Advertisement

5 ದಿನಗಳಲ್ಲಿ ಸೋಂಕಿತರ ಸಂಖ್ಯೆ 1ಮಿಲಿಯನ್ ತಲುಪಲಿದೆ; ಸಾವಿನ ಪ್ರಮಾಣ ಕೂಡ ಏರಿಕೆ: WHO ಕಳವಳ

09:10 AM Apr 03, 2020 | Mithun PG |

ನ್ಯೂಯಾರ್ಕ್: ಜಗತ್ತಿನಾದ್ಯಂತ ಕೋವಿಡ್-19 ಸೋಂಕು ಕ್ಷಿಪ್ರ ಗತಿಯಲ್ಲಿ ಪಸರಿಸುತ್ತಿದ್ದು  ಇನ್ನು 5 ದಿನಗಳಲ್ಲಿ  1 ಮಿಲಿಯನ್ ಜನರು ಸೋಂಕು ಪೀಡಿತರಾಗಲಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ‍್ತೆ ಕಳವಳ ವ್ಯಕ್ತಪಡಿಸಿದೆ.

Advertisement

ಕಳೆದ 5 ವಾರಗಳಿಂದ  ಸೋಂಕಿತರ ಪ್ರಮಾಣದಲ್ಲಿ ಘಾತಕ ಏರಿಕೆಯಾಗಿದ್ದು, ಸಾವನ್ನಪ್ಪಿದವರ ಪ್ರಮಾಣ ಕೂಡ ದ್ವಿಗುಣಗೊಂಡಿದೆ. ಇದೇ ರೀತಿ ಮುಂದುವರೆದರೆ ಮುಂದಿನ 5 ದಿನಗಳಲ್ಲಿ ಸೋಂಕಿತರ ಸಂಖ್ಯೆ 10 ಲಕ್ಷ ತಲುಪಲಿದ್ದು, 50,000ಕ್ಕಿಂತ ಹೆಚ್ಚು ಜನರು ಸಾವನ್ನಪ್ಪುತ್ತಾರೆ ಎಂದು ವಿಶ್ವ ಆರೋಗ್ಯ ಸಂ‍ಸ್ಥೆಯ ಮುಖ್ಯಸ‍್ಥ ಟೆಡ್ರೋಸ್ ಅಧಾನೋಮ್ ಕಳವಳ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಮಾರ್ಚ್ 31 ಮತ್ತು ಏಪ್ರಿಲ್ 1 ರ ನಡುವೆ 437 ಕೋವಿಡ್ -19 ಪ್ರಕರಣ ದಾಖಲಾಗಿದೆ.  ಆ ಮೂಲಕ ಒಟ್ಟಾರೆ ಸೋಂಕು ಪೀಡಿತರ ಪ್ರಮಾಣ 1,834ಕ್ಕೆ ಏರಿಕೆಯಾಗಿದೆ. ಇದರಲ್ಲಿ 1,649 ಜನರಿಗೆ ಸೋಂಕು ದೃಢಪಟ್ಟಿದ್ದು, 42 ಜನರು ಸಾವನ್ನಪ್ಪಿದ‍್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಫ್ರಾನ್ಸ್ ನಲ್ಲಿ  ಈ ಸೋಂಕಿನಿಂದ ಬುಧವಾರ ಏಕಾಏಕಿ 509 ಜನರು ಮೃತರಾಗಿದ್ದಾರೆ.  ಇಲ್ಲಿ ಸೋಂಕಿತರ ಪ್ರಮಾಣ ಕೂಡ 4,032ಕ್ಕೆ ಏರಿಕೆಯಾಗಿದೆ.

ಅಮೆರಿಕಾದಲ್ಲಿ 6 ವಾರಗಳ ಮಗುವೊಂದು ಈ ಮಹಾಮಾರಿ ಸೋಂಕಿಗೆ ಮೃತಪಟ್ಟಿದ್ದು, ಈ ಸಾಂಕ್ರಮಿಕ ರೋಗಕ್ಕೆ ಬಲಿಯಾದ ಅತೀ ಕಿರಿಯ ವ್ಯಕ್ತಿ ಎನಿಸಿಕೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next