ ಲಾಕ್ ಡೌನ್ ಮಾಡಿರುವುದರಿಂದ ಉಂಟಾದ ನಷ್ಟ. ಆದರೆ ಯಾವುದೇ ದೇಶ ಚೀನಾದಿಂದ ಅಧಿಕೃತವಾಇ ಯಾವುದೇ ಪರಿಹಾರ ಪಡೆಯಲು ಸಾಧ್ಯವಿಲ್ಲ. ಆದರೆ ಇಂತಹದ್ದೊಂದು ಬೇಡಿಕೆ ಬಗ್ಗೆ ಮುಂದೆ ಚರ್ಚೆ ನಡೆಯುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next